ತೂಬಗೆರೆ ಹಾಲು ಉತ್ಪಾದಕ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ

ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ತಾಲ್ಲೊಕು ತೂಬಗೆರೆ ಹಾಲು ಉತ್ಪಾದಕರ ಸಂಘದ 2023-24 ನೇ
ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯು
ಸಂಘದ ಆವರಣದಲ್ಲಿ  ಸಂಘದ ಅಧ್ಯಕ್ಷ ವೆಂಕಟಪ್ಪ ಸಮುಖದಲ್ಲಿ ನಡೆಯಿತು.
ತೂಬಗೆರೆ ಹಾಲು ಉತ್ಪಾದಾಕರ ಸಹಕಾರ ಸಂಘಕ್ಕೆ 12 ಲಕ್ಷ 58 ಸಾವಿರ ಲಾಭಾಂಶ ಬಂದಿದೆ ಎಂದು ಅಧ್ಯಕ್ಷ ವೆಂಕಟಪ್ಪ ಹೇಳಿದರು
 ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ
ಎನ್.ಅರವಿಂದ್ ಹಾಲು ಉತ್ಪಾದಕರು ಹೆಚ್ಚು ಪ್ರಮಾಣದಲ್ಲಿ ಹಾಲು ಉತ್ಪಾದನೆಯಲ್ಲಿ ತೊಡಸಿಕೊಳ್ಳಬೇಕು, ಸಂಘಗಳ ಲಾಭಾಂಶ ಕಡಿಮೆಯಾಗಲು ಗುಣಮಟ್ಟದ ಹಾಲು ಕಾರಣ, ರೈತರು ಸಂಘದಿಂದ ಆನೇಕ ಸೌಲಭ್ಯಗಳನ್ನು ಉಪಯೋಗ ಮಾಡಿಕೊಳ್ಳಬೇಕು, ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ಆಡಳಿತ ಮಂಡಳಿಯ ಕರ್ತವ್ಯ ಇರುತ್ತದೆ. ಹೈನುಗಾರಿಕೆ ಮೂಲಕ ಆದಾಯ ಪಡೆಯುವ ಜನರು ಸ್ವಾವಲಂಬಿಗಳಾಗಿ ಬದುಕುವಂತಾಗಬೇಕು, ಉತ್ತಮ ತಳಿಯ ರಾಸುಗಳನ್ನು ಸಾಕುವ ಜತೆಗೆ ಉತ್ತಮವಾಗಿ ನಿರ್ವಹಣೆ ಮಾಡಬೇಕು, ಮೇವು ಪೋಲಾಗುವುದನ್ನು ತಡೆಯಲು ಉತ್ತಮ ಮೇವನ್ನು ಸಂಸ್ಕರಿಸಿ ಬಳಕೆ ಮಾಡಬೇಕು, ಉತ್ತಮ ಗುಣಮಟ್ಟದ ಹಾಲನ್ನು ಕರೆದು ಸಹಕಾರ ಸಂಘಕ್ಕೆ ಸರಬರಾಜು ಮಾಡಿ ಹೆಚ್ಚಿನ ಆದಾಯಗಳಿಸಿ ಹಾಲು ಉತ್ಪಾದಕರು ಸರಕಾರ ಹಾಗೂ ಸಂಘಗಳಿಂದ ದೊರೆಯುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು
ಉತ್ತಮ ರೀತಿಯಲ್ಲಿ ಕುಟುಂಬ ನಿರ್ವಹಣೆ ಮಾಡಬೇಕು ಎಂದರು.
ಬೆಂಗಳೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ನಾಗರಾಜು ಮಾತನಾಡಿ, ಹಳ್ಳಿ ಜನರ ಮುಖ್ಯ ಕಸುಬು ವ್ಯವಸಾಯ, ಹೆಚ್ಚಾಗಿ ಹಳ್ಳಿಯ ಜನರಿಗೆ ಕೃಷಿಯಿಂದ ಜೀವನ ಮತ್ತು ಹೈನುಗಾರಿಕೆಯನ್ನು ನಂಬಿದ್ದಾರೆ,ರೈತರಿಗೆ ಹೈನುಗಾರಿಕೆಯಿಂದ ಹೆಚ್ಚು ಲಾಭ,ಅದರೆ ಇತ್ತಿಚಿನ ದಿನಗಳಲ್ಲಿ ಹೈನುಗಾರಿಕೆಯನ್ನೇ ನಂಬಿ ಮುಖ್ಯ ಕಸುಬು ಮಾಡಿಕೊಂಡಿದ್ದಾರೆ. ಏಕೆಂದರೆ ತೋಟಗಾರಿಕೆಯನ್ನು ಮಾಡಲು ಹೆಚ್ಚು ಜಮೀನು ಇರಬೇಕು, ಅದರೆ ಹೈನುಗಾರಿಕೆ ಮಾಡಲು ಕಡಿಮೆ ಜಮೀನು ಇದ್ದರೆ ಸಾಕು ಹೈನುಗಾರಿಕೆ
ಮಾಡಬಹುದು, ಇನ್ನು   ಗೋವುಗಳಿಗೆ ಡೈರಿಯಲ್ಲಿ ಸಿಗುವ ಪಶು ಆಹಾರದ ಜೊತೆಗೆ ಹಸಿಮೇವು ಹಾಕುವುದರಿಂದ ಉತ್ತಮ ಗುಣಮಟ್ಟದ ಹಾಲನ್ನು ಹಸುಗಳು ನೀಡುತ್ತವೆ,ಹಾಗೂ ಇನ್ನು ಮುಂದೆ  ಒಕ್ಕೂಟದಿಂದಲೇ ಹಾಲು ಸರಬರಾಜು ಮಾಡುತ್ತಿರುವ ರೈತರಿಗೆ ನೇರವಾಗಿ ಅಕೌಂಟಿಗೆ ಹಣ ಹಾಕಲು ನಿರ್ಧಾರ ಮಾಡಿದ್ದೇವೆ ಎಂದು ಹೇಳಿದರು.
ಈ ವರ್ಷ ತೂಬಗೆರೆ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಹಾಲು ಸರಬರಾಜು ಮಾಡಿರುವ ಸದಸ್ಯರಿಗೆ ಪ್ರೋತ್ಸಾಹ ಧನ ಲೀಟರಿಗೆ 50 ಪೈಸೆ ನಂತೆ  ಎಲ್ಲಾ ಸದಸ್ಯರಿಗೆ  3 ಸಾವಿರ  ಸಂಘದಿಂದ ನೀಡುತ್ತಿದ್ದೇವೆ ಎಂದು ಕಾರ್ಯದರ್ಶಿ ಶ್ರೀನಿವಾಸ್ ಹೇಳಿದರು,
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಎಸ್. ಆರ್. ಮುನಿರಾಜ್,ದೊಡ್ಡಬಳ್ಳಾಪುರ ಶಿಬಿರದ ವಿಸ್ತರಣಾಧಿಕಾರಿ ಸಣ್ಣೇಗೌಡ್ರು, ಸಂಘದ ಉಪಾಧ್ಯಕ್ಷ ರಾಜಗೋಪಾಲ್, ಸಂಘದ ಕಾರ್ಯದರ್ಶಿ ಶ್ರೀನಿವಾಸ, ಇ ನಿರ್ದೇಶಕರಾದ ನರಸಿಂಹಮೂರ್ತಿ, ನಾರಾಯಣಸ್ವಾಮಿ, ಪುಟ್ಟಗೌರಮ್ಮ, ಸರಸ್ವತಿ, ಗಂಗಾದರ. ರಾಮಚಂದ್ರ, ದೇವೇಂದ್ರ ಸ್ವಾಮಿ, ಕೃಷ್ಣಪ್ಪ, ಶಂಕರ್, ನಾರಾಯಣಸ್ವಾಮಿ ಹಾಜರಿದ್ದರು.