ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದೊಡ್ಡಬಳ್ಳಾಪುರ ಸೇರಿ ರಾಜ್ಯದ 12 ಅಧಿಕಾರಿಗಳ ಮನೆಗಳಲ್ಲಿ ಶೋಧ
ದೊಡ್ಡಬಳ್ಳಾಪುರ : ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಕರ್ನಾಟಕ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ್ದು, 12 ಅಧಿಕಾರಿಗಳಿಗೆ ಸೇರಿದ 55 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇಬ್ಬರು, ಬೆಂಗಳೂರು ನಗರದ ಆರು, ಶಿವಮೊಗ್ಗ ಜಿಲ್ಲೆಯಲ್ಲಿ ಇಬ್ಬರು,ಯಾದಗಿರಿ , ತುಮಕೂರಿನಲ್ಲಿ ತಲಾ ಓರ್ವ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ ಮಾಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ರಾಮೇಶ್ವರ ಗ್ರಾಮದ ಪ್ರಾಥಮಿಕ ಪಶು ಆಸ್ಪತ್ರೆಯ ಹಿರಿಯ ಪಶು ಪರೀಕ್ಷಕರಾದ ಆರ್.ಸಿದ್ದಪ್ಪರವರ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ, ಕಳೆದ ಎರಡು ವರ್ಷಗಳಿಂದ ರಾಮೇಶ್ವರದ ಪಶು ಆಸ್ಪತ್ರೆಯಲ್ಲಿ ಪಶು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಮಧುರೆ ಹೋಬಳಿ ನಾಗೇನಹಳ್ಳಿಯಲ್ಲಿ ವಾಸಿದ್ದಾರೆ. ಆದಾಯ ಮೀರಿದ ಅಸ್ತಿ ಗಳಿಕೆ ದೂರಿನ ಹಿನ್ನಲೆ ಆರ್. ಸಿದ್ಧಪ್ಪರವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಲೋಕಾಯುಕ್ತ ದಾಳಿ ನಡೆದ ಸ್ಥಳಗಳು
1. ತುಮಕೂರು- ಕೆಐಎಡಿಬಿ ಇಲಾಖೆ ಆಪರೇಟಿಂಗ್ ಆಫೀಸರ್
2. ಯಾದಗಿರಿ- ಬಲವಂತ್ ಜಿಲ್ಲಾ ಪಂಚಾಯತ್ ಯಾದಗಿರಿ ಪ್ರಾಜೆಕಟ್
3. ಬೆಂಗಳೂರು ಗ್ರಾ- ಆರ್ ಸಿದ್ದಪ್ಪ ಸೀನಿಯರ್ ಪಶು ಪರೀಕ್ಷಕ-ರಾಮೇಶ್ವರ, ದೊಡ್ಡಬಳ್ಳಾಪುರ
4. ಬೆಂಗಳೂರು ಗ್ರಾ- ಕೆ ನರಸಿಂಹ ಮೂರ್ತಿ ಪೌರಾಡಳಿತ ಆಯುಕ್ತ ಹೆಬ್ಬಗೋಡಿ
5. ಬೆಂಗಳೂರು ನಗರ- ಬಿ ವಿ ರಾಜ FDA KDB LAND acquisition
6. ಬೆಂಗಳೂರು ನಗರ- ರಮೇಶ್ ಕುಮಾರ್ ಜಾಯಿಂಟ್ ಕಮಿಷನರ್ ಕಮಷಿಯಲ್ ಟ್ಯಾಕ್ಸ್
7. ಬೆಂಗಳೂರು ನಗರ- ಅಥ್ತಾರ್ ಅಲಿ- ಡೆಪ್ಯೂಟಿ ಕಂಟ್ರೋಲರ್ ಲೀಗಲ್ ಭೂ ವಿಜ್ಞಾನ
8. ಶಿವಮೊಗ್ಗ- ನಾಗೇಶ್ ಬಿ- ಅಧ್ಯಕ್ಷ ಅಂತರಗಂಗೆ ಗ್ರಾ.ಪಂ. ಭದ್ರವತಿ
9. ಶಿವಮೊಗ್ಗ- ಪ್ರಕಾಶ್ ಡೆಪ್ಯೂಟಿ ಡೈರೆಕ್ಟರ್ ಆರ್ಟಿಕಲ್ಚರ್ ಶಿವಮೊಗ್ಗ
10. ಬೆಂಗಳೂರು ನಗರ-ಚೇತನ್ ಕುಮಾರ್ ಕಾರ್ಮಿಕ ಇಲಾಖಾಧಿಕಾರಿ ಮಂಡ್ಯ ವಿಭಾಗ
11. ಬೆಂಗಳೂರು ನಗರ – ಆನಂದ್ ಸಿಎಲ್- ಆಯುಕ್ತ ಮಂಗಳೂರು ಮಹಾನಗರ ಪಾಲೀಕೆ
12. ಬೆಂಗಳೂರ ನಗರ- ಮಂಜುನಾಥ್ TR- ಫಸ್ಟ್ ಡಿವಿಜನ್ ಅಸಿಸ್ಟೆಂಟ್ (FDA) ಬೆಂಗಳೂರು ಉತ್ತರ ವಿಭಾಗ,