ಮರಗಳ ಮಾರಣ ಹೋಮ ಸಾರ್ವಜನಿಕರ ಆಕ್ರೋಶ

ದೊಡ್ಡಬಳ್ಳಾಪುರ :ಪರಿಸರದಲ್ಲಿ ಒಂದು ಗಿಡ ನೆಟ್ಟರೆ ಅದು ದೊಡ್ಡದಾದರೆ ನೂರು ಜನರಿಗೆ ಆಮ್ಲಜನಕ ಕೊಡುತ್ತದೆ ಹಾಗು ಕರೋನಾ ಸಂದರ್ಭದಲ್ಲಿ ಒಂದು ಆಮ್ಲಜನಕ ಸಿಲಿಂಡರ್ ಸಾವಿರಾರು ರೂ ಗಳು ಕೂಟ್ಟರು ಸಿಗದಂತಹ ಸ್ಥಿತಿಯ ಇಂತಹ ಸಂದರ್ಭದಲ್ಲಿ ರಸ್ತೆಯ ಪಕ್ಕದಲ್ಲಿ ಇರುವ ನೂರು ವರ್ಷಗಳ ಇತಿಹಾಸವಿರುವ ಸಾಲು ಹುಣಸೆ ಮರಗಳಿಗೆ ಕೊಡಲಿ ಪೆಟ್ಟು ಹಾಕಿರುವುದರಿಂದ ಪರಿಸರ ಪ್ರೇಮಿಗಳ ವಲಯದಲ್ಲಿ ತಲ್ಲಣ ಉಂಟಾಗಿದೆ

ಲೇಔಟ್ ಅಡ್ಡಿಯಾಗಿದೆ ಹಾಗು ಗ್ರಾಹಕರ ಗಮನ ಸೆಳೆಯುವ ಕಾರಣಕ್ಕೆ ಹುಣಸೆ ಮರಗಳಿಗೆ ಕೊಡಲಿ ಪೆಟ್ಟು ಇಟ್ಟಿರುವವರ ವಿರುದ್ಧ ಪರಿಸರ ಪ್ರೇಮಿಗಳು ಆರೋಪ ವ್ಯಕ್ತ ಪಡಿಸಿದ್ದಾರೆ

ಸಾಮ್ರಾಟ್ ಅಶೋಕನ ಕಾಲದಿಂದ ರಸ್ತೆ ಬದಿಯ ಸಾಲು ಮರಗಳಿಗೆ ಒಂದು ಇತಿಹಾಸವಿದೆ, ಕರ್ನಾಟಕದ ಸಾಲು ಮರದ ತಿಮ್ಮಕ್ಕ ಪ್ರಸಿದ್ಧರಾಗಿದ್ದೆ ಸಾಲು ಮರಗಳಿಂದ, ಅಂತಹದೊಂದು ಸಾಲು ಹುಣಸೆ ಮರಗಳ ಸಾಲು ಎಲ್ಲರ ಗಮನ ಸೆಳೆಯುತ್ತಿದೆ, ರಾಷ್ಟ್ರೀಯ ಹೆದ್ದಾರಿ 648ರ ದಾಬಸ್ ಪೇಟೆ-ದೊಡ್ಡಬಳ್ಳಾಪುರದ ಮಾರ್ಗದ ಹುಣಸೆ ಮರಗಳ ಸಾಲು ನೋಡುಗರ ಕಣ್ಮನ ಸೆಳೆಯುತ್ತಿದ್ದವು. ಆದರೀಗ ಸಾಲು ಹುಣಸೆ ಮರಗಳಿಗೆ ಕೊಡಲಿ ಪೆಟ್ಟು ಬಿದ್ದಿವೆ, ಇದು ಬೇಸರದ ಸಂಗತಿ ಅಂದರೆ. ತಿಳಿದಂತವರೆ ಇಂತಹ ಇತಿಹಾಸ ವಿರುವ ಸಾಲು ಮರಗಳಿಗೆ ಕೊಡಲಿ ಪೆಟ್ಟು ಬಿದ್ದಿದೆ ಎಂಬ ಆರೋಪ ಕೇಳಿ ಬಂದಿದೆ.

ಲಾವಣ್ಯ ಸ್ಕೂಲ್ ಬಳಿ ಅಭಿವೃದ್ಧಿ ಮಾಡಲಾಗುತ್ತಿದೆ. ರಸ್ತೆ ಬದಿಯಲ್ಲಿರುವ ಸಾಲು ಹುಣಸೆ ಮರಗಳು ಲೇಔಟ್ ಅನ್ನು ಮರೆಮಾಚಿದವರು, ಲೇಔಟ್ ಸೌಂದರ್ಯಕ್ಕೆ ಅಡ್ಡಿಯಾಗಿದ್ದ ಹುಣಸೆ ಮರಗಳ ರೆಂಬೆಗಳನ್ನ ಕಟಾವ್ ಮಾಡಲಾಗುತ್ತಿದೆ, ಅರಣ್ಯ ಇಲಾಖೆಯ ಅನುಮತಿಯಂತೆ ನಾಲ್ಕು ಮರಗಳ 10 ರೆಂಬೆಗಳು ಮತ್ತು ಎರಡು ಮರಗಳ ಸಂಪೂರ್ಣ ಕಟಾವ್ ಮಾಡಲು ಅನುಮತಿಯನ್ನ ನೀಡಲಾಗಿದೆ. ಆದರೆ ಸ್ಥಳಕ್ಕೆ ಬಂದು ನೋಡಿದ್ದಾಗ ಅರಣ್ಯ ಇಲಾಖೆಯ ನಿಯಮಗಳನ್ನ ಉಲ್ಲಂಘನೆಯಾಗಿದೆ ಎಂದು ಪರಿಸರ ಪ್ರೇಮಿ ಮತ್ತು ಯುವ ಸಂಚಲನದ ಮುಖಂಡರಾದ ಚಿದಾನಂದ್ ಬೇಸರ ವ್ಯಕ್ತಪಡಿಸಿದ್ದಾರೆ.

ಸಾಲು ಹುಣಸೆ ಮರಗಳ ರೆಂಬೆಗಳ ಕಟಾವ್ ಗೆ ಸಂಬಂಧಿಸಿದಂತೆ ಮಾಧ್ಯಮದೊಂದಿಗೆ ಮಾತನಾಡಿದ ಚಿದಾನಂದ್ ರವರು ಮೆಲ್ನೋಟಕ್ಕೆ ವಿದ್ಯುತ್ ಲೈನ್ ಗಳಿಗೆ ತಾಗುತ್ತವೆ ಎಂಬ ಕಾರಣಕ್ಕೆ ಮರಗಳ ಕಟಾವ್ ಗೆ ಅನುಮತಿ ನೀಡಿಲಾಗಿದೆ, ಆದರೆ ವಿದ್ಯುತ್ ಕೇಬಲ್ ಲೈನ್ ಹಾದು ಹೋಗಿತ್ತು ಇದರಿಂದ ಯಾವುದೇ ರೀತಿಯ ಅವಘಡಗಳು ಸಂಭವಿಸುವುದಿಲ್ಲ, ಮರಗಳ ರೆಂಬೆ ಕಟಾವ್ ವಿಗೂ ಅರಣ್ಯ ಇಲಾಖೆ ಅನುಮತಿ ನೀಡಬಾರದಿತ್ತು, ಅವೈಜ್ಞಾನಿಕವಾಗಿ ಹುಣಸೆ ಮರಗಳ ಒಂದು ಭಾಗದ ರೆಂಬೆಗಳ ಕಟಾವ್ ಮಾಡಲಾಗಿದ್ದು, ಜೋರಾದ ಗಾಳಿ ಬಂದಾಗ ಹುಣಸೆ ಮರಗಳು ರಸ್ತೆಗಳ ಮೇಲೆ ಉರುಳಿ ಬೀಳುವ ಸಾಧ್ಯತೆ ಇದೆ, ಇದರಿಂದ ವಾಹನ ಸವಾರರ ಪ್ರಾಣಕ್ಕೆ ಸಂಚಕಾರ ತರಲಿದೆ ಎಂದರು.

ಪರಿಸರ ಉಳಿಸಿ ಬೆಳೆಸುವ ಜವಾಬ್ದಾರಿಯುತ ಸ್ಥಾನದಲ್ಲಿರುವವರೆ ಹೀಗೆ ಮಾಡಿದರೆ ಹೇಗೆ, ಅರಣ್ಯ ಇಲಾಖೆಯ ಅಧಿಕಾರಿಗಳ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಅನುಮತಿ ನೀಡಿದ್ದಾರೆ, ಜನಪ್ರತಿನಿಧಿಗಳ ಈ ನಡೆ ಗೌರವ ತರುವಂತಹದಲ್ಲ. ತಾಲೂಕಿನಾದ್ಯಂತ ಪರಿಸರ ಪ್ರೇಮಿಗಳ ನಿರಂತರ ಹೋರಾಟದಿಂದ ನೂರಾರು ವರ್ಷಗಳ ಮರಗಿಡಗಳನ್ನು ಉಳಿಸಿ ಬೆಳೆಸಲಾಗಿದೆ. ಅಂತಹ ಮರಗಳನ್ನು ಕಡಿದೀರುವುದರಿಂದ ಸಾರ್ವಜನಿಕರ ವಲಯದಲ್ಲಿ ಆಕ್ರೋಶ ಕಾರಣವಾಗಿದೆ.