ಸರೋಜಿನಿ ಮಹಿಷಿ ವರದಿ ಯತಾವತ್ ಜಾರಿಗೆ ಅಗ್ರಹಿಸಿ ಕನ್ನಡ ಪಕ್ಷ ಪ್ರತಿಭಟನೆ
ದೊಡ್ಡಬಳ್ಳಾಪುರ : ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ವಿಚಾರ ನೆನ್ನೆ ಮೊನ್ನೆಯದಲ್ಲ 60ರ ದಶಕದಿಂದಲೂ ಕನ್ನಡಿಗರಿಗೆ ರಾಜ್ಯ ಸರ್ಕಾರದ ಕೇಂದ್ರ ಸರ್ಕಾರದ ಉದ್ದಿಮೆಗಳಲ್ಲಿ ಮತ್ತು ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್ ಆರೋಪಿಸಿದರು.
ನಗರದ ತಾಲೂಕು ಕಚೇರಿ ಮುಂಭಾಗ ಕನ್ನಡ ಪಕ್ಷದ ವತಿಯಿಂದ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸುಮಾರು 50 ವರ್ಷಗಳಿಂದಲೂ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ವಿಚಾರದಲ್ಲಿ ಬಂದಂತಹ ಎಲ್ಲಾ ಸರ್ಕಾರಗಳು ಕನ್ನಡಿಗರ ಪರ ಧ್ವನಿ ಯಾಗದೆ ಹೊರ ರಾಜ್ಯದಿಂದ ವ್ಯಾಪಾರಕ್ಕಾಗಿ ಬಂದವರ ಆಮಿಷಗಳಿಗೆ ಒಳಗಾಗಿವುದನ್ನು ಕಾಣಬಹುದಾಗಿದೆ.ಡಾಕ್ಟರ್ ಸರೋಜಿನಿ ಮಹಿಸಿ ವರದಿ ಅನ್ವಯ ಯತಾವತ್ತಾಗಿ ಕನ್ನಡಿಗರಿಗೆ ಖಾಸಗಿ ಕಂಪನಿಗಳಲ್ಲೂ ಸಹ ಮೀಸಲಾತಿ ನೀಡಬೇಕೆಂದು ಕನ್ನಡ ಪಕ್ಷ ಒತ್ತಾಯಿಸುತ್ತದೆ ಎಂದರು.
ರಾಜ್ಯ ಕಾರ್ಯದರ್ಶಿಗಳಾದ ಡಿ ಪಿ ಆಂಜನೇಯ ಮಾತನಾಡಿ ಇತ್ತೀಚೆಗೆ ಮಂತ್ರಿ ಪರಿಷತ್ ಸಭೆಯಲ್ಲಿ ಪ್ರಸ್ತಾಪವಾದ ಉದ್ಯೋಗ ಮೀಸಲಾತಿ ವಿಚಾರದಲ್ಲಿ ಕರ್ನಾಟಕದಲ್ಲಿನ ಖಾಸಗಿ ಕಂಪನಿಗಳು ಸರ್ಕಾರದ ಮೇಲೆ ಒತ್ತಡ ಹಾಕುತ್ತಿವೆ ಎಂದು ಹೇಳಲಾಗುತ್ತಿದೆ ಇವರು ಐಟಿ ಬಿಟಿ ಕಂಪನಿಗಳನ್ನು ಪ್ರಾರಂಭಿಸಲು ಕನ್ನಡದ ನೆಲಬೇಕು ಕುಡಿಯಲು ಕಾವೇರಿ ನೀರು ಬೇಕು ಇಲ್ಲಿನ ವಿದ್ಯುತ್ ಬೇಕು ಆದರೆ ಕನ್ನಡಿಗರಿಗೆ ಉದ್ಯೋಗ ನೀಡಲು ಮಾತ್ರ ಮೀನ ಮೇಷ ಎಣಿಸುತ್ತವೆ ಕನ್ನಡಿಗರಿಗೆ ಉದ್ಯೋಗ ನೀಡದಿದ್ದರೆ ಈ ಐಟಿ-ಬೀಟಿ ಕಂಪನಿಗಳು ಕರ್ನಾಟಕದಿಂದ ತೊಲಗಬೇಕೆಂದು ಕನ್ನಡಪಕ್ಷ ಒತ್ತಾಯಿಸುತ್ತದೆ ಎಂದರು.
ಆದರೆ ನುಡಿದಂತೆ ನಡೆಯುತ್ತೇವೆಂದು ಹೇಳುವ ಮಾನ್ಯ ಮುಖ್ಯಮಂತ್ರಿಗಳು ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ವಿಚಾರದಲ್ಲಿ ಸ್ಪಷ್ಟವಾದ ನಿಲುವನ್ನ ಪ್ರಕಟಿಸಬೇಕು ಮತ್ತು ಅದು ಶಾಸನವಾಗ ಬೇಕು ಇದೀಗ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನದಲ್ಲಿ ಈ ವಿಚಾರವನ್ನು ತಾವು ಮಂಡಿಸಿ ಕನ್ನಡಿಗರಿಗೆ ಇದುವರೆಗೂ ಆಗಿರುವ ಅನ್ಯಾಯವನ್ನು ಸರಿಪಡಿಸಿ ಕನ್ನಡಿಗರ ಬಹುದಿನದ ಬೇಡಿಕೆ ಈಡೇರಿಕೆಗೆ ಕನ್ನಡ ಪಕ್ಷ ಒತ್ತಾಯಿಸುತ್ತದೆ ಎಂದರು.

ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಯಾವುದೇ ಒತ್ತಡಕ್ಕೆ ಮಣಿಯದೆ ಕನ್ನಡಿಗರಿಗೆ ಮೀಸಲಾತಿ ನೀಡಲೇಬೇಕೆಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು .
ಈ ಸಂದರ್ಭದಲ್ಲಿ ಕನ್ನಡ ಪಕ್ಷದ ಮೋಹನ್ ಕುಮಾರ್ , ತಾಲೂಕು ಘಟಕದ ಅಧ್ಯಕ್ಷ ಡಿ ವೆಂಕಟೇಶ್, ಉಮಾಶಂಕರ್, ಸಿದ್ದರಾಜು, ಮಂಜುನಾಥ,ನರಸಿಂಹಮೂರ್ತಿ, ಗೋವಿಂದರಾಜು, ಗಂಗಾಧರ ಆರ್, ರಂಗನಾಥ ವಿ ಪರಮೇಶ್. ಮೋಹನ್ ಕುಮಾರ್,ಬೋರೇಗೌಡ,ಚಂದ್ರಣ್ಣ,ಆನಂದ್, ಕಾ.ಜಾ.ಪ,ರಾಜ್ ಕುಮಾರ್,ಅಭಿಮಾನಿಗಳ ಸಂಘ,ಶಿವರಾಜ್ ಕುಮಾರ್ ಸೇನಾ ಸಮಿತಿ ಇನ್ನಿತರ ಸಂಘಟನೆಗಳ ಸದಸ್ಯರು ಹಾಜರಿದ್ದರು.
Post Views: 177