ಉದ್ಯೋಗ ಮೀಸಲಾತಿ ವಿದೇಯಕ ಅಂಗೀಕಾರಕ್ಕೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ
ದೊಡ್ಡಬಳ್ಳಾಪುರ : ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳಲ್ಲಿ ಉದ್ಯೋಗ ಮೀಸಲಾತಿ
ಹಾಗೂ ಡಾ. ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಬೇಕಾಗಿ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನೆಡೆಸಿ ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಉದ್ಯೋಗ ಮೀಸಲಾತಿ ನೀಡುವ ವಿದಾಯಕವನ್ನು ಅಂಗೀಕಾರ ಮಾಡಿದ 12 ಗಂಟೆಯಲ್ಲಿ ಉದ್ದಿಮೆದಾರರ ಒತ್ತಡಕ್ಕೆ ಮಣಿದು ತಡೆ ಹಿಡಿದಿರುವುದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಈ ಕೂಡಲೇ ಮುಖ್ಯಮಂತ್ರಿಗಳು ವಿದಾಯಕವನ್ನು ಅಂಗೀಕರಿಸಿ ಜಾರಿಗೆ ತರಬೇಕಿದೆ ಎಂದು ಕನ್ನಡಪರ ಸಂಘಟನೆಗಳು ಒಕ್ಕೂಟದ ಜಿಲ್ಲಾಧ್ಯಕ್ಷ ಎ. ನಂಜಪ್ಪ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಾನ್ಯ ಮುಖ್ಯಮಂತ್ರಿಗಳಲ್ಲಿ ಕೇಳಿಕೊಳ್ಳುವುದೇನೆಂದರೆ 40 ವರ್ಷಗಳ ಇತಿಹಾಸವಿರುವ ಡಾ. ಸರೋಜಿನಿ ಮಹಿಷಿ ವರದಿಯನ್ನು
ಜಾರಿಗೊಳಿಸಬೇಕಾಗಿ ಒತ್ತಾಯಿಸುತ್ತೇವೆ ಸರ್ಕಾರವು ಈ ಕುರಿತು ಸಕಾರಾತ್ಮಕವಾಗಿ ಕ್ರಮ ಕೈಗೊಳ್ಳದಿದ್ದರೆ ಕನ್ನಡಿಗರ ಶಕ್ತಿಪ್ರದರ್ಶನವನ್ನು ಕಂಪನಿಗಳ ಮಾಲೀಕರ ಮೇಲೆ ತೋರಿಸಬೇಕಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷರಾದ ನಾಗರಾಜು. ಕಾರ್ಮಿಕ ಘಟಕದ ಅಧ್ಯಕ್ಷರಾದ ಗುರುಪ್ರಸಾದ್, ನಗರಾಧ್ಯಕ್ಷ ನಗರ ತರುಣ್ ಸರ್ಜಾ, ಗುಣಶೇಖರ್, ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷರಾದ ಹರಿ ಕುಮಾರ್,ಮಹಿಳಾ ಮುಖಂಡರುಗಳಾದ ಕುಮುದಾ, ಶಶಿಕಲಾ, ಒಕ್ಕೂಟದ ಮುಖಂಡರುಗಳಾದ ವೆಂಕಟೇಶ್, ಉಪಾಧ್ಯಕ್ಷರಾದ ನಯಾಜ್ ಖಾನ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.