ಮೀತಿ ಮೀರಿದ ಕಾಡುಪ್ರಾಣಿಗಳ ಉಪಟಳದಿಂದ  ರಕ್ಷಣೆಗಾಗಿ  ಅರಣ್ಯ ಇಲಾಖೆಗೆ ಗ್ರಾಮಸ್ಥರ ಮೊರೆ
ದೊಡ್ಡಬಳ್ಳಾಪುರ:ದಿನ ದಿನಕ್ಕೆ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದ್ದು ಕಾಡಲ್ಲಿ ವಾಸಮಾಡುವ ಕಾಡುಪ್ರಾಣಿಗಳು ಗ್ರಾಮ ಹಾಗು ನಗರದ ಕಡೆ ಮುಖ ಮಾಡುತ್ತಿವೆ ಹಾಗಾಗಿ ತಾಲ್ಲೂಕಿನಾದ್ಯಂತ ಮಿತಿ ಮಿರಿದ ಚಿರತೆ ದಾಳಿಗಳಿಂದ ಮೂಕ ಪ್ರಾಣಿಗಳು ಬಲಿಯಾಗುತ್ತಿದ್ದು ಅರಣ್ಯ ಸಿಬ್ಬಂದಿ ಕಂಡರು ಕಾಣದಂತೆ ಕಛೇರಿಯಲ್ಲಿ ಕುಳಿತು ಕಾಲ ಕಳೆಯುತ್ತಿದ್ದಾರೆ
ದೊಡ್ಡಬಳ್ಳಾಪುರ ಗ್ರಾಮಾಂತರ ದೊಡ್ಡಬೆಳವಂಗಲ ಹೋಬಳಿ ಹಣಬೆ ಗ್ರಾಮ ಪಂಚಾಯಿತಿಯ ಹುಲುಕಡಿ  ಬೆಟ್ಟದ ತಪ್ಪಲಿನ ಮಾಡೇಶ್ವರ ಗ್ರಾಮದಲ್ಲಿ ಚಿರತೆಯ ದಾಳಿಗೆ ಹಸುವೂಂದು ಬಲಿಯಾಗಿದ್ದು ಇದಕ್ಕೂ ಮುಂಚೆ ಸಾಸಲು ಹೋಬಳಿಯಲ್ಲಿ ಗುಂಡಪ್ಪ ನಾಯಕನಹಳ್ಳಿಯಲ್ಲಿ   ಜು 24 ರಂದು ಮೇಕೆ ಬಲಿಯಾಗಿರುವ ಘಟನೆ ನೆಡೆದಿತ್ತು. ಈ ಘಟನೆಯಿಂದ ಗ್ರಾಮಾಂತರ ಭಾಗದಲ್ಲಿ ಜನರು ರಾತ್ರಿಯ ಸಮಯದಲ್ಲಿ ಹೊರಗೆ ಬರಲು ಆಗುತ್ತಿಲ್ಲ ಮತ್ತು   ಹಗಲಿನ ವೇಳೆಯಲ್ಲಿ ಕಾಡು ಪ್ರಾಣಿಗಳ ಉಪಟಳದಿಂದ  ಹೊಲ ಗದ್ದೆಗಳಿಗೆ ಹೋಗಿ ಕೃಷಿ ಚಟುವಟಿಕೆ  ಹಾಗು ಹೈನುಗಾರಿಕೆ ಮಾಡಲು ರೈತರಿಗೆ ತುಂಬಾ ತೊಂದರೆ ಹಾಗು  ಭಯದ ವಾತಾವರಣ ಉಂಟಾಗಿದ್ದು  ಅರಣ್ಯ ಇಲಾಖೆಯ ಮೊರೆ ಹೋಗಿದ್ದಾರೆ.
ಕಾಡು ಪ್ರಾಣಿಗಳ ದಾಳಿಗೆ ಸಾಕು ಪ್ರಾಣಿ ಕಳೆದುಕೊಂಡವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು.ಮತ್ತು ನಿರ್ಭೀತಿಯಿಂದ ಹೂಲಗದ್ದೆ ಗಳಲ್ಲಿ ಕೃಷಿ ಕೆಲಸ ಮಾಡಲು ಚಿರತೆಗಳನ್ನು ಹಿಡಿದು ಭೋನುಗಳನ್ನು ಅಳವಡಿಸಿ ಅಗತ್ಯ ಕ್ರಮ ಕೈ ಕೊಂಡು ಮುಂದಿನ ದಿನಗಳಲ್ಲಿ ಯಾವ ಹಾನಿಯಾಗದಂತೆ ಸಹಕಾರ ನೀಡಿದರೆ ಸಾಕು ಎಂದು ಗ್ರಾಮದ ಜನರು ಸರ್ಕಾರವನ್ನು ಒತ್ತಾಯಿಸಿದ್ದಾರೆ.