ಭಾರತದ ಅಭಿವೃದ್ಧಿಗೆ ಯುವಕರ ಕೊಡುಗೆ ಅಪಾರ– ಜಿ. ಟಿ. ಗಿರೀಶ್
ದೊಡ್ಡಬಳ್ಳಾಪುರ:ಯುವಶಕ್ತಿ ದೇಶದ ಅಸ್ತಿ ಒಂದು ದೇಶದ ಅಭಿವೃದ್ಧಿಯಲ್ಲಿ ಯುವಕರ ಕೊಡುಗೆ ಅತ್ಯಂತ ಅಪಾರ ಹಾಗೂ ಮಹತ್ವದ್ದಾಗಿದೆ ಎಂದು ಲಯನ್ಸ್ ಕ್ಲಬ್ 317 ಜಿಲ್ಲಾ ಘಟಕದ ಸಂಯೋಜಕ ಜಿ.ಟಿ ಗಿರೀಶ್ ಹೇಳಿದರು.
ದೇವರಾಜ್ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯ ಹಾಗೂ ಲಯನ್ಸ್ ಕ್ಲಬ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳು
ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದ ಜನ ಸಂಖ್ಯೆಯಲ್ಲಿ ಬಹುಪಾಲು ಯುವಕರಾಗಿದ್ದರೆ, ಇಂದು ಭಾರತದ ಅಭಿವೃದ್ಧಿಗೆ ಇಲ್ಲಿನ ಯುವಕರು ಪ್ರಮುಖ ಕಾರಣ, ಇಂದಿನ ಯುವಕರೇ ನಾಳಿನ ನಾಯಕರು. ಹಾಗಾಗಿ ಯುವಕರು ತಮ್ಮ ಸುತ್ತಮುತ್ತಲಿನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಜ್ಞಾನವನ್ನು ಹೊಂದಿರಬೇಕು ಎಂದರು.
ಲಯನ್ಸ್ ಕ್ಲಬ್ ದೊಡ್ಡಬಳ್ಳಾಪುರ ಆರ್. ಎಲ್ ಜಾಲಪ್ಪ ಕ್ಯಾಂಪಸ್ ನ ಅಧ್ಯಕ್ಷರಾದ ಜೆ. ಆರ್ ರಾಕೇಶ್ ಮಾತನಾಡಿ ಡಿಜಿಟಲ್ ಯುಗವನ್ನು ದಾಟಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಯುಗದತ್ತ ಸಾಗಿರುವ ಯುವಕರಿಗೆ ಯಶಸ್ಸಿನತ್ತ ಸಾಗಲು ಉತ್ತಮ ಅವಕಾಶಗಳು ಇವೆ, ಯುವಕರ ಉತ್ತಮ ಕೆಲಸ ಕಾರ್ಯಗಳಿಂದ ದೇಶವು ಪ್ರಗತಿಯತ್ತ ಸಾಗುತ್ತದೆ, ಯುವಕರು ಮಾಡುವ ಅತ್ಯುತ್ತಮ ಕೆಲಸ, ಕಾರ್ಯಗಳು, ಅವರ ಆವಿಷ್ಕಾರಗಳು ದೇಶ ವಿದೇಶವನ್ನು ತಲುಪಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಆರ್ ನಾಗರಾಜ್, ಶ್ರೀ ದೇವರಾಜ ಅರಸ್ ಪ್ರಥಮ ದರ್ಜೆ ಸಂಜೆ ಕಾಲೇಜಿನ ಪ್ರಾಂಶುಪಾಲ ಡಾ. ಎಂ ಚಿಕ್ಕಣ್ಣ,ಉಪ ಪ್ರಾಂಶುಪಾಲ ಕೆ. ದಕ್ಷಿಣ ಮೂರ್ತಿ,ಲಯನ್ಸ್ ಕ್ಲಬ್ ನ ಕಾರ್ಯದರ್ಶಿಗಳು ನಾಗರಾಜು, ಖಜಾಂಚಿ ರವಿಕುಮಾರ್, ಕಾಲೇಜಿನ ಮ್ಯಾನೇಜರ್ ಶ್ರೀನಿವಾಸ್, ಎನ್.ಎಸ್.ಎಸ್ ಅಧಿಕಾರಿ ಲಕ್ಷ್ಮೀಶ, ಪ್ರಾಧ್ಯಾಪಕರಾದ ಶ್ವೇತಾ, ಮಧುಶ್ರೀ, ಬಾಬುಸಾಬಿ ಮತ್ತಿತರರು ಹಾಜರಿದ್ದರು.