ವೈದ್ಯರ ಸಲಹೆ ಚೀಟಿ ಇಲ್ಲದೆ ಯಾವುದೇ ಔಷದ ಕೊಡುವುದಿಲ್ಲಎನ್. ಸಿ. ಪಟಾಲಯ್ಯ

ದೊಡ್ಡಬಳ್ಳಾಪುರ ಆಗಸ್ಟ್  : ಇತ್ತೀಚಿನ ದಿನಗಳಲ್ಲಿ ಕೆಲ ಔಷಧಿ ಕೇಂದ್ರಗಳಲ್ಲಿ ವೈದ್ಯರ ಸಲಹೆ ಚೀಟಿ ಇಲ್ಲದೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದ್ದು. ಯಾವುದೇ ಕಾರಣಕ್ಕೂ ತಾಲೂಕಿನ ಔಷಧಿ ಮಳಿಗೆಗಳ ಮಾಲೀಕರು ವೈದ್ಯರ ಸಲಹೆ ಚೀಟಿ ಇಲ್ಲದೆ ಯಾವುದೇ ಔಷಧಿಗಳನ್ನು ನೀಡಬಾರದೆಂದು ದೊಡ್ಡಬಳ್ಳಾಪುರ ತಾಲೂಕು ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷ ಏನ್ ಸಿ ಪಟಾಲಯ್ಯ ತಿಳಿಸಿದರು.

ನಗರದ ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಔಷಧಿ ವ್ಯಾಪಾರಿಗಳು ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಜೀವನ ಸಾಗಿಸುತಿದ್ದೇವೆ, ಆದರೆ ಏನ್ ಡಿ ಪಿ ಎಸ್ ,ಅಮಲುಜಾರಿತ ಔಷಧಿಗಳು, ಎಂ ಟಿ ಪಿಲ್ ಯಾವುದೇ ಕಾರಣಕ್ಕೂ ನೀಡುವುದಿಲ್ಲ, ಅಂತೆಯೇ ಆಂಟಿಬಯೋಟಿಕ್ ಔಷಧಿಗಳನ್ನು ಇತ್ತೀಚಿನ ದಿನಗಳಲ್ಲಿ ಕೆಲವು ಔಷಧಿ ಮಳಿಗೆಗಳಲ್ಲಿ ವೈದ್ಯರ ಸಲಹೆ ಚೀಟಿ ಇಲ್ಲದೆ ಔಷಧಿಗಳು ವಿತರಣೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು , ಈ ಕುರಿತಂತೆ ತಾಲೂಕಿನ ಔಷಧಿ ಮಳಿಗೆಗಳ ಮಾಲೀಕರಿಗೆ ಮಾಹಿತಿ ರವಾನೆ ಮಾಡುವ ಉದ್ದೇಶದಿಂದ ಈ ಸುದ್ದಿಗೋಷ್ಠಿ ಆಯೋಜನೆ ಮಾಡಲಾಗಿದೆ. ತಾಲೂಕಿನ ಯಾವುದೇ ಔಷಧಿ ಮಳಿಗೆಯ ಮಾಲೀಕರು ಸೂಕ್ತ ವೈದ್ಯರ ಸಲಹೆ ಚೀಟಿ ಇಲ್ಲದೆ ಯಾವುದೇ ಕಾರಣಕ್ಕೂ ಔಷಧಿಗಳನ್ನು ವಿತರಣೆ ಮಾಡುವಂತಿಲ್ಲ , ವೈದ್ಯರ ಸಲಹೆ ಚೀಟಿ ಪಡೆಯದೆ ಔಷಧಿ ವಿತರಣೆ ಮಾಡಿದ ಪ್ರಕರಣಗಳಲ್ಲಿ ಅಂಗಡಿ ಮಾಲೀಕರೇ ನೇರಹೊಣೆಯಾಗಿರುತ್ತಾರೆ. ಅಂತಹ ಪ್ರಕರಣಗಳಿಗೆ ನಮ್ಮ ಸಂಘವು ಬೆಂಬಲ ನೀಡುವುದಿಲ್ಲ ಎಂದರು .

ಔಷಧಿಗಳ ವಿತರಣೆ ಕುರಿತಂತೆ ಪ್ರತಿ ಮಾಸಿಕವಾಗಿ ಸಭೆ ನಡೆಸಿ ಔಷಧಿ ಮಳಿಗೆಗಳ ಮಾಲೀಕರಿಗೆ ಸಂಘದ ವತಿಯಿಂದ ತಿಳುವಳಿಕೆ ನೀಡಲಾಗುತ್ತಿದೆ. ನಮ್ಮಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗೆ ಅವಕಾಶವಿಲ್ಲ ಎಂದರು.

ಸಂಘದ ಗೌರವಾಧ್ಯಕ್ಷ ಸಿದ್ದಣ್ಣ ಮಾತನಾಡಿ ನಮ್ಮ ತಾಲೂಕಿನಲ್ಲಿ ಯಾವುದೇ ಔಷಧಿ ಬಳಕೆಗಳಲ್ಲಿ ವೈದ್ಯರ ಚೀಟಿ ಪಡೆಯದೆ ಔಷಧಿ ವಿತರಣೆ ಮಾಡಲಾಗುತ್ತಿಲ್ಲ, ಔಷಧಿ ಮಳಿಗೆ ಮಾಲೀಕರು ಎಚ್ಚರ ತಪ್ಪಿದಲ್ಲಿ ಅನಾಹುತ ಖಂಡಿತ, ಏನ್ ಡಿ ಪಿ ಎಲ್,ಅಮಲುಜಾರಿತ ಔಷಧಿಗಳು, ಎಂ ಟಿ ಪಿಎಲ್, ಆಂಟಿಬಯೋಟಿಕ್ ಗಳ ಕುರಿತಂತೆ ಎಚ್ಚರಿಕೆ ಅತ್ಯವಶ್ಯಕ , ವೈದ್ಯರ ಸಲಹೆ ಚೀಟಿ ಇಲ್ಲದೆ ಯಾವುದೇ ಕಾರಣಕ್ಕೂ ಔಷಧಿ ವಿತರಣೆ ಸಲ್ಲದು, ನಮ್ಮ ತಾಲೂಕಿನಲ್ಲಿ ಅಮಲುಜಾರಿತ ಔಷಧಿಗಳ ವಿತರಣೆ ಮಾಡದ ಕಾರಣ ಕೆಲವು ಮಾದಕವ್ಯಾಸನಿಗಳು(ಯುವಕರು) ಬೇರೆ ತಾಲೂಕಿನಿಂದ ಔಷಧಿ ಪಡೆಯುತ್ತಿದ್ದಾರೆ ಅಲ್ಲಿಯೂ ಸಹ ವೈದ್ಯರ ಸಲಹೆ ಚೀಟಿ ಇಲ್ಲದೆ ಔಷಧಿ ವಿತರಣೆ ಮಾಡಬಾರದು ಎಂದು ಈಗಾಗಲೇ ತಿಳಿಸಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಕೆ ಎಲ್ ಉಮೇಶ್, ಅಧ್ಯಕ್ಷರದ ಬಿಎಸ್ ಶಿವಶಂಕರ್, ಕಾರ್ಯದರ್ಶಿ ಟಿಡಿ ಶಾಮ್ ಸುಂದರ್, ಖಜಾಂಚಿ ರಹಿಮ್ ಖಾನ್, ನಿರ್ದೇಶಕರಾದ ಹೇಮಂತ್ ಕುಮಾರ್, ಚಂದ್ರಣ್ಣ, ಡಿಸಿ ಶಶಿಧರ್,ಸುರೇಶ್, ಜಗನ್ನಾಥ್,ರಜನೀಶ್, ಪ್ರಕಾಶ್,ಮುರುಳಿ ಅಭಿಜಿತ್ ಸೇರಿದಂತೆ ತಾಲೂಕು ಔಷದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.