ಸರ್ಕಾರಿ ನೌಕರರಿಗೆ ಹಳದಿ ಕೆಂಪು ಕೊರಳು ದಾರ ಕಡ್ಡಾಯದ ಸರ್ಕಾರದ ನಿರ್ಧಾರಕ್ಕೆ ಕರವೇ ಸ್ವಾಗತಾ ರ್ಹ–ಪುರುಷೋತ್ತಮ್ ಗೌಡ
ದೊಡ್ಡಬಳ್ಳಾಪುರ:ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಗೊಂಡು 50ವರ್ಷಗಳು ಕಳೆದಿವೆ. ಈ ಸುಸಂದರ್ಭದಲ್ಲಿ ಕರ್ನಾಟಕ ಸರ್ಕಾರ,, ಹೆಸರಾಯಿತು ಕರ್ನಾಟಕ… ಉಸಿರಾಗಲಿ ಕನ್ನಡ ಎಂಬ ಅಭಿಯಾನದಡಿ ಎಲ್ಲಾ ರಾಜ್ಯ ಸರ್ಕಾರಿ ನೌಕರರು ಕನ್ನಡ ದ್ವಜದ ಹೆಗ್ಗುರುತಾದ ಹಳದಿ ಕೆಂಪು ಬಣ್ಣಗಳನ್ನು ಒಳಗೊಂಡಿರುವ ಕೊರಳುದಾರ ಟ್ಯಾಗ್ ಹೊಂದಿದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಬೇಕೆಂದು ಸರ್ಕಾರ ನಿರ್ಣಯಿಸಿದೆ. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಸರ್ಕಾರದ ಅದೀನ ಕಾರ್ಯದರ್ಶಿ ಬಿ. ಕೆ. ಸಂದೀಪ್ ರವರು ಆದೇಶ ಹೊರಡಿಸಿದ್ದಾರೆ. ಇದರ ಅನ್ವಯ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ನಿಗಮ ಮಂಡಳಿಗಳು, ನಿರ್ದೇಶನಾಲಯ, ಆಯುಕ್ತಾಲಯ ಇತ್ಯಾದಿ ಸರ್ಕಾರಿ ಮತ್ತು ಸರ್ಕಾರಿ ಸ್ವಾಮ್ಯದ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಅಧಿಕಾರಿ ಸಿಬ್ಬಂದಿ, ತಮ್ಮ ಇಲಾಖೆ ಸಂಸ್ಥೆಯ ಗುರುತಿನ ಚೀಟಿಯನ್ನು ಧರಿಸಲು ಅನುವಾಗುವಂತೆ ಹಳದಿ ಕೆಂಪು ಬಣ್ಣದ ಕೊರಳು ಪಟ್ಟಿಯನ್ನು ಒದಗಿಸಲು ಎಲ್ಲಾ ಇಲಾಖೆ, ಸಂಸ್ಥೆಗಳು ಪ್ರಾಧಿಕಾರಗಳು ಕೂಡಲೇ ನಿಯಮಗಳನುಸಾರ ಕ್ರಮ ವಹಿಸುವಂತೆ ಸಂದೀಪ್ ತಿಳಿಸಿದ್ದಾರೆ.
ಹಳದಿ ಕೆಂಪು ಬಣ್ಣದ ಕೊರಳು ದಾರ ಕಡ್ಡಾಯದ ಸರ್ಕಾರದ ಆದೇಶಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ಪ್ರತಿಕ್ರಿಯಿಸಿ ಸರ್ಕಾರದ ಈ ನಿರ್ಧಾರ ಸ್ವಾಗತರ್ಹವಾದುದು. ಹಳದಿ ಕೆಂಪು ಬಣ್ಣದ ಕೊರಳು ದಾರ ಸರ್ಕಾರಿ ನೌಕರರು ಧರಿಸುವುದರಿಂದ ಸದಾ ಕನ್ನಡದ ಬಗ್ಗೆ ಪ್ರಜ್ಞೆ ಮೂಡುತ್ತದೆ. ಜೊತೆಗೆ ಭಾಷೆ ನಾಡಿನ ಬಗ್ಗೆ ಅಭಿಮಾನ
ಹೆಚ್ಚುತ್ತದೆ. ರಾಜ್ಯಕ್ಕೆ ವಲಸಿಗರು ಉದ್ಯೋಗ, ವ್ಯಾಪಾರಕ್ಕಾಗಿಲಗ್ಗೆ ಇಡುತ್ತಿರುವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಈ ನಿರ್ಧಾರವನ್ನು ಕರ್ನಾಟಕ ರಕ್ಷಣಾ ವೇದಿಕೆ ಮುಕ್ತ ಮನಸಿನಿಂದ ಸ್ವಾಗತಿಸುತ್ತದೆ. ಹಾಗಾಗಿ ಸರ್ಕಾರ ವನ್ನು ಕರವೇ ಅಭಿನಂದಿಸುತ್ತದೆ ಎಂದು ಪುರುಷೋತ್ತಮ್ ಗೌಡ ಹೇಳಿದ್ದಾರೆ.