ಮಾತನಾಡುವಾಗ ಜಾಗರೂಕತೆಯಿಂದ ಮಾತನಾಡುವುದು ಮುಖ್ಯವಾಗಿ ರುತ್ತದೆ–ಕೆ-ವೆಂಕಟರಾಜು
ಚಾಮರಾಜನಗರ:ಪ್ರತಿಯೊಬ್ಬ ಮನುಷ್ಯನು ಮಾತನಾಡುವಾಗ ಜಾಗರೂಕತೆಯಿಂದ ಮಾತನಾಡುವುದು ಮುಖ್ಯವಾಗಿರುತ್ತದೆ ಎಂದು ವಿಚಾರವಾದಿಗಳು ಹಾಗೂ ರಂಗಕರ್ಮಿಗಳಾದ ಕೆ.ವೆಂಕಟರಾಜು ತಿಳಿಸಿದರು.
ಚಾಮರಾಜನಗರ ನಗರದ ಶ್ರೀ ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ ಚಾಮರಾಜನಗರ ಹಾಗೂ ರಂಗದೀವಿಗೆ ಸಹಯೋಗದಲ್ಲಿ ನಡೆದ ಜಾಗರೂಕತೆಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾತು ಮತ್ತು ಭಾಷೆ ಒಂದಕ್ಕೊಂದು ಪರಸ್ಪರ ಸಂಬಂಧ ಹೊಂದಿರುತ್ತದೆ. ದೇಶವನ್ನು ಭ್ರಷ್ಟಾಚಾರ ಮುಕ್ತ ಮಾಡಲು ಸಾಧ್ಯವಿಲ್ಲ ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಕೆಲಸಗಳನ್ನು ಬದ್ಧತೆಯಿಂದ ಎಂದು ತಿಳಿಸಿದರು.
ರಂಗದೀವಿಗೆ ಜಿಲ್ಲಾಧ್ಯಕ್ಷ ಕಲೆ ನಟರಾಜು ಅವರು ಪ್ರಾಸ್ತಾವಿಕ ನುಡಿ ನುಡಿದರು.
ಸಿದ್ದಾರ್ಥ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ರಂಗಸ್ವಾಮಿ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಂ.ಮಹದೇವಸ್ವಾಮಿ, ಎಸ್.ಪಿ ಬಾಲಸುಬ್ರಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆಯ ಜಿಲ್ಲಾಧ್ಯಕ್ಷ ಶಿವಣ್ಣ ಮಂಗಲ ಹೊಸೂರು, ಪ್ರಧಾನ ಕಾರ್ಯದರ್ಶಿ ಚಂದಕವಾಡಿ ಡಿ.ರಾಜಣ್ಣ, ರಂಗನಿರ್ದೇಶಕ ಕಿರಣ್ ಗಿಗಿ೯ ಇದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ