ಪ್ರಬುದ್ಧ ಭಾರತದ ರೂವಾರಿಗಳೆಂದರೆ ಮಕ್ಕಳು- ಪ್ರಾಂಶುಪಾಲ ಲಾಜರಸ್.

ಹನೂರು: ಪಟ್ಟಣದಲ್ಲಿರುವ ಜಿ ವಿ ಗೌಡ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಲಾಜರಸ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳ ದಿನಾಚರಣೆಯನ್ನು ಪ್ರಥಮ ಪ್ರಧಾನಮಂತ್ರಿ ಜವಹರಲಾಲ್ ನೆಹರು ರವರ ನೆನಪಿಗೆ ಆಚರಿಸಲಾಗುತ್ತದೆ.
ನೆಹರು ರವರಿಗೆ ಮಕ್ಕಳು ಎಂದರೆ ಅಪಾರ ಪ್ರೀತಿ ಹಾಗೂ ಮಕ್ಕಳು ಪ್ರಬುದ್ಧ ಭಾರತದ ರೂವಾರಿಗಳಾಗಿದ್ದಾರೆ.
ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವುದರ ಜೊತೆಗೆ ಕಾನೂನಿನ ಬಗ್ಗೆ ಪೋಷಕರು ತಿಳಿದುಕೊಳ್ಳಬೇಕು. ಅಪೌಷ್ಟಿಕತೆಗೆ ತುತ್ತಾಗಿರುವ ಮಕ್ಕಳನ್ನು ಗುರುತಿಸಿ ಉತ್ತಮ ಆರೋಗ್ಯ ರೂಪಿಸುವಂತಹ ಕಾರ್ಯವನ್ನು ಮಾಡಬೇಕಾಗಿದೆ ಎಂದರು
ಮಕ್ಕಳ ಹಕ್ಕುಗಳ ರಕ್ಷಣೆಗೋಸ್ಕರ ವಿಶ್ವಸಂಸ್ಥೆಯು ಅಪಾರವಾದ ಕಾಳಜಿಯನ್ನು ವಹಿಸುತ್ತದೆ.

ಗ್ರಾಮೀಣ ಮಕ್ಕಳು ಅನೇಕ ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ.

ಮಕ್ಕಳೇ ಪ್ರಪಂಚದ ಆಸ್ತಿಯಾಗಿದ್ದಾರೆಂದು ತಿಳಿಸಿದರು.

ವಿಧ್ಯಾರ್ಥಿಗಳಿಗೆ ಅನೇಕ ಕ್ರೀಡೆಗಳನ್ನು ಆಡಿಸಿ ಬಹುಮಾನವನ್ನು ವಿತರಿಸಲಾಯಿತು .

ಈ ಸಂದರ್ಭದಲ್ಲಿ ಉಪನ್ಯಾಸಕರಾದ ನಂಜುಂಡಯ್ಯ, ಶಿವಕುಮಾರ್, ಕುಸುಮ, ಸವಿತ, ಫರ್ಹಾನ, ಹರೀಶ್, ಮಹೇಂದ್ರ, ಚೈತ್ರಾ, ನಂದಿನಿ, ರಕ್ಷಿತ, ಸಹನ,ನರ್ಮದಾ, ಸುಮತಿ,ದೇವಿಕಾ, ಆಡಳಿತ ಸಿಬ್ಬಂಧಿಗಳಾದ ಪ್ರಭು, ನಾಗರಾಜು, ಮೂರ್ತಿ. ಹಾಗೂ ವಿದ್ಯಾರ್ಥಿ ಹಾಜರಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ