ಒತ್ತುವರಿಯಾಗಿದ್ದ ಗೋಮಾಳ ಜಾಗ ಸರ್ಕಾರದ ವಶಕ್ಕೆ
ದೊಡ್ಡಬಳ್ಳಾಪುರ:ತಾಲೂಕಿನ,ತೂಬಗೆರೆ ಹೋಬಳಿ ಕಾರನಾಳ ಗ್ರಾಮದಲ್ಲಿ ಸರ್ಕಾರಿ ಗೋಮಾಳ ಜಾಗವನ್ನ 5 ಮಂದಿ ಒತ್ತುವರಿ ಮಾಡಿದ್ರು, ಲೋಕಾಯುಕ್ತರ ಆದೇಶದ ಮೇರೆಗೆ ಕಾರ್ಯಾಚರಣೆ ನಡೆಸಿದ ಕಂದಾಯ ಇಲಾಖೆಯ ಅಧಿಕಾರಿಗಳು ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸಿದ್ದಾರೆ, ಸುಮಾರು 70 ಲಕ್ಷ ಮೌಲ್ಯದ ಜಾಗವನ್ನ ಸರ್ಕಾರದ ವಶಕ್ಕೆ ಪಡೆದಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ಕಾರನಾಳ ಗ್ರಾಮದ ಸರ್ವೆ ನಂಬರ್ 49 ರಲ್ಲಿ 1 ಎಕರೆ 10 ಗುಂಟೆ ಸರ್ಕಾರಿ ಗೋಮಾಳ ಜಾಗವನ್ನ ಸುತ್ತಮುತ್ತಲಿನ 5 ಮಂದಿ ಒತ್ತುವರಿ ಮಾಡಿದ್ದರು, ನಂಜಪ್ಪ, ಸಂಜೀವರಾಯಪ್ಪ, ನಾರಾಯಣಪ್ಪ , ರವಿ.ಕವಿತಾ ಒತ್ತುವರಿ ಮಾಡಿದ್ದರು ,ಒತ್ತುವರಿ ಮಾಡಿದ ಜಾಗದಲ್ಲಿ ಮನೆ ಮತ್ತು ತೆಂಗಿನ ಮರಗಳನ್ನ ಹಾಕಿಕೊಂಡಿದ್ದರು, ಒತ್ತುವರಿ ತೆರವು ಮಾಡುವಂತೆ ವೆಂಕಟೇಶಪ್ಪ ಲೋಕಾಯುಕ್ತರಿಗೆ ದೂರು ನೀಡಿದ್ದರು, ಲೋಕಾಯುಕ್ತರ ಆದೇಶದ ಮೇರೆಗೆ ಕಂದಾಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.
ಉಪ ತಹಶೀಲ್ದಾರ್ ವೆಂಕಟೇಶ್ ಮೂರ್ತಿ, ತೂಬಗೆರೆ ಹೋಬಳಿ ರಾಜಸ್ವ ಅಧಿಕಾರಿ ನರಸಿಂಹ ಮತ್ತು ಭೂಮಾಪನ ಇಲಾಖೆಯ ಸಿಬ್ಬಂದಿಗಳು ಒತ್ತುವರೆ ತೆರವು ಕಾರ್ಯದಲ್ಲಿ ಭಾಗಿಯಾಗಿದ್ದರು, ಒತ್ತುವರಿ ಜಾಗದಲ್ಲಿ ಕಟ್ಟಲಾಗಿದ್ದ ಮನೆಯನ್ನ ಜೆಸಿಬಿ ಮೂಲಕ ಕೆಡವಲಾಗಿದ್ದು, ಒತ್ತುವರಿ ಜಾಗವನ್ನ ಗುರುತಿಸಿ ಕಾಲುವೆ ತೊಡಿ ಗಡಿಯನ್ನು ಗುರುತಿಸಲಾಗಿದೆ, ಒತ್ತುವರಿದಾರರು ಸಹ ಕಾರ್ಯಾಚರಣೆಗೆ ಸಹಕರಿಸಿದ್ದಾರೆ, ನಿರ್ಮಿತಿ ಕೇಂದ್ರದಿಂದ ಕಾಂಪೌಂಡ್ ನಿರ್ಮಾಣ ಮಾಡಿ, ಮುಂದಿನ ದಿನಗಳಲ್ಲಿ ಒತ್ತುವರಿ ಯಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಉಪ ತಹಶೀಲ್ದಾರ್ ವೆಂಕಟೇಶ್ ಮೂರ್ತಿ ತಿಳಿಸಿದರು.