ಘಾಟಿಯಲ್ಲಿ ನಡೆದ ತೂಬಗೆರೆ ಹಲಸು ಮೇಳಕ್ಕೆ ಉತ್ತಮ ಸ್ಪಂದನೆ
ದೊಡ್ಡಬಳ್ಳಾಪುರ:ತಾಲ್ಲೂಕಿನ,ತೂಬಗೆರೆ ಹೋಬಳಿ ಶ್ರೀಕ್ಷೇತ್ರ ಘಾಟಿ ಕ್ಷೇತ್ರದಲ್ಲಿ ನಡೆದ ಮಾಂಗಲ್ಯ ಭಾಗ್ಯ ಸಾಮೂಹಿಕ ವಿವಾಹ ಕಾರ್ಯಕ್ರಮ ಕಾರ್ಯಕ್ರಮದಲ್ಲಿ
ವಿವಾಹ ಕಾರ್ಯಕ್ರಮದ ವೇದಿಕೆ ಮುಂಭಾಗ ತಾಲೂಕಿನ ಹಲಸು ಬೆಳೆಗಾರರು ಹಾಗೂ ವ್ಯಾಪಾರಿಗಳಿಂದ ಆಯೋಜಿಸಿದ್ದ ಹಲಸು ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕು ತೂಬಗೆರೆ ಹಾಗು ಕಸಬಾ ಹೋಬಳಿಯ ವಿವಿಧ ಗ್ರಾಮಗಳ ತಂದ ಹಲಸಿನ ಹಣ್ಣಿನ ಹಳದಿ ಬಣ್ಣದ ಹೆಬ್ಬಲಸು, ಬೇರು ಹಲಸು, ಕೆಂಪು ತೊಳೆಯ ಚಂದ್ರಹಲಸು ಮೊದಲಾದ ಹಲಸಿನ ತಳಿಗಳ ಮಾರಾಟ ನಡೆಯಿತು.
ಮಾಂಗಲ್ಯ ಭಾಗ್ಯ ಸಾಮೂಹಿಕ ವಿವಾಹ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಅಗಮಿಸಿದ ಅದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿಗಳ ಸಾನ್ನಿಧ್ಯ ಹಾಗೂ ಆಹಾರ ಮತ್ತು ನಾಗರಿಕ ವ್ಯವಹಾರಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಉಪವಿಭಾಗಾಧಿಕಾರಿ ಎನ್.ದುರ್ಗಾಶ್ರೀ,ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ಮೊದಲಾದ ಗಣ್ಯರು ಮಾರಾಟ ಮಳಿಗೆ ಬಳಿ ಆಗಮಿಸಿ, ಹಲಸಿನ ಹಣ್ಣುಗಳ ಸವಿದು ರುಚಿಯ ಬಗ್ಡೆ ಸಂತಸ ವ್ಯಕ್ತ ಪಡಿಸಿದರು.
ತೂಬಗೆರೆ ಹೋಬಳಿಯ ಹಲಸು ನಾಡಿನಾದ್ಯಂತ ಪ್ರಸಿದ್ದಿಯನ್ನು ಪಡೆದಿದೆ ರೈತರು ಇಂತಹ ಮೇಳಗಳನ್ನು ಆಯೋಜನೆ ಯಿಂದ ಪ್ರಯೋಜನೆ ಯಾಗಲಿದೆ ಎಂದರು.
ತಾಲ್ಲೂಕಿನ ಹಲಸು ಬೆಳೆಗಾರರ ಹಾಗು ಮಾರಾಟಗಾರರ ಮನವಿಗೆ ಸ್ಪಂದಿಸಿ ಮಾನ್ಯ ಜಿಲ್ಲಾದಿಕಾರಿ ಎ. ಬಿ ಬಸವರಾಜ್ ಹಾಗು ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯದ ಅಭಿವೃದ್ದಿ ಪ್ರಾಧಿಕಾರದ ಸದಸ್ಯರು ಹಾಗು ಕಾರ್ಯದರ್ಶಿ ಬಿ ನಾರಾಯಣ ಸ್ವಾಮಿ ಯವರು ಹಲಸು ಮೇಳೆ ಕ್ಕೆ ಅವಕಾಶ ಮಾಡಿ ಕೊಟ್ಟಿದ್ದು ಸಂತಸ ತಂದಿದೆ ಎಂದರು.
ಮಾಂಗಲ್ಯ ಭಾಗ್ಯ ಸಾಮೂಹಿಕ ವಿವಾಹದ ಭಾಗಿಯಾದ ವದು- ವರರು ವಿವಾಹದ ನಂತರ ಹಲಸಿನ ಮೇಳಕ್ಕೆ ಆಗಮಿಸಿ ಪರಸ್ಪರ ಹಲಸು ತಿನಿಸುವ ಮೂಲಕ ಹಲಸಿನ ಮೇಳದಲ್ಲಿ ಸಂತೋಷ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ನಗರ ಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ವಡ್ಡರಹಳ್ಳಿ ರವಿ ಕುಮಾರ ಐ ಟಿ ಉಧ್ಯೋಗಿ ರಾಜಶೇಖರ್ ತೂಬಗೆರೆ ಬಾಗದ ಹಲಸು ಮಾರಟಗಾರ ಬೆಳೆಗಾರರು ಮಂಜುನಾಥ, ಗೆದಲಪಾಳ್ಯ ಗಂಗಪ್ಪ,ರಹೀಮ್ ಖಾನ್.ನರಸಿಂಹಯ್ಯ ಇದ್ದರು.
ಹಲಸು ಬೆಳೆಗಾರರಿಗೆ ಸೂಕ್ತವಾದ ಮಾರುಕಟ್ಟೆ ಇಲ್ಲದೆ ರಸ್ತೆ ಬದಿಯಲ್ಲಿ ಗುಡ್ಡೆ ಹಾಕಿಕೊಂಡು ಗ್ರಾಹಕರು ಬರುವವರೆವಿಗೂ ಕಾದು ಅವರು ಕೊಟ್ಟ ಬೆಲೆಗೆ ಮಾರಾಟ ಮಾಡುವುದರಿಂದ ವರ್ಷ ಪೂರ್ತಿ ಬೆಳೆದ ಬೆಳೆಗೆ ಸೂಕ್ತವಾದ ಬೆಲೆ ಸಿಗುತ್ತಿಲ್ಲ. ಇದಕ್ಕೆ ಒಂದು ಮಾರುಕಟ್ಟೆ ಬೇಕು ತೂಬಗೆರೆ ಸುತ್ತಮುತ್ತಲಿನಲ್ಲಿ ಸುಮಾರು ಹಲಸಿನ ಮರಗಳಿದ್ದು ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳ ವರೆವಿಗೂ ಈ ಬೆಳೆ ಬರುತ್ತದೆ ತೂಬಗೆರೆ ಹಾಗು ಕಸಬಾ ಹೋಬಳಿಯ ವಿವಿಧ ಗ್ರಾಮಗಳ ತಂದ ಹಲಸಿನ ಹಣ್ಣಿನ ಹಳದಿ ಬಣ್ಣದ ಹೆಬ್ಬಲಸು, ಬೇರು ಹಲಸು, ಕೆಂಪು ತೊಳೆಯ ಚಂದ್ರ ಹಲಸು ಈಗೆ ನಾನಾ ಬಗೆಯ ಹಲಸು ಇಲ್ಲಿ ಸಿಗುತ್ತವೆ.