ಗೋಕಾಕ್ ನಲ್ಲಿ ಮೇ 23 , 24,25 ರಂದು ಗಾಂಧೀ ಕಾರ್ಯಗಾರ
ಬೆಳಗಾವಿ : ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಬೆಂಗಳೂರು ಹಾಗೂ ಮಾನವ ಬಂಧುತ್ವ ವೇದಿಕೆ ಸಹಯೋಗದಲ್ಲಿ ಬೆಳಗಾವಿಯ ಗೋಕಾಕ್ ತಾಲೂಕಿನ ಎನ್ ಎಸ್ ಹರ್ಡಿಕರ್ ಸೇವಾದಳ ತರಬೇತಿ ಕೇಂದ್ರದಲ್ಲಿ ಮೂರು ದಿನಗಳ ”ಯುವ ಸಮುದಾಯಕ್ಕಾಗಿ ಗಾಂಧೀ ಕಾರ್ಯಗಾರ” ಆಯೋಜಿಸಲಾಗಿದೆ.
ಕಾರ್ಯಗಾರದಲ್ಲಿ ಮೊದಲ ದಿನ ಕರ್ಣಾಟಕ ಗಾಂಧೀ ಸ್ಮಾರಕ ನಿಧಿ ಕಾರ್ಯಾಧ್ಯಕ್ಷರಾದ ಎನ್ ಆರ್ ವಿಶು ಕುಮಾರ ಹಾಗೂ ಧಾರವಾಡ ಆಕಾಶವಾಣಿ ನಿವೃತ್ತ ನಿರ್ದೇಶಕರಾದ ಸಿ ಯು ಬೆಳ್ಳಕ್ಕಿ ಕಾರ್ಯಕ್ರಮ ಉದ್ಘಾಟಿಸಿ ಕಮ್ಮಟದ ರೂಪುರೇಷೆ ಹಾಗೂ ಗಾಂಧೀ ಚಲನಚಿತ್ರ ಪ್ರದರ್ಶನ ಕ್ಕೆ ಚಾಲನೆ ನೀಡಲಿದ್ದಾರೆ .
ಎರಡನೇ ದಿನ ಶಿಭಿರಾರ್ಥಿಗಳೊಂದಿಗೆ ಸಂವಾದ ಮತ್ತು ಆಡಿಯೊ ವಿಡಿಯೊ , ಎಡಿಟಿಂಗ್ ತರಬೇತಿ ಕ್ಯಾಮೆರಾ ಬಳಕೆಯನ್ನು ಉಚಿತವಾಗಿ ಕಲಿಸಿಕೊಡಲಾಗುತ್ತದೆ .
ಮೂರನೇ ದಿನ ಹಿರಿಯ ಪತ್ರಕರ್ತರಾದ ಹೃಷಿಕೇಶ್ ದೇಸಾಯಿಯವರ ಸಾರಥ್ಯದಲ್ಲಿ ಗಾಂಧೀ ಪ್ರೇರಿತ ಪುಸ್ತಕಗಳ ಚರ್ಚೆ , ಪೋಸ್ಟರ್ ಹಾಗೂ ರೀಲ್ಸ್ ಮಾಡುವ ಚಟುವಟಿಕೆಗಳು ಮತ್ತು ಸಂದರ್ಶನ ತಂತ್ರಗಳ ಬಗ್ಗೆ ತರಬೇತಿ ನೀಡಲಾಗುವುದು .
ಕಾರ್ಯಗಾರಕ್ಕೆ ಬರುವವರಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಇರುತ್ತದೆ. ನೋಂದಣಿ ಮಾಡಿಕೊಳ್ಳಲು 9008149149 ಈ ಸಂಖ್ಯೆಗೆ ಕರೆ ಮಾಡಿ ಕೊಳ್ಳಬೇಕೆಂದು ನಿರ್ವಾಹಕರು ತಿಳಿಸಿದ್ದಾರೆ .