ಅದ್ದೂರಿಯಾಗಿ ನಡೆದ ಸೈ ಸ್ಕೂಲ್ ಆಫ್ ಡ್ಯಾನ್ಸ್ ಶಾಲೆಯ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ
ಕೃಷ್ಣರಾಜಪೇಟೆ:ಪಟ್ಟಣದ ಸೈ ಸ್ಕೂಲ್ ಆಫ್ ಡ್ಯಾನ್ಸ್ ವ್ಯವಸ್ಥಾಪಕರಾದ ಶ್ರೀಮತಿ ಪೂಜಾ ಶಶಿ ರವರು ಮಕ್ಕಳಿಗಾಗಿ ಆಯೋಜಿಸಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಲಾಯಿತು__
_ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತದ ನಾಗರೀಕರಾದ್ದರಿಂದ ಮಕ್ಕಳು ಪಠ್ಯದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಡು,ನೃತ್ಯ, ಯೋಗ, ಧ್ಯಾನ, ಕರಾಟೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತಿಳಿದುಕೊಂಡು ಜ್ಞಾನವಂತರಾಗಿ ಸಾಧನೆ ಮಾಡಲು ಸಹಕಾರಿಯಾಗಲಿದೆ. ಆದ್ದರಿಂದ ಮಕ್ಕಳ ಪರಿಪೂರ್ಣವಾದ ವ್ಯಕ್ತಿತ್ವದ ವಿಕಾಸಕ್ಕೆ ಬೇಸಿಗೆ ಶಿಬಿರವು ದಾರಿದೀಪವಾಗಿದೆ ಎಂದು ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು,_
_ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆದಿಚುಂಚನಗಿರಿಯ ಹೇಮಗಿರಿ ಶಾಖಾ ಮಠದ ಗೌರವ ಕಾರ್ಯದರ್ಶಿಗಳಾದ ಡಾ.ಜೆ.ಎನ್.ರಾಮಕೃಷ್ಣೆಗೌಡ ಮಾತನಾಡಿ ಮಕ್ಕಳ ಆಸಕ್ತಿ ಹಾಗೂ ಕಲಿಕೆಗೆ ಪೂರಕವಾದ ಶಿಕ್ಷಣವನ್ನು ಕೊಡಿಸಿ ಮಕ್ಕಳು ಸಾಧನೆ ಮಾಡಲು ಅವಕಾಶ ಮಾಡಿಕೊಡಬೇಕು. ತಂದೆ-ತಾಯಿಗಳು ಹಾಗೂ ಗುರು ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಮಕ್ಕಳಿಗೆ ಕೊಡಿಸಿಕೊಡುವ ಮೂಲಕ ಮಕ್ಕಳ ಸಾಧನೆಯನ್ನು ಕಣ್ಣಾರೆ ಕಂಡು ಸಂಭ್ರಮಿಸಬೇಕು ಎಂದು ಡಾ.ಜೆ.ಎನ್. ರಾಮಕೃಷ್ಣೆಗೌಡ ಹೇಳಿದರು._
_ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸಿ ಸೈ ಸ್ಕೂಲ್ ಆಫ್ ಡ್ಯಾನ್ಸ್ ನೃತ್ಯ ಶಾಲೆಯು ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ನೃತ್ಯ ಕಲೆಯ ಬಗ್ಗೆ ಮಕ್ಕಳಿಗೆ ಕಲಿಸಿ ಪರಿಚಯ ಮಾಡಿಕೊಡುವ ಮೂಲಕ ಸಶಕ್ತ, ಸಧೃಡ ರಾಷ್ಟ್ರದ ನಿರ್ಮಾಣಕ್ಕೆ ಜಾಗೃತಿ ಮೂಡಿಸುತ್ತಿದೆ ಎಂದು ಹೇಳಿದರು._
_ಪುರಸಭೆ ಅಧ್ಯಕ್ಷೆ ಪಂಕಜಾ, ಸದಸ್ಯ ಡಿ.ಪ್ರೇಮಕುಮಾರ್, ಯೋಗ ಗುರು ಅಲ್ಲಮಪ್ರಭು, ಸಂಗೀತ ಶಿಕ್ಷಕರಾದ ವೆಂಕಟೇಶ್, ಶ್ರೀಕಾಂತ್ ಚಿಮ್ಮಲ್, ಜಯಶ್ರೀ ಚಿಮ್ಮಲ್, ರವಿಶಿವಕುಮಾರ್, ಕೆಬಿಸಿ ಮಂಜುನಾಥ್, ಕೆ.ಎಸ್.ಚಂದ್ರು, ಮಹಿಳಾ ಹೋರಾಟಗಾರ್ತಿ ನರಸಮ್ಮ, ಆರೋಗ್ಯ ಇಲಾಖೆಯ ಮಂಗಳಾ, ಉಧ್ಯಮಿ ಬಿ.ರಾಜಶೇಖರ್, ಸೈ ನೃತ್ಯ ಶಾಲೆಯ ವ್ಯವಸ್ಥಾಪಕರಾದ ಪೂಜಾ ಶಶಿಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು._
_ವರದಿ: ಸಾಯಿಕುಮಾರ್ ಎನ್.ಕೆ