ರಾಜಮಾತಾ ಅಹಲ್ಯಾದೇವಿ ಹೋಳ್ಕರ್ ಸ್ವಾತಂತ್ರ್ಯ ಪೂರ್ವ ಭಾರತದ ಅತ್ಯಂತ ಶಕ್ತಿಶಾಲಿ ಮಹಿಳೆಯರಲ್ಲಿ ಒಬ್ಬರು — ಅಂಬರೀಷ್ ಗೌಡ.
ದೇವನಹಳ್ಳಿ :- ಮಕ್ಕಳಿಲ್ಲದ ವಿಧವೆಯರ ಆಸ್ತಿ ಯನ್ನು ಮುಟ್ಟು ಗೋಲುಹಾಕಿ ಕೊಳ್ಳಲಿದ್ದ ಕಾನೂನನ್ನು ರದ್ದುಗೊಳಿಸುವ ಮೂಲಕ ಅಹಲ್ಯಾಬಾಯಿ ಅವರು ಮಹಿಳಾ ಸಮಾಜದ ಏಳಿಗೆಗೆ ಶ್ರಮಿಸಿವರಾಗಿದ್ದಾರೆಂದು ದೇವನಹಳ್ಳಿ ಬಿಜೆಪಿ ಮಂಡಲದ ಅದ್ಯಕ್ಷ ನಿಲೇರಿ ಅಂಬರೀಷ್ ಗೌಡ ತಿಳಿಸಿರುತ್ತಾರೆ.
ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೆಂಗಳೂರು ಗ್ರಾಮಾಂತರ ಮಹಿಳಾ ಮೊರ್ಚಾ ಪದಾದಿಕಾರಿಗಳ ಪೂರ್ವಭಾವಿ ಸಭೆ ಹಾಗೂ ದೀಪ ಬೆಳಗುವ ಮೂಲಕ
ಅಹಲ್ಯಾಬಾಯಿ ಹೊಳಲ್ಕರ್ ಅವರ ಮೂಲಕ ಜಯಂತಿ ಆಚರಣೆಯಲ್ಲಿ ಮಾತನಾಡಿ, ಇಂದೋರ್ ನಗರವನ್ನು ಅಭಿವೃದ್ಧಿಪಡಿಸಲು, ಕಾಡುಗಳು ಮತ್ತು ಪ್ರಾಣಿಗಳನ್ನು ಸಂರಕ್ಷಿಸಲು ಪ್ರಯತ್ನಗಳನ್ನು ಮಾಡಿದರು ಮತ್ತು ಅಭಿವೃದ್ಧಿ ಹೊಂದುತ್ತಿರುವ ವ್ಯಾಪಾರ ಮತ್ತು ವಾಣಿಜ್ಯಕ್ಕೆ ಕಾರಣರೆಂದರೆ ತಪ್ಪಾಗಲಾರದು.
ಅವರ ಆಳ್ವಿಕೆಯಲ್ಲಿ ದಾನಶೀಲತೆ, ಸಾಮಾಜಿಕ ಸುಧಾರಣೆಗಳು ಮತ್ತು ಕಲೆ ಮತ್ತು ಸಂಸ್ಕೃತಿಗೆ ಬೆಂಬಲವು ಗುರುತಿಸಲ್ಪಟ್ಟಿದೆ ಹಾಗಾಗಿ ಅವರ ಆದರ್ಶಗಳನ್ನು ಪ್ರತಿ ಯೊಬ್ಬರು ಅಳವಡಿಸಿ ಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಅಂಬ ರೀಶ್ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಎಚ್.ಎಂ. ರವಿಕುಮಾರ್,ಮುಖಂಡ ಬಿಕೆ. ನಾರಾಯಣಸ್ವಾಮಿ ಮಹಿಳಾ ಮೋರ್ಚಾ ಅದ್ಯಕ್ಷೆ ಬಸವನಪುರ ವಿಜಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಾಗವೇಣಿ ಶ್ರೀನಿವಾಸ್, ಕಾರ್ಯದರ್ಶಿಗಳಾದ ನಿರ್ಮಲಮ್ಮ, ವತ್ಸಲ, ರಾಜಮ್ಮ, ಸಾರಿಕಾ ಮಧುಸೂದನ್, ಮಂಡಲ ಪುನೀತ, ವೇದ, ವೀಣಾ, ಭಾಗ್ಯಮ್ಮ, ಪ್ರೇಮ, ತಾಯಮ್ಮ, ದಿವ್ಯ ಹಾಗೂ ಮಹಿಳಾ ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.