ಕೊಳ್ಳೇಗಾಲದ ನಗರಸಭೆ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಎಫ್ಐಆರ್ ದಾಖಲು

ಕೊಳ್ಳೇಗಾಲ: ಇಲ್ಲಿನ ನಗರಸಭಾ ವ್ಯಾಪ್ತಿಯ ವಿವಿಧ ಬಡಾವಣೆಯ ಶುದ್ಧ ಕುಡಿಯುವ ನೀರಿನ ಘಟಕಗಳ (ಆರ್ .ಓ ಪ್ಲಾಂಟ್) ಹಣ ದುರುಪಯೋಗ ಸಂಬಂಧ‌ ನಗರಸಭೆಯ ಅಧಿಕಾರಿಗಳು ಹಾಗು ಸಿಬ್ಬಂದಿ ಸೇರಿದಂತೆ 14 ಮಂದಿ ವಿರುದ್ದ ಪೌರಾಯುಕ್ತರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಎಫ್‌ಐಆರ್ ದಾಖಲಾಗಿದೆ

ಹಣ ದುರುಪಯೋಗ ಮತ್ತು ಅಕ್ರಮಗಳು ಗಂಭೀರವಾಗಿರುವ ವಿಚಾರವಗಿರುವುದರಿಂದ ಉಪವಿಭಾಗಧಿಕಾರಿಗಳ ಕಛೇರಿಯ ಸಿಬ್ಬಂದಿಗಳ ತಂಡದಿಂದ ತನಿಖೆ ನಡೆಸಲಾಗಿ ನಗರಸಭೆಯ ಅಧಿಕಾರಿಗಳು ಹಾಗು ನೌಕರರ ವಿರುದ್ಧ ಹಣ ದುರುಪಯೋಗ, ಕರ್ತವ್ಯ ನಿರ್ಲಕ್ಷ್ಯತೆ ಹಾಗು ಬೇಜವಾಬ್ದಾರಿ ಆರೋಪ ಹೊರಿಸಿ ಇವರುಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದರು

ಜಿಲ್ಲಾಧಿಕಾರಿಗಳು ಈ ಸಂಬಂದ ಸಮಿತಿ ರಚನೆ ಮಾಡಿ ಸಮಿತಿಯ ವರದಿಯಂತೆ ಕೊಳ್ಳೇಗಾಲ ಪಟ್ಟಣದ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರಿನ ಪಾವತಿಸಿ ಪಡೆದುಕೊಳ್ಳುವ ಕುಡಿಯುವ ನೀರಿನ ಘಟಕಗಳಲ್ಲಿ 21/07/2014 ರಿಂದ 27-07-2022 ಹಣವನ್ನು ನಗರ ಸಭಾ ನಿಧಿಗೆ ಜಮಾ ಮಾಡದೆ ಅವ್ಯವಹಾರ ನಡೆಸಿ ನಗರಸಭೆಗೆ ಭಾರಿ ಆರ್ಥಿಕ ನಷ್ಟ ಉಂಟಾಗಲು ಕಾರಣ ಕರ್ತರಾಗಿರುವ ಅಧಿಕಾರಿ ನೌಕರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕೊಳ್ಳೇಗಾಲ ನಗರಸಭೆಯ ಪೌರಯುಕ್ತ ಎ.ರಮೇಶ್ ಅವರು ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪಟ್ಟಣದ ಕುಡಿಯುವ ನೀರಿನ ಕಾಯಿನ್ ಬೂತ್ ಕೋಟಿ ಕೋಟಿ ಹಣ ನುಂಗಿತ ನಗರಸಭೆಯ 14 ಅಧಿಕಾರಿ ನೌಕರರ ವಿರುದ್ಧ ಎಫ್ ಐ ಆರ್ .ದಾಖಲಾಗಿದೆ.
ಕೊಳ್ಳೇಗಾಲ ನಗರಸಭೆಯ ನಿರ್ಗಮಿತ ಯೋಜನಾ ನಿರ್ದೇಶಕ ಕೆ.ಸುರೇಶ್, ನಿವೃತ್ತ ಪೌರಾಯುಕ್ತ ನಾಗೇಶ್, ಹಿಂದಿನ ಪೌರಯುಕ್ತ ಕೆ.ಲಿಂಗರಾಜು,
ವಿಜಯ್, ನಿರ್ಗಮಿತ ಎಇಇ ಅಲ್ತಾಫ್ ಅಹಮದ್,
ಹಾಲಿ ಲೆಕ್ಕ ಅಧೀಕ್ಷಕ ಹನುಮಂತರಾಜು, ಕಚೇರಿಯ ಮ್ಯಾನೇಜರ್ ಲಿಂಗರಾಜು, ನಿರ್ಗಮಿತ ಸಹಾಯಕ ಇಂಜಿನಿಯರ್ ಸಿ.ಎಂ.ನಟರಾಜು ನಿರ್ಗಮಿತ ಹಿರಿಯ ಎಂಜಿನಿಯರ್ ಸಿದ್ದಪ್ಪ, ನಿರ್ಗಮಿತ ಎಸ್ ಡಿ ಎ ಜಯಚಿತ್ರ,ವಾಟರ್ ಮ್ಯಾನ್ ಗಳಾದ ಮಲ್ಲಪ್ಪ, ಚಿಕ್ಕ ಸಿದ್ದಯ್ಯ, ನಾಗರಾಜ್, ಸಾಗರ್ ಇವರ ವಿರುದ್ಧ ಜಿಲ್ಲಾಧಿಕಾರಿಗಳ ಆದೇಶದಂತೆ ಪೌರಾಯುಕ್ತ ಎ ರಮೇಶ್ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ

ನಗರ ಸಭೆಯ 31 ವಾರ್ಡ್ ಗಳ ಪ್ರಮುಖ ಸ್ಥಳಗಳಲ್ಲಿ ನಿರ್ಮಿಸಲಾಗಿದ್ದ 21 ಶುದ್ಧಕುಡಿಯುವ ನೀರಿನ ಆರ್ ಓ ಪ್ಲಾಂಟ್ ಗಳ ಕಾಯಿನ್ ಬೂತ್ ಗಳಲ್ಲಿ ಬರುವ ಕಾಯಿನ್ ಗಳನ್ನು ಪ್ರತಿನಿತ್ಯ ಸರ್ಕಾರದ ಖಜಾನೆಗೆ ಜಮಾ ಮಾಡಬೇಕಾಗಿತ್ತು.
ಆದರೆ 2014 ರಿಂದ 2022ರವರೆಗಿನ ಎಂಟು ವರ್ಷದ ಕೋಟ್ಯಂತರ ರೂ ಗಳನ್ನು ಈ 14 ಅಧಿಕಾರಿ ನೌಕರರು ಧೋಕಾ ಮಾಡಿರುವುದು ಕಂಡುಬಂದಿತ್ತು. ಈ ಸಂದರ್ಭದಲ್ಲಿ ದಿಟ್ಟ ಮಹಿಳಾ ನಗರಸಭೆ ಸದಸ್ಯ ಜಯ ಮೇರಿ ಪೌರಾಡಳಿತ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು. ಈ ಸಂಬಂಧ ಅಂದಿನ ಜಿಲ್ಲಾಧಿಕಾರಿ ತನಿಖೆ ಮಾಡಿ ವರದಿ ನೀಡುವಂತೆ ಉಪವಿಭಾಗ ಅಧಿಕಾರಿಯ ಗೀತಾ ಹುಡೇದ ತನಿಖಗೆ ಆದೇಶ ಮಾಡಿದ್ದರು 2022 ಜೂಲೈ 27ರಂದು ಉಪವಿಭಾಗ ಅಧಿಕಾರಿ ಯವರು ತನಿಖೆ ನಡೆಸಿ ತಪ್ಪಿತಸ್ಥ ರ ಪಟ್ಟಿ ತಯಾರಿಸಿ ಸೂಕ್ತ ಕ್ರಮಕ್ಕೆ ವರದಿ ನೀಡಿದರು.
ಈ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಕೆಲವರು ಅಧಿಕಾರಿಗಳು ತಾವಾಗಿಯೇ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಮತ್ತೆ ಕೆಲವರು ನಿವೃತ್ತಿ ಹೊಂದಿದ್ದಾರೆ ಕರ್ತವ್ಯದಲ್ಲಿ ಇರುವವರು ಮೂರು ವರ್ಷಗಳಿಂದ ಬಚವಾಗಲು ಇನ್ನಿಲ್ಲದ ಸರ್ಕಸ್ ಮಾಡಿ ಕೈಯಿಂದ ಹಣ ಕಳೆದುಕೊಂಡಿದ್ದರು. ಜಿಲ್ಲಾಧಿಕಾರಿ ಶಿಲ್ಪ ನಾಗರವರು ಮರು ತನಿಖೆ ನಡೆಸಿದ್ದ ಆಧಾರದಲ್ಲಿ 14 ಅಧಿಕಾರಿ ನೌಕರರ ವಿರುದ್ಧ ತಕ್ಷಣವೇ ಪೊಲೀಸ್ ಠಾಣೆಗೆ ದೂರು ನೀಡಿ ಬಂದಿಸುವಂತೆ ಆದೇಶ ಮಾಡಿದ ಹಿನ್ನೆಲೆ, ಪೌರಾಯುಕ್ತ ಏ ರಮೇಶ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲು ಮಾಡಿಕೊಂಡಿರುವ ಪಿಎಸ್ಐ ವರ್ಷ, ಇವರುಗಳ ಬಂಧನಕ್ಕೆ ಯಾವ ರೀತಿ ಕ್ರಮ ಜರುಗಿಸುತ್ತಾರೆ ಎಂದು ಇಡೀ ಪಟ್ಟಣದ ಜನತೆ ಠಾಣೆಯ ಕಡೆ ದಿಟ್ಟಿಸಿ ನೋಡುತ್ತಿದ್ದಾರೆ. ಈಗಲಾದರೂ ತಪ್ಪಿತಸ್ಥರಿಗೆ ಶಿಕ್ಷೆಯಾಗುವುದೇ ಎಂಬುದು ದೂರುದಾರರಾದ ಸದಸ್ಯ ಜಯ ಮೇರಿ ಗೆ ನ್ಯಾಯ ದೊರಕುತ್ತದೆಯೇ ಕೋಟಿ ಕೋಟಿ ಹಣ ನಗರಸಭೆಗೆ ವಾಪಸ್ ಬರುವುದೇ ಕಾದು ನೋಡಬೇಕಾಗಿದೆ.

ವರದಿ ಆರ್ ಉಮೇಶ್ ಮಲಾರಪಾಳ್ಯ