ಒಳ ಪಂಗಡಗಳ ಹೆಸರಲ್ಲಿ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯುವ ಹುನ್ನಾರ–ರಂಬಾಪುರಿ ಶ್ರೀ

ದೊಡ್ಡಬಳ್ಳಾಪುರ:ವೀರಶೈವ, ಲಿಂಗಾಯಿತ ಎರಡೂ ಒಂದೇ ಎನ್ನುವುದು ಸರ್ವವಿತ. ಆದರೆ ರಾಜಕೀಯ ಹಾಗೂ ಮತ್ತಿತರರ ಕಾರಣಗಳಿಂದಾಗಿ ಸಮುದಾಯ ಒಳ ಪಂಗಡಗಳಾಗಿ ಕವಲು ದಾರಿಯಲ್ಲಿ ಸಾಗಿ ಶಕ್ತಿ ಕುಂದಿಸುವ ಕೆಲಸವಾಗುತ್ತಿದೆ. ಈ ದಿಸೆಯಲ್ಲಿ ವೀರಶೈವ ಲಿಂಗಾಯಿತ ಎಲ್ಲಾ ಪಂಗಡಗಳು ಕುಂದಿಸುವ ಕೆಲಸವಾಗುತ್ತಿದೆ. ಈ ದಿಸೆಯಲ್ಲಿ ಸಮುದಾಯದ ಘನತೆ ಹೆಚ್ಚಿಸಬೇಕಿದೆ ಎಂದು ಶ್ರೀಮದ್ ರಂಭಾಪುರಿ ವೀರಸಿಂಹಾಸನಾೀಶ್ವರ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗತತ್ಪಾದ ಹೇಳಿದರು.

ನಗರದ ಬಸವ ಭವನದಲ್ಲಿ ದೊಡ್ಡಬಳ್ಳಾಪುರ ತಾಲೂಕು ವೀರಶೈವ ಲಿಂಗಾಯಿತ ಸಮಾಜ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ನೇತೃತ್ವದಲ್ಲಿ ನಡೆದ ಇಷ್ಟಲಿಂಗ ಮಹಾಪೂಜೆ ಹಾಗೂ ಭಾವೈಕ್ಯ ಧರ್ಮ ಸಮಾರಂಭದಲ್ಲಿ ಇಷ್ಟ ಲಿಂಗ ಪೂಜೆ ನೆರವೇರಿಸಿ, ಅವರು ಮಾತನಾಡಿದರು.

ರಾಜ್ಯದಲ್ಲಿ ವೀರಶೈವ ಲಿಂಗಾಯಿತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ಪ್ರಥಮ ಸ್ಥಾನದಲ್ಲಿದೆ. ಸಮುದಾಯದ ಹಿರಿಯರ ಮಾರ್ಗದರ್ಶನದಲ್ಲಿ ಇಂದಿನ ಯುವ ಸಮುದಾಯ ಮುನ್ನಡೆ ಯುತ್ತಿರುವುದು ಉತ್ತಮ ಬೆಳವಣಿಗೆ. ಆದರೆ ಒಳ ಪಂಗಡಗಳ ಹೆಸರಿನಲ್ಲಿ ವೀರಶೈವ, ಲಿಂಗಾಯಿತ ಬೇರೆ ಮಾಡುವ ಹುನ್ನಾರಗಳು ನಡೆಯುತ್ತಿವೆ. ಸಮುದಾಯದ ಹಿರಿಯರಾದ ಶ್ಯಾಮನೂರು ಶಿವಶಂಕರಪ್ಪ, ಶಂಕರ ಬಿದರೆ ಸಹ ವೀರಶೈವ, ಲಿಂಗಾಯಿತ ಎರಡೂ ಒಂದೇ ಎಂದು ಪ್ರತಿಪಾದಿಸಿದ್ದಾರೆ. ವೀರಶೈವ ಲಿಂಗಾಯಿತ ಧರ್ಮದಲ್ಲಿ ಎಲ್ಲಾ ಧರ್ಮಗಳ ಸಾರವನ್ನು ಒಳಗೊಂಡಿದೆ. ಅದರಿಂದ ಬೇರ್ಪಟ್ಟು ಏನೂ ಸಾಸಲಾಗುವುದಿಲ್ಲ. ಸಂಘಟಿತರಾಗಿದ್ದರೆ ಮಾತ್ರ ಎಲ್ಲವನ್ನೂ ಸಾಸಲು ಸಾಧ್ಯ. ಆದರೆ ಪಂಗಡಗಳನ್ನು ಬೇರೆ ಮಾಡುವ ಜನರ ಮಾತಿಗೆ ಬೆಲೆ ನೀಡಬೇಡಿ. ಒಕ್ಕೂಟದಿಂದ ಬೇರೆ ಹೋಗಬೇಡಿ ಎಂದು ಕಿವಿ ಮಾತು ಹೇಳಿದರು.
ಲಿಂಗಪೂಜೆ ಮರೆಯಬೇಡಿ :
ದೇಶಕ್ಕೆ ಸಂವಿದಾನ ವಿದ್ದಂತೆ ನಮ್ಮ ವೀರಶೈವ ಲಿಂಗಾಯಿತ ಸಮುದಾಯಕ್ಕೆ ಜಗದ್ಗುರು ರೇಣುಕಾಚಾರ್ಯರ ಹಾಗೂ ಬಸವಣ್ಣನವರ ತತ್ವ ಸಿದ್ದಾಂತಗಳ ಸಂವಿದಾನ ವಿದೆ. 12 ನೇ ಶತಮಾನದಲ್ಲಿ ಬಸವಣ್ಣನವರು ಸಹ ಇಷ್ಟಲಿಂಗ ಧರಿಸಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದರು. ರೇಣುಕಾಚಾರ್ಯರ ಹಾಗೂ ಬಸವಣ್ಣನವರ ಕಾಲ ದಂತೆ ನಮ್ಮ ಸಂಸ್ಕಂತಿಯನ್ನು ಎತ್ತಿ ಹಿಡಿಯುವ ಕಾರ್ಯ ನಡೆಯುತ್ತಲೇ ಬಂದಿದೆ. ಲಿಂಗ ಧಾರೆಣೆಯನ್ನು ಶ್ರದ್ದೆಯಿಂದ ಮಾಡಿ ಸ್ನಾನದ ಸಮಯದಲ್ಲಿಯೂ ಅದಕ್ಕೆ ಅಭಿಷೇಕ ದಂತೆ ಶುಭ್ರ ಮಾಡಿ, ಆಚರಣೆಯನ್ನು ನೆರವೇರಿ ಸಬೇಕಿದೆ ಎಂದರು.
ಬಾಳೆ ಹೊನ್ನೂರು ಮಠದ ರೇಣುಕ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಲಿಂಗವನ್ನು ಧರಿಸಿದರೆ ಸಾಲದು ಅದಕ್ಕ ಸಲ್ಲಬೇಕಾದ ಭಕ್ತಿ ಮನ್ನಣೆ ನೀಡಬೇಕು. ಇಷ್ಟಲಿಂಗ ಪೂಜೆ. ಕೈಂ ಕರ್ಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದರೆ ಸಮುದಾಯದ ಒಗ್ಗೂಡಿಕೆಗೆ ನೆರವಾಗಲಿದೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ರಾಷ್ಟ್ರ ಉಪಾಧ್ಯಕ್ಷ ಸಚ್ಚಿದಾನಂದ ಮೂರ್ತಿ ಮಾತನಾಡಿ, ಸರ್ಕಾರ ಈಗಾಗಲೇ ಮಾಡಿರುವ ಜಾತಿಗಣತಿ ಅ ವೈಜ್ಞಾನಿಕವಾಗಿದ್ದು, ಇದಕ್ಕೆ ನಮ್ಮ ಸಮುದಾಯ ಮುಖಂಡರ ವಿರೋಧವಿದೆ. ಈ ದಿಸೆಯಲ್ಲಿ ಜಾತಿ ಗಣತಿ ಬಿಡುಗಡೆ ಮಾಡದಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ. ನಮ್ಮ ಸಮುದಾಯ ಪಂಗಡ ಗಳಾಗುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ತಾಲೂಕು ವೀರಶೈವ ಸೇವಾ ಅಭಿವೃದ್ದಿ ಟ್ರಸ್ಟ್ (ಬಸವ ಭವನ) ಕಾರ್ಯದರ್ಶಿ ಬಸವರಾಜು ಮಾತನಾಡಿ, ಸಮುದಾಯ ಒಗ್ಗೂಡಿ ಅರ್ಥಪೂರ್ಣ ಕಾರ್ಯಕ್ರಮ ಆಚರಿಸುತ್ತಿರುವುದು ಸಂತಸದ ಸಂಗತಿಯಾಗಿದ್ದು, ನಮ್ಮ ಸಮಿತಿ ವತಿಯಿಂದ ಹಲವಾರು ಸಮಾಜ ಮುಖಿ ಕಾರ್ಯಗಳನ್ನು ಕೈಗೊಂಡಿದ್ದು, ಈಗ ಬಸವ ಪೀಠ ಹೆಸರಿನ ಶೈಕ್ಷಣಿಕ ಸಂಸ್ಥೆ ತೆರೆಯಲು ಉದ್ದೇಶಿಸಲಾಗಿದ್ದು, ಈಗಾಗಲೇ ಜಮೀನು ಗುರುತಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಿದ್ದರ ಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿ, ತಾವರೆಕೆರೆ ಮಠದ ಡಾ.ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ. ನಾಗಲಾಪುರ ಮಠದ ತೇಜೇಶ ಲಿಂಗ ಶಿವಾಚಾರ್ಯ ಸ್ವಾಮೀಜಿ, ಶಾಸಕ ದೀರಜ್ ಮುನಿರಾಜು,ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಅಧ್ಯಕ್ಷ ಶಂಕರ ಮಹಾದೇವ ಬಿದರಿ, ಉಪಾಧ್ಯಕ್ಷ ಹರೀಶ್ ಆರಾಧ್ಯ, ಯುವ ಘಟಕದ ಅಧ್ಯಕ್ಷ ಮನೋಹರ್ ಅಬ್ಬಿಗೆರೆ, ಸಮುದಾಯದ ಮುಖಂಡರಾದ ಜಿ.ಮರಿಸ್ವಾಮಿ, ಶಿವನಂಜಪ್ಪ, ಲೋಕೇಶ್ವರ್, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಯುವ ಘಟಕದ ಲೋಕೇಶ ಸುಜಯ್ ಕುಮಾರ್, ಮೋಹನ್ ಕುಮಾರ್, ಈರಣ್ಣ, ಪಿ.ಪ್ರಭಾಕರ್ ಸೇರಿದಂತೆ ವೀರಶೈವ ಲಿಂಗಾಯಿತ ಸಮುದಾಯದ ವಿವಿಧ ಘಟಕಗಳ ಪದಾಕಾರಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ನೂರಾರು ಜನ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗತತ್ಪಾದ ಗುರುವರ್ಯ ದಿಂದ ಶಿವ ದೀಕ್ಷೆಯನ್ನು ಪಡೆದರು.