ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ಪುಣ್ಯ ಸ್ಮರಣೆ–ನಾಗತಿಹಳ್ಳಿ ಕೃಷ್ಣಮೂರ್ತಿ

ತಿಪಟೂರು.‘ನಗರದ ಪ್ರವಾಸಿ ಮಂದಿರದಲ್ಲಿ ಸ್ವಾತಂತ್ರ್ಯ ಹೋರಾಟಗಾರ, ದೇಶದ ಹಸಿರು ಕ್ರಾಂತಿಯ ಹರಿಕಾರ ಹಾಗೂ ಕಾರ್ಮಿಕರ ಕಲ್ಯಾಣಕ್ಕಾಗಿ ದುಡಿದ ಮುತ್ಸದ್ಧಿ ಹಾಗೂ ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಮ್ ಅವರು ದೇಶಕ್ಕೆ ನೀಡಿರುವ ಕೊಡುಗೆ ಅಪಾರ’ ಎಂದು ಜಿಲ್ಲಾ ಸಂಚಾಲಕಾರದ ನಾಗತಿಹಳ್ಳಿ ಕೃಷ್ಣಮೂರ್ತಿ ಬಣ್ಣಿಸಿದರು

ಜಗಜೀವನ್ ರಾಮ್ ಅವರು ಮೇಲು–ಕೀಳೆಂಬ ತಾರತಮ್ಯ, ಜಾತಿ ಪದ್ಧತಿ, ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಶ್ರಮಿಸಿದರು. ಸಾಮಾಜಿಕ ಬದಲಾವಣೆಗಾಗಿ ಹೋರಾಡಿದರು. ಶೋಷಿತರ ಪರವಾಗಿ ದನಿ ಎತ್ತಿದ ಅವರ ಚಿಂತನೆಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು’ ಎಂದು ಹೇಳಿದರು.

ಆಶೋಕ್ ಗೌಡನಕಟ್ಟೆ ಮಾತನಾಡಿ, ‘ಸ್ವಾತಂತ್ರ‍್ಯ ಪೂರ್ವ ಮತ್ತು ಸ್ವಾತಂತ್ರ‍್ಯ ನಂತರದ ಅಸ್ಪೃಶ್ಯತೆ ನಿವಾರಣೆಯ ಹೋರಾಟದಲ್ಲಿ ಜಗಜೀವನ್‌ ರಾಮ್ ಅವರ ಪಾತ್ರ ಪ್ರಮುಖವಾದುದು. ಶೋಷಿತ ಸಮುದಾಯದ ಏಳಿಗೆಗೆ ಸ್ಪಷ್ಟ ರೂಪ ಕೊಟ್ಟ ಕೆಲವೇ ನಾಯಕರಲ್ಲಿ ಇವರೂ ಒಬ್ಬರು’ ಎಂದು ಅಭಿಪ್ರಾಯಪಟ್ಟರು.

ತಾಲ್ಲೂಕು ಸಂಚಾಲಕ ಮಂಜುನಾಥ್ ಹರಚನಹಳ್ಳಿ ಮಾತನಾಡಿ‘ಹಸಿರು ಕ್ರಾಂತಿಗೆ ಕಾರಣರಾದ ಅವರು, ಆ ಮೂಲಕ ದೇಶದಲ್ಲಿ ಆಹಾರದ ಕೊರತೆಯಾಗದಂತೆ ಅಡಿಪಾಯ ಹಾಕಿದರು. ದಲಿತರಷ್ಟೇ ಅಲ್ಲದೆ, ಸರ್ವ ಸಮುದಾಯಗಳ ಕಲ್ಯಾಣಕ್ಕೆ ಶ್ರಮಿಸಿದರು. ಸಮ ಸಮಾಜ ನಿರ್ಮಾಣಕ್ಕೆ ಬದುಕಿನುದ್ದಕ್ಕೂ ಹೋರಾಡಿದರು’ ಎಂದು ಸ್ಮರಿಸಿದರು

ಈ ಸಂದರ್ಭದಲ್ಲಿ,ಜಗದಾರಿಯಸ್ವಾಮಿ. ಏನ್ ಎಂ ಮೈಲಾರಯ್ಯ.
ಮಂಜು ಗುರುಗದಹಳ್ಳಿ. ಕರಿಕೆರೆ ಗಂಗಾಧರ್. ರಾಜಣ್ಣ ಗಂಗನಗಟ್ಟ. ಕಾರ್ಮಿಕ ಘಟಕ ಅಧ್ಯಕ್ಷ ಚಂದ್ರಶೇಖರ್ ಬಳುನೇರಲು. ರವಿ ಮಂಜುನಾಥಪುರ.ಪ್ರಸನ್ ಕುಮಾರ್.
ನಂದಿನಿ ಕೆಬಿ. ಲಕ್ಷ್ಮಮ್ಮ. ಗಂಗಾಮಣಿ. ಗಂಗಣ್ಣ ಇರಲಗೆರೆ. ಚಂದ್ರಶೇಖರ್ ಅಧಿನಾಯಕನಹಳ್ಳಿ ಸೇರಿದಂತೆ ಮತಿತ್ತರು ಉಪಸ್ಥಿತರಿದ್ದರು.

ವರದಿ.ಮಂಜು ಗುರುಗದಹಳ್ಳಿ