ಕರವೇ ಕನ್ನಡಿಗರ ಬಣದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ದೊಡ್ಡಬಳ್ಳಾಪುರ:ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ ನೇತೃತ್ವದಲ್ಲಿ ಕನ್ನಡ ಜಾಗೃತ ಭವನದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕೊಂಗಾಡಿಯಪ್ಪ ಪ್ರಶಸ್ತಿ ಪ್ರದಾನ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎ. ಬಿ. ಬಸವರಾಜ್, ಪವಾಡ ಭಂಜಕ ಹುಲಿಕಲ್ ನಟರಾಜ್, ಆರಕ್ಷಕ ನಿರೀಕ್ಷಕ ಡಾ. ನವೀನ್ ಕುಮಾರ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕ ಸಾ. ಪ. ಕಾರ್ಯದರ್ಶಿ ಪ್ರೊ. ಕೆ. ಆರ್. ರವಿಕಿರಣ್ ರವರು ಭಾಗವಹಿಸಿ ಮಾತನಾಡಿ ಸಂಘಟನೆಗಳು ಪ್ರತಿಭೆಗಳನ್ನು ಗುರ್ತಿಸಿ ಪ್ರೋತ್ಸಾಹಿಸುವ ಮೂಲಕ ಉನ್ನತ ಸಾಧನೆಗೆ ಪ್ರೇರಣೆ ಹಾಗೂ ಮಾರ್ಗದರ್ಶನ ಒದಗಿಸುವ ಕಾರ್ಯ ಮಹತ್ತರವಾದುದು. ಮಕ್ಕಳು ಖಿನ್ನತೆಗೆ ಒಳಗಾಗದಂತೆ ಪೋಷಕರು ನಿಗವಹಿಸಬೇಕು. ಮಕ್ಕಳು ಓದಿನ ಜೊತೆಗೆ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸದ ಶಿಕ್ಷಣ ಅರ್ಥ ಹೀನ. ಅಂಕಗಳ ಜೊತೆ ಮನುಷ್ಯ ಸಂವೇದನೆಯನ್ನು ರೂಡಿಸಿ ಕೊಂಡ ವ್ಯಕ್ತಿ ಸಾಧಕನಾಗಿ ಹೊರ ಹೊಮ್ಮುತ್ತಾನೆ. ವಿದ್ಯಾರ್ಥಿಗಳ ಸಮಗ್ರ ಶೈಕ್ಷಣಿಕ ಬೆಳವಣಿಗೆಗೆ ಪರಿಶ್ರಮ ಆಸಕ್ತಿ ಹಾಗೂ ಸಾಧನೆಯ ಹಂಬಲಗಳು ಮೆಟ್ಟಿಲಾಗಿರಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಹತ್ತನೇ ತರಗತಿ ಹಾಗೂ ದ್ವಿತೀಯ ಪಿ.ಯು. ಸಿ. ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ಸುಮಾರು ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೆ ವೇಳೆ ಹುಲಿಕಲ್ ನಟರಾಜ್ ರವರಿಗೆ ಕೊಂಗಾಡಿಯಪ್ಪ ಪ್ರಶಸ್ತಿ ಪ್ರದಾನ ಹಾಗೂ ಛಾಯಾಗ್ರಾಹಕ ಹೆಚ್. ಎಸ್. ನಾಗೇಶ್, ಸಾಹಿತಿ ಪ್ರೊ. ಕೆ. ಆರ್. ರವಿಕಿರಣ್ ರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕರವೇ ಕನ್ನಡಿಗರ ಬಣದ ಸಂಸ್ಥಾಪಕ ಅಧ್ಯಕ್ಷ ಬಿ. ಎಸ್. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ. ಎಸ್. ರಾಜಶೇಖರ್, ಕರವೇ ಕಾನೂನು ಘಟಕದ ರಾಜ್ಯಾಧ್ಯಕ್ಷ ಸುಭಾಷ್ ಚಂದ್ರ, ಸಹ್ಯಾದ್ರಿ ಆಸ್ಪತ್ರೆಯ ಜಗದೀಶ್, ಕರವೇ ರಾಜ್ಯ ಪ್ರದಾನ ಕಾರ್ಯದರ್ಶಿ ರಮೇಶ್ ಸಂಘಟನಾ ಕಾರ್ಯದರ್ಶಿ ಅರವಿಂದ್, ತಾಲೂಕು ಅಧ್ಯಕ್ಷ ವಿನಯ್ ಆರಾಧ್ಯ, ಜಿಲ್ಲಾ ಯುವ ಘಟಕದ ಅಧ್ಯಕ್ಷ ರಂಜಿತ್ ಗೌಡ, ಮಹಿಳಾ ಅಧ್ಯಕ್ಷೆ ರಾಧಾ ಮಣಿ, ರಾಜ್ಯ ಕಾರ್ಯಾಧ್ಯಕ್ಷ ಪ್ರದೀಪ್ ಕುಮಾರ್, ಸಂಘಟನಾ ಕಾರ್ಯದರ್ಶಿ ಶಿವಾನಂದ, ಕಾರ್ಯದರ್ಶಿ ಉದಯ ಕುಮಾರ್, ವಾಸು ಮುಂತಾದವರು ಭಾಗವಹಿಸಿದ್ದರು.