ಯಶಸ್ವಿಯಾಗಿ ನೆರವೇರಿದ ಹುಲುಕಡಿ ಗಿರಿ ಪ್ರದಕ್ಷಿಣೆ ಕಾರ್ಯಕ್ರಮ

ದೊಡ್ಡಬಳ್ಳಾಪುರ : ತಾಲೊಕಿನ ದೊಡ್ಡಬೆಳವಂಗಲ ಹೋಬಳಿ ಐತಿಹಾಸಿಕ ಹುಲುಕುಡಿ ಕ್ಷೇತ್ರದಲ್ಲಿ 12 ನೇ ವರ್ಷದ ಹುಲುಕುಡಿ ಗಿರಿ ಪ್ರದಕ್ಷಿಣೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಬೆಟ್ಟದ ತಪ್ಪಲಿನ ವೀರ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಬೆಳಗ್ಗೆ 5 ಗಂಟೆಗೆ ಆರಂಭವಾದ ಪಾದಯಾತ್ರೆಯಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ನೂರಾರು ಜನ ಭಕ್ತಾದಿಗಳು ಹಾಗೂ ಶ್ರೀ ಹುಲುಕುಡಿ ವೀರಭದ್ರಸ್ವಾಮಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ನ ಪದಾಕಾರಿಗಳು ಭಾಗವಹಿಸಿದ್ದರು.
8 ಕಿ.ಮೀ ಪಾದಯಾತ್ರೆ:
ಹುಲುಕುಡಿ ಬೆಟ್ಟದ ತಪ್ಪಲಿನಿಂದ ಆರಂಭವಾದ ಗಿರಿ ಪ್ರದಕ್ಷಿಣೆ ಹಳೇಕೋಟೆ, ತಳಕಿನ ಕೆರೆ, ಮಾಡೇಶ್ವರ ಮಾರ್ಗವಾಗಿ ಸುಮಾರು 5 ಕಿ.ಮೀ ಸಾಗಿ ಮಧ್ಯಾಹ್ನ ಮುಕ್ತಾಯವಾಯಿತು. ಹುಲುಕುಡಿ ಬೆಟ್ಟದ ತಪ್ಪಲಿನ ಮಾಡೇಶ್ವರದಲ್ಲಿ ಚೋಳರ ಕಾಲದಲ್ಲಿ ಸ್ಥಾಪಿತವಾಗಿರುವ ಬೃಹತ್ ಶಿವಲಿಂಗ ಮೂರ್ತಿಯನ್ನು ಹೊಂದಿರುವ ಮುಕ್ಕಣ್ಣೇಶ್ವರ, ನರಸಿಂಹಸ್ವಾಮಿ, ಬಸವಣ್ಣ,ಹಾಲು ಬಾವಿ ಆಂಜನೇಯಸ್ವಾಮಿ,ಬೊನ್ನಹಳ್ಳಿ ಗ್ರಾಮದಲ್ಲಿನ ಚನ್ನಕೇಶವ

ಸ್ವಾಮಿ, ನರಸಿಂಹಸ್ವಾಮಿ ಚೌಡೇಶ್ವರಿ ದೇವರ ದರ್ಶನಗಳನ್ನು ಮಾಡಿ ಭಕ್ತಾದಿಗಳು ಪುನೀತರಾದರು.
ಗಿರಿ ಪ್ರದಕ್ಷಿಣೆಯಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ಮಾರ್ಗದುದ್ದಕ್ಕೂ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ ನಡೆಯಿತು. ಗಿರಿ ಪ್ರದಕ್ಷಿಣೆ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.