*ಕರ್ನಾಟಕ ಮಾದರ ಮಹಾಸಭಾದ ನೊಂದಣಿ ಅಭಿಯಾನಕ್ಕೆ ಚಾಲನೆ
*ಸಮುದಾಯದ ಭಲವರ್ದನೆಗಾಗಿ ಸದಸ್ಯತ್ವದ ಅಭಿಯಾನದಲ್ಲಿ ನೊಂದಣಿ ಮಾಡಿಸಿ ಆಹಾರ ಸಚಿವ ಕೆಹೆಚ್. ಮುನಿಯಪ್ಪ*
*ಬಲಿಷ್ಠ ಸಂಘದ ನಿರ್ಮಾಣ ನಮ್ಮ ಸಂಕಲ್ಪ*
ಬೆಂಗಳೂರು:ಕರ್ನಾಟಕ ಮಾದರ ಮಹಾಸಭಾದ ಸದಸ್ಯತ್ವ ನೋಂದಣಿ ಅಭಿಯಾನ ಸಭೆಯನ್ನು ಇಂದು ಬೆಂಗಳೂರಿನ ಗಾಂಧೀ ಭವನದಲ್ಲಿ ಆಯೋಜಿಸಿದ್ದು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ. ರವರು ಉದ್ಘಾಟಿಸಿದರು.
ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಜಗಜೀವನ್ ರಾಮ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕರ್ನಾಟಕ ಮಾದರ ಮಹಾಸಭೆಯ ಸದಸ್ಯರಾಗಲು ಸಾಮಾನ್ಯ ಸದಸ್ಯತ್ವ 500 ರೂಗಳು ಅಜೀವ ಸದಸ್ಯತ್ವ 25 ಸಾವಿರ ,ಪೋಷಕ ಸದಸ್ಯತ್ವ 50 ಸಾವಿರ ಮಹಾ ಪೋಷಕ ಸದಸ್ಯತ್ವ ಸದಸ್ಯರಾಗಲು 1ಲಕ್ಷರೂಗಳನ್ನು ನಿಗದಿಪಡಿಸಿದ್ದು ಎಲ್ಲಾ ಸಮುದಾಯದ ಸದಸ್ಯರು
ನೊಂದಣಿ ಮಾಡಲು ಮನವಿ ಮಾಡಿದರು.ನಂತರ ಮಾತನಾಡಿದ ಸಚಿವರು ,ಈ ಸಮುದಾಯದ ಸಂಘದ ಪ್ರಾರಂಭ ಸುಮಾರು 12 ವರ್ಷಗಳಿಂದಲೂ ನಡೆಯುತ್ತಿದೆ ಆದರೆ ಇದಕ್ಕೆ ಸರಿಯಾದ ನೆಲೆ ಇಲ್ಲಾ ಆಗಾಗಿ ನಾವು ಈಗ ತೀರ್ಮಾನಿಸಿದ್ದು ಮಾದರ ಮಹಾಸಭಾ ಎಂಬುದು ಒಕ್ಕಲಿಗರ ಸಂಘ ,ವೀರಶೈವ ಮಹಾಸಭಾ,ಕುರುಬರ ಸಂಘದ ರೀತಿಯಲ್ಲಿ ನಮ್ಮ ಮಾದರ ಮಹಾಸಭಾ ಕಟ್ಟಲು ತೀರ್ಮಾನಿಸಿದ್ದು ನಮ್ಮ ಸಂಘದ ಪಧಾದಿಕಾರಗಳು ಸಮುದಾಯದ ಸದಸ್ಯತ್ವ ನೊಂದಣಿ ಮಾಡಿಸಲು ಮುಂದಾಗಬೇಕು ಎಂದರು.
ನಮ್ಮ ಹೋರಾಟದ ಸ್ಪೂರ್ತಿ
ಎನ್ ರಾಚಯ್ಯ ರವರು ನಮಗೆ ಪ್ರೇರಣೆ
ನಾವು ಈಷ್ಟು ದಿನವಾದರು ಸಮುದಾಯದ ಸಂಘ ಕಟ್ಟುವಲ್ಲಿ ವಿಫಲರಾಗಿದ್ದೇವೆ
ನಾವು ಯಾವುದೇ ಪಕ್ಷ ವಿರಲಿ ಪಕ್ಷ ಬದಿಗಿಟ್ಟು ಮುಂಚೂನಿ ನಾಯಕರಾದ ನಾವು ಈ ಸಂಘ ಕಟ್ಟುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು ಎಂದರು
ನಾವು ನಮ್ಮದೇ ಆದ ಕೆಲಸದ ಒತ್ತಡ ದಿಂದ ಈ ಸಮಯದಾಯದ ಬಲವರ್ಧನೆಗಾಗಿ ವಿಫಲರಾಗಿದ್ದೇವೆ
ಇದನ್ನು ಇನ್ನು ಹೆಚ್ಚಿನ ಮಟ್ಟದಲ್ಲಿ ಬೆಳೆಸಲು ಹಾಗೂ ಸಂಘಕ್ಕೆ ಶಾಶ್ವತ ನೆಲೆಯನ್ನು ಕೊಡಿಸಲು ಸರ್ಕಾರದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಸಂಘಕ್ಕೆ ನಿವೇಶನ ಮೀಸಲಿಡಲು ಒತ್ತಡ ತಂದು ಕೆಲಸ ಮಾಡುತ್ತೇವೆ
ಈ ಸಂಘದ ಪ್ರಮುಖ ಉದ್ದೇಶ ವಿದ್ಯಾರ್ಥಿಗಳಿಗೆ ವಿಧ್ಯಾಭ್ಯಾಸ ಕಲ್ಪಿಸಿಕೊಡಲು ಹಾಗೂ ಉನ್ನತ ವ್ಯಾಸಾಂಗವಾದ IAS IPS ನಂತ ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ತರಭೇತಿ ನೀಡಲು ರಚಿಸುವುದು ಸಮುದಾಯದ ಜನರ ಸಂಕಷ್ಟಕ್ಕೆ ಸ್ಪಂದಿಸಲು ನೆರವಾಗುವಂತೆ ದೊಡ್ಡ ಮಟ್ಟದಲ್ಲಿ ಈ ಸಂಘವನ್ನು ನಿರ್ಮಿಸಲು ನಾವೆಲ್ಲಾರು ಪಕ್ಷಾತೀತವಾಗಿ ಕಟ್ಟಲು ಪ್ರಾಮಾಣಿಕವಾಗಿ ಪ್ರಯತ್ನವನ್ನು ಮಾಡುತ್ತೇವೆ ಎಂದರು.
ಈ ಸಂಘವು ರಾಜ್ಯ ಮಟ್ಟದಲ್ಲಿ ಸಮಿತಿ ರಚಿಸಿ ನಂತರ ಜಿಲ್ಲಾ ಹಾಗೂ ತಾಲ್ಲೂಕು ಹಂತದಲ್ಲಿ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಈ ಬೈಲಾ ನಲ್ಲಿ ಕೆಲವು ನಿಯಮಗಲನ್ವಯ ಮಾಡುತ್ತಿದ್ದು
ಈ ಸಮಿತಿಗೆ 30 ಜನರ ಸದಸ್ಯರ ಆಯ್ಕೆ ಮಾಡಬೇಕಾಗಿದೆ
ಮತ್ತು ತಾಲ್ಲೂಕು ಮಟ್ಟದಲ್ಲಿ ಮಾದರ ಮಹಾ ಸಭಾ ಇದೆ
ರಾಜ್ಯ ಮಟ್ಟದ ಸಮಿತಿಯ ಚುನಾವಣೆ ನಡೆಸಿ ಹಂತ ಹಂತವಾಗಿ ನಿರ್ಮಿಸಲು ನಿರ್ದರಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ,ಮಾಜಿ ಸಚಿವರಾದ ಹೆಚ್.ಆಂಜನೇಯ, ಮಾಜಿ ಸಂಸದರಾದ ಎಲ್.ಹನುಮಂತಯ್ಯ,ಚಂದ್ರಪ್ಪ,ಹಾಗೂ ವಿ.ಪ.ಶಾಸಕರಾದ ಡಾ.ತಿಮ್ಮಯ್ಯ ಧರ್ಮಸೇನ, ಹಾಗೂ ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್, ಶಿವಪ್ಪ ,ಪುರುಷೋತ್ತಮ್, ದೊಡ್ಡೇರಿ ವೆಂಕಟೇಶ್ ,ಕೋಗಿಲು ವೆಂಕಟೇಶ್,ರಾಮಕೃಷ್ಣ ,ಮಾತಾಂಗ ಲೋಕೇಶ್,ವೆಂಕಟೇಶ್ ಹಾಗೂ ಸಮುದಾಯಾ ಮುಖಂಡರು ಉಪಸ್ಥಿತರಿದ್ದರು.