ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಭೆ :ಡಿವೈಎಸ್‍ಪಿ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಸಭೆ

ಮಧುಗಿರಿ : ಮಧುಗಿರಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಧುಗಿರಿ ಉಪ ವಿಭಾಗ ಮಟ್ಟದ ಪೊಲೀಸ್ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಭೆ ನಡೆಸಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಅಸ್ಪಶ್ಯತೆ ಇನ್ನೂ ಜೀವಂತವಾಗಿದೆ. ದೇವಸ್ಥಾನಗಳಿಗೆ ಪ್ರವೇಶವಿಲ್ಲ, ಅಲ್ಲದೆ ದಲಿತರ ಮೇಲೆ ದೌರ್ಜನ್ಯ ನಡೆದಾಗ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು. ಹಳ್ಳಿಗಳಲ್ಲಿ ಅಕ್ರಮ ಮಧ್ಯ ಮಾರಾಟದ ಹಾವಳಿ ಜಾಸ್ತಿಯಾಗಿದ್ದು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗ್ತಾ ಇದೆ. ಮಧುಗಿರಿ ಸುತ್ತಮುತ್ತ ಮರಳು ಮತ್ತು ಮಣ್ಣು ಸಾಗಾಟ ಹೆಚ್ಚಾಗಿದೆ. ವಸತಿ ಶಾಲೆಗಳ ಸುತ್ತಮುತ್ತ ಪುಂಡರ ಹಾವಳಿ ಬಗ್ಗೆ ತಿಳಿಸಲಾಯಿತು ಎಂದರು.

ದಲಿತ ಮುಖಂಡ ವೆಂಕಟೇಶ್ ಕೊರಟಗೆರೆ ಅವರು ಮಾತನಾಡಿ ಸಭೆಗಳಿಗೆ ಮಹಿಳೆಯರಿಗೆ ಆದ್ಯತೆ ಕೊಡಿ ಕುರುತಕ್ಕೆ ಕಡಿವಾಣ ಕ್ರಮಕ್ಕೆ ಮಹಿಳೆಯರಿಂದ ಮಾತ್ರ ಸಾಧ್ಯ. ಇಂತಹ ಕಾರ್ಯಕ್ರಮಗಳನ್ನು ಮೂರು ರಿಂದ ನಾಲ್ಕು ದಿನಗಳ ಮುಂಚೆ ತಿಳಿಸಬೇಕೆಂದು ಮನವಿ ಮಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ dysp ಮಂಜುನಾಥ್ ಮಾತನಾಡಿ, ತಾವೆಲ್ಲರು ಸಭೆಗೆ ಆಗಮಿಸಿ ಅಗತ್ಯವಾದ ಬೇಡಿಗೆಳನ್ನು ತಿಳಿಸಿದ್ದಿರಿ, ತಮ್ಮೆಲ್ಲ ಬೇಡಿಕೆಗಳನ್ನು ಮುಂಬರುವ ದಿನಗಳಲ್ಲಿ ಈಡೇರಿಸುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ 10 ಪೊಲೀಸ್ ಠಾಣಾ ವ್ಯಾಪ್ತಿ ಸೇರಿದಂತೆ ಕೊರಟಗೆರೆ ವೆಂಕಟೇಶ್. ಸಿದ್ದಪ್ಪ.ಮೆಡಿಕಲ್ ಹನುಮಂತರಾಜು ಕೊರಟಗೆರೆ ತಾಲೂಕು bsp ಉಪಾಧ್ಯಕ್ಷರಾದ ಶಿವುದರ್ಶನ್ ಅನೇಕರು ಭಾಗವಹಿಸಿದ್ದರು.

ವರದಿ : ಭರತ್ ಕೆ