ಭೂ ಸ್ವಾದೀನ ಕೈ ಬಿಟ್ಟಿರುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ– ಪುರುಷೋತ್ತಮ ಗೌಡ
ದೊಡ್ಡಬಳ್ಳಾಪುರ:ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಹದಿಮೂರು ಗ್ರಾಮಗಳ 1.777ಎಕರೆ ಭೂಮಿಯನ್ನು ಕೆ. ಐ. ಎ. ಡಿ. ಬಿ. ಸ್ವಾದಿನ ಮಾಡಿಕೊಳ್ಳುವುದನ್ನು ಕೈ ಬಿಟ್ಟಿರುವ ಸರ್ಕಾರದ ನಿಲುವು ಸ್ವಾಗತಾರ್ಹ ಎಂದು ನಾರಾಯಣಗೌಡರ ರಕ್ಷಣಾ ವೇದಿಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ವಿ. ಪುರುಷೋತ್ತಮ್ ಗೌಡ ಹೇಳಿದ್ದಾರೆ.
ಸುಮಾರು ಮೂರು ವರ್ಷಗಳಿಂದ ಸುದೀರ್ಘ ರೈತರ ಹೋರಾಟಕ್ಕೆ ಮಣಿದು ಸರ್ಕಾರ ಭೂ ಸ್ವಾದೀನ ಕೈ ಬಿಟ್ಟಿದೆ. ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕರಣದ ಹೆಸರಲ್ಲಿ ಕಾರ್ಪೊರೇಟ್ ಕಂಪನಿಗಳಿಗೆ ನೀಡುವುದರಿಂದ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಹಲವಾರು ಗ್ರಾಮಗಳ ರೈತರ ಬದುಕು ಮುರಾಬಟ್ಟೆ ಯಾಗುತ್ತಿತ್ತು. ಜೊತೆಗೆ ಈಗಾಗಲೇ ಉದ್ಯೋಗಕ್ಕಾಗಿ ಉತ್ತರ ರಾಜ್ಯಗಳಿಂದ ಬರುತ್ತಿರುವ ವಲಸಿಗರ ಹಾವಳಿ ನಮ್ಮ ಜಿಲ್ಲೆಯಲ್ಲಿ ಹೆಚ್ಚಾಗುತ್ತಿತ್ತು. ಇವೆಲ್ಲದಕ್ಕಿಂತ ಮುಖ್ಯವಾಗಿ ಜಿಲ್ಲೆಯಲ್ಲಿ ಈಗಾಗಲೇ ವಸತಿ, ವಾಣಿಜ್ಯ ಮತ್ತಿತರ ಉದ್ದೇಶಗಳಿಗಾಗಿ ಸಾಕಷ್ಟು ಕೃಷಿ ಭೂಮಿ ಬಳಕೆಯಾಗಿದ್ದು ಕೃಷಿಯನ್ನೇ ನಂಬಿದ್ದ ರೈತರು ಬೀದಿಗೆ ಬಂದಿರುವುದು ನಮ್ಮ ಕಣ್ಮುಂದಿದೆ. ಹಾಗಾಗಿ ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಕೃಷಿ ಭೂಮಿ ಸ್ವಾದೀನ ಪಡಿಸಿಕೊಳ್ಳುವುದನ್ನು ಕರವೇ ವಿರೋದಿಸುತ್ತದೆ. ಒಟ್ಟಾರೆ ಸುಮಾರು ದಿನಗಳ ಚನ್ನರಾಯಪಟ್ಟಣ ಹೋಬಳಿ ರೈತರ ಅಹರ್ನಿಷಿ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಇದೊಂದು ಐತಿಹಾಸಿಕ ಜಯವಾಗಿದ್ದು ಇದಕ್ಕಾಗಿ ಶ್ರಮಿಸಿದ ರೈತರು ಹಾಗೂ ಹಲವಾರು ಸಂಘಟನೆಗಳ ಹೋರಾಟಗಾರರು ಅಭಿನಂದನಾರ್ಹರು. ಮುಖ್ಯವಾಗಿ ರೈತರ ಮನವಿಯನ್ನು ಪುರಸ್ಕರಿಸಿ ಸ್ವಾದೀನ ಕೈಬಿಟ್ಟಿರುವ ಸರ್ಕಾರ ದ ನಿರ್ಧಾರ ಶ್ಲಾಘನೀಯವಾದುದು ಎಂದು ಪುರುಷೋತ್ತಮ್ ಗೌಡ ಹೇಳಿದರು