O2 ಅಕಾಡೆಮಿ ಮತ್ತು ಬೆಳದಿಂಗಳು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಉದ್ಘಾಟನೆ

ದೊಡ್ಡಬಳ್ಳಾಪುರ:ಬಡ-ಮದ್ಯಮ ವರ್ಗದ ಜನ ಸಾಮಾನ್ಯರಿಗೆ ಉತ್ತಮ ಗುಣಮಟ್ಟದ-ಸಮಗ್ರ ಸೇವೆಗಳನ್ನು ನೀಡುವ ಉದ್ದೇಶದಿಂದ ಓ -2 ಅಕಾಡೆಮಿ ಮತ್ತು ಬೆಳದಿಂಗಳು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ತಾಲೂಕಿನ ಹಿರಿಯ ರಾಜಕಾರಣಿ, ರಂಗ ಕಲಾವಿದರು, ಕಂಟನಕುಂಟೆ ಲಯನ್ಸ್ ಕಿಂಗ್ ಅಧ್ಯಕ್ಷ ಕೃಷ್ಣಮೂರ್ತಿ ಮತ್ತು ಎಲ್ಲಾ ಗಣ್ಯರು ಬುದ್ಧರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಿದರು

ನಗರದ ಹಳೆಯ ಬಸ್ ನಿಲ್ದಾಣದ ಕೆ ಎಸ್ ಆರ್ ಟಿ ಸಿ ಬಸ್ ಸಭಾಂಗಣದಲ್ಲಿ ಅ ಯೋಜನೆ ಮಾಡಲಾದ ಓ .2 ಅಕಾಡೆಮಿ ಮತ್ತು ಬೆಳದಿಂಗಳು ಸ್ವರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಮೇಲ್ವರ್ಗದವರು ಅರ್ಥಿಕ ಹಾಗು ಸಾಮಾಜಿಕ ರಾಜಕೀಯ ಶೈಕ್ಷಣಿಕ ಕ್ಷೇತ್ರದಲ್ಲಿ ದೃಢವಾಗಿದ್ದು ತಮ್ಮದೆ ಅದ ಚಾಪು ಮೂಡಿಸಿ ಸಮಸ್ಯೆಗಳಿಂದ ದೂರವಿದ್ದಾರೆ.

ಬಡ ಮಧ್ಯಮ ವರ್ಗದವರು ದಿನ ನಿತ್ಯದ ಸಮಸ್ಯೆಗಳಿಂದ ತೂಂದರೆಗೆ ಒಳಗಾಗಿ ಶೈಕ್ಷಣಿಕವಾಗಿ ಆರ್ಥಿಕ ಸಾಮಾಜಿಕ ರಾಜಕೀಯ ವಾಗಿ ಮೇಲೆ ಬರಲು ಸಾಧ್ಯವಾಗಿದೆ ಸಮಸ್ಯೆಯಲ್ಲಿದ್ದಾರೆ ಎಂದರು
ನಂತರ ಡಾ. ಪರಮೇಶ್ವರ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸೌಭಾಗ್ಯ ಸೇವೆಗಳ ಒಕ್ಕೂಟದ ಸಹಭಾಗಿತ್ವದಲ್ಲಿ ಘನ ಕರ್ನಾಟಕ ಸರ್ಕಾರದ ಮುಂದಾಳತ್ವದಲ್ಲಿ ಗೌರಿಬಿದನೂರು, ದೊಡ್ಡಬಳ್ಳಾಪುರ ಹಾಗೂ ಯಲಹಂಕ ಪ್ರದೇಶಗಳಲ್ಲಿ ಪ್ರಾರಂಭಿಸುವುದರೊಂದಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಲು ಪೈಲಟ್ ಅದ್ಯಯನ ಅನುಷ್ಟಾನದ ಕ್ರಿಯಾಯೋಜನೆ ಎಂದರು.
ಸೌಭಾಗ್ಯ ಸೇವಾ ಟ್ರಸ್ಟ್ ಮೂಲಕ 100 ಸೇವಾ ಸವಲತ್ತುಗಳನ್ನು ಹೊಂದಿರುವ ಸೌ-ಭಾಗ್ಯ ಕಾರ್ಯಕ್ರಮಗಳ ಪೈಲಟ್ ಅದ್ಯಯನ- ಅನುಷ್ಟಾನದ ಕ್ರೀಯಾ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸೌ-ಭಾಗ್ಯ ಸರಣಿ ಕಾರ್ಯಕ್ರಮಗಳ ಅಡಿಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಮಗ್ರ-ವ್ಯವಸ್ಥಿತ ಸೇವಾ ಸವಲತ್ತುಗಳನ್ನು ಅಭಿವೃದ್ಧಿ ಪಡಿಸಲು ಉದ್ದೇಶಿಲಾಗಿದೆ. ಎಂದು ಸೌಭಾಗ್ಯ ಸೇವಾ ಟ್ರಸ್ಟಿನ್ ಅಧ್ಯಕ್ಷ ಜಿ ರಾಜಗೋಪಾಲ್ ತಿಳಿಸಿದರು.

ಅಕಾಡೆಮಿಯ ಕಾರ್ಯ ನಿರ್ವಾಹಕ ಮಾಳ್ವ ನಾರಾಯಣ ಮಾತನಾಡಿ ನಾಗರೀಕ ಸಮಾಜದಲ್ಲಿ ಪ್ರತಿ ಹೊಸ ತಲೆಮಾರಿನ ಮಕ್ಕಳು ಹಾಗೂ ಯುವ ಜನರು ಆಯಾ ಕಾಲಮಾನದ ಅನುಗುಣವಾಗಿ ವಿದ್ಯಾಭ್ಯಾಸ ‘ಮಾಡಿ ಉದ್ಯೋಗಾನ್ವೇಷಣೆ ಮಾಡುತ್ತಾರೆ. ಉದ್ದೇಶ ಒಂದೇ ಆದರೂ ಪ್ರತಿ ತಲೆಮಾರಿನವರಿಗೂ ಆಯಾ ಕಾಲಮಾನದ ಚಾಲೆಂಜಸ್ ಇರುತ್ತವೆ. ಪ್ರತಿ ತಲೆಮಾರಿನ ಪೋಷಕರು ಸಹ ತಮ್ಮ ತಮ್ಮ ಮಕ್ಕಳ ಶಿಕ್ಷಣ. ಉದ್ಯೋಗಕ್ಕಾಗಿ ಜೀವನವನ್ನು ಮುಡುಪಿಡುತ್ತಾರೆ. ಆಯಾ ಕಾಲಮಾನಕ್ಕೆ ತಕ್ಕಂತೆ ಶಿಕ್ಷಣಕ್ಕಾಗಿ ಹಣ ವಿನಿಯೋಗಿಸುತ್ತಾರೆ. ನಿರಂತರ ಬೆಲೆಯೇರಿಕೆಯ ಕಾರಣದಿಂದಾಗಿ ಶಿಕ್ಷಣಕ್ಕಾಗಿ ತಗುಲುವ ವೆಚ್ಚವು ಬಡ ಮದ್ಯಮ ವರ್ಗದ ಕುಟುಂಬಗಳಿಗೆ ಹೊರೆಯಾಗಿರುತ್ತದೆ. ಮುಂದಿನ ತಲೆಮಾರಿಗೆ ಹೊಸ ವ್ಯವಸ್ಥೆ ರೂಪುಗೊಂಡು ಆ ಕಾಲದ ಪೋಷಕರು ಮತ್ತು ಮಕ್ಕಳಿಗೆ ಹೊಸ ರೀತಿಯ ಹೊರೆಯಾಗಿ ಪರಿವರ್ತನೆ ಆಗುತ್ತದೆ. ಕಾಲ ಕಾಲಕ್ಕೆ ಶಿಕ್ಷಣದ ವೆಚ್ಚವು ಹೆಚ್ಚಾಗುತ್ತಲೇ ಇರುತ್ತದೆ. ಸೌಭಾಗ್ಯ ಅಭಿಯಾನದ ಅಡಿಯಲ್ಲಿ ಓ-2 ಅಕಾಡೆಮಿ ಮೂಲಕ ಪ್ರಸ್ತುತ ಮತ್ತು ಮುಂದಿನ ತಲೆಮಾರಿನ ಜನರಿಗೆ ಸಾದ್ಯವಾದಷ್ಟು ಕಡಿಮೆ ವೆಚ್ಚದಲ್ಲಿ ಸುಸ್ಥಿರವಾದ ಶೈಕ್ಷಣಿಕ ಹಾಗೂ ನಿರಂತರ ಕೌಶಲ್ಯ ಅಭಿವೃದ್ಧಿಯ ವ್ಯವಸ್ಥೆಯನ್ನು ರೂಪಿಸುವ, ಬಲಪಡಿಸುವ ಪರಿಕಲ್ಪನೆಯನ್ನು ಸೌಭಾಗ್ಯ ಸೇವಾ ಟ್ರಸ್ಟಿನ O2 ಅಕಾಡಮಿ ತಮ್ಮ ಗುರಿಯನ್ನು ಸಾಧಿಸಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ಸಿಂಚನ ಗಾರ್ಮೆಟ್ಸ್ ಎಂಡಿ ನರೇಶ್ . ವಕೀಲ ಸಿದ್ಧಾರ್ಥ ಸಂಪನ್ಮೂಲ ವ್ಯಕ್ತಿಗಳಾದ ಶಿವಕುಮಾರ್ . ವಿಶ್ವನಾಥ್ ಕೆ ಎಸ್ ಆರ್ ಟಿ ಸಿ ಘಟಕ ವ್ಯವಸ್ಥಾಪಕ ವೆಂಕಟರಾಘವನ್, ಪ್ರಾಂಶುಪಾಲ ಎಂ.ಸಿ ಮಂಜುನಾಥ್, ನಗರ ಸಭೆ ಸದಸ್ಯ ಶಿವಶಂಕ‌ರ್, ಯುವ ಮುಖಂಡ ರಾಘವ,ರಾಜಾನುಕುಂಟೆ ಇನ್ಫೋಮ್ಯಾಟಿಕ್ ಪಬ್ಲಿಕ್ ಸ್ಕೂಲ್ ನ ರಾಜೇಶ್ ಕೇಶವಮೂರ್ತಿ ಶ್ರೀಮತಿ ಲಲಿತ, ರವಿಚಂದ್ರ ಗಂಗರಾಜು ಮನೋಹರ್. ಮ್ಯಾಟ್ರಿಕ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ರಾಜಾನುಕುಂಟೆ.ವಿದ್ಯಾರ್ಥಿಗಳು.
ಮುಂತಾದವರು ಹಾಜರಿದ್ದರು.