ಹೊಸಕೋಟೆ ತಾಲೂಕು ವಕೀಲರ ಸಂಘದ ವತಿಯಿಂದ ಸರ್ಕಾರಿ ಬಾಲಕರ ಪ್ರೌಢಶಾಲೆ ಹೊಸಕೋಟೆಯಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ
ತಾವರೆಕೆರೆ : ಹೊಸಕೋಟೆ ತಾಲೂಕಿನ ವಕೀಲರ ಸಂಘದ ವತಿಯಿಂದ ಸರ್ಕಾರಿ ಬಾಲಕರ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕಾರ್ಯಕ್ರಮ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಹೊಸಕೋಟೆ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕಾರ್ಯಕ್ರಮವನ್ನು ಹೊಸಕೋಟೆ ಸರ್ಕಾರಿ ಬಾಲಕರ ಪ್ರೌಢಶಾಲೆಯ ಆವರಣದಲ್ಲಿ ಅರುಣ್ ಕುಮಾರ್. ಜಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಈಗಿನ ವಿದ್ಯಾರ್ಥಿಗಳು ಕಾನೂನಿನ ಅರಿವು ಅತಿ ಮುಖ್ಯ ಅದರಲ್ಲೂ ಯುವ ಪೀಳಿಗೆ ದುಡ್ಡಿನ ಮೋಹಕ್ಕೆ ಬಲಿಯಾಗಿ ಐತಕರ ಘಟನೆಗಳ ಹಾಗೂ ಮನುಷ್ಯ ಮನುಷ್ಯನನ್ನೇ ಮಾರುವ ದುರ್ ಸ್ಥಿತಿಗೆ ಈಗ ನಾವು ತಲುಪಿದ್ದೇವೆ ಮನುಷ್ಯ ಮಾದಕ ವಸ್ತುಗಳಿಗೆ ಆಕರ್ಷಿತಗೊಂಡು ಅದರ ಅಮಲಿನಲ್ಲಿ ಇತರ ಮನುಷ್ಯರ ಜೀವನಕ್ಕೆ ಕುತ್ತು ತರುವಂತ ಘಟನೆಗಳು ನಡೆಯುತ್ತವೆ ಕಾನೂನಿನ ಅಡಿಯಲ್ಲಿ ಎಲ್ಲರೂ ಒಂದೇ ಯಾರು ಕಾನೂನು ಬಾಹಿರ ಕೆಲಸಗಳಿಗೆ ಒಳಪಡುತ್ತಾರೋ ಅಂತಹ ವ್ಯಕ್ತಿಗಳಿಗೆ ಕಾನೂನು ತಕ್ಕ ಶಾಂತಿ ನೀಡುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೊಸಕೋಟೆ ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ರಮೇಶ್.ಕೆ ಮಾತನಾಡಿ ತಾಲೂಕಿನಲ್ಲಿ ನಮ್ಮ ವಕೀಲರ ಸಂಘವು ಅನೇಕ ಸಮಾಜಮುಖಿ ಕೆಲಸಗಳು ಹಾಗೂ ನಾನ ಶಾಲೆಗಳಲ್ಲಿ ಹಲವು ಬಾರಿ ಕಾನೂನು ಅರಿವು ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದೇವೆ ಅದೇ ರೀತಿ ಈ ದಿನ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಅರ್ಥಪೂರ್ಣವಾಗಿ ಕಾನೂನು ಅರಿವು ಕಾರ್ಯಕ್ರಮ ಮಾಡಲಾಗಿದೆ ಇದರ ಮುಖ್ಯ ಉದ್ದೇಶ ವಿದ್ಯಾರ್ಥಿಗಳು ಮುಖ್ಯವಾಗಿ ಕಾನೂನಿನ ಅಡಿಯಲ್ಲಿ ಬರುವಂತಹ ವಿಧಯಗಳನ್ನು ತಿಳಿದುಕೊಳ್ಳಬೇಕು 18 ವರ್ಷ ತುಂಬುವವರೆಗೂ ಯಾರು ಸಹ ವಾಹನ ಚಲಾವಣೆ ಮಾಡುವಂತಿಲ್ಲ ಆದರೆ ಈಗಿನ ಯುವ ಪೀಳಿಗೆ ಯಾವುದನ್ನು ಲೆಕ್ಕಿಸದೆ ವಾಹನ ಚಲಾವಣೆ ಮಾಡುತ್ತಾರೆ ಇದರಿಂದ ಹೆಚ್ಚಾಗಿ ಅಪಘಾತಗಳು ಹಾಗೂ ಇತರರಿಗೆ ತೊಂದರೆಯಾಗುವ ಸನ್ನಿವೇಶಗಳು ಸಹ ಈಗ ನಡೆಯುತ್ತಿವೆ 18 ವರ್ಷ ತುಂಬಿದ ನಂತರ ಲೈಸೆನ್ಸ್ ಮಾಡಿಸಿ ನಂತರ ಚಲಾಯಿಸಿದರೆ ಆಗ ಆ ಯುವಕ ಕಾನೂನಿನ ಅಡಿಯಲ್ಲಿ ಇದ್ದಾನೆ ಎಂದು ಅರ್ಥ ಹಾಗೂ ದುಡ್ಡಿನ ಆಸೆಗೆ ಮಾದಕ ವಸ್ತುಗಳಿಗೆ ವಿದ್ಯಾರ್ಥಿಗಳಿಗೆ ಪಾಲಿಸಿಕೊಂಡು, ಹಾಗೂ ಇತರ ಬಡ ವ್ಯಕ್ತಿಗಳನ್ನು ಕಿಡ್ನಾಪ್ ಮಾಡಿ ವ್ಯಕ್ತಿಯ ದೇಹದ ಭಾಗಗಳನ್ನು ಮಾರುವ ಸನ್ನಿವೇಶಗಳು ದೇಶ ರಾಜ್ಯ ಹೀಗೆ ಎಲ್ಲಾ ಕಡೆಗಳಲ್ಲಿ ಹೆಚ್ಚಾಗಿ ನಡೆಯುತ್ತಿದ್ದು ಇವುಗಳ ಬಗ್ಗೆ ಹೆಚ್ಚಾಗಿ ವಿದ್ಯಾರ್ಥಿಗಳು ತಿಳಿದುಕೊಂಡು ಬಾಳಬೇಕು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಅರುಣ್ ಕುಮಾರ್ .ಜಿ ಹಿರಿಯ ಸಿವಿಲ್ ನ್ಯಾಯಾಧೀಶರು ಹೊಸಕೋಟೆ, ರಮೇಶ್ ಕೆ ವಕೀಲರ ಸಂಘದ ಅಧ್ಯಕ್ಷರು, ಶಿಲ್ಪ ಎನ್.ಎಸ್ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹೊಸಕೋಟೆ, ಪ್ರೇಮ ಮುಖ್ಯ ಶಿಕ್ಷಕರು, ಕೆ ಎಂ ರವಿಕುಮಾರ್ ಉಪಾಧ್ಯಕ್ಷರು ವಚನ ಸಂಘ ಹೊಸಕೋಟೆ, ಕೃಷ್ಣಪ್ಪ ಪ್ರಧಾನ ಕಾರ್ಯದರ್ಶಿ ವಕೀಲರ ಸಂಘ ಹೊಸಕೋಟೆ, ಆನಂದ ಜಂಟಿ ಕಾರ್ಯದರ್ಶಿ ವಕೀಲರ ಸಂಘ ಹೊಸಕೋಟೆ, ರುಕ್ಮಿಣಿ ಎಂ ಜಯರಾಮ್ ಖಜಾನ್ಸಿ ವಕೀಲರ ಸಂಘ ಹೊಸಕೋಟೆ, ಲಕ್ಷ್ಮಣ್ ಮೂರ್ತಿ ವಕೀಲರ ಹೊಸಕೋಟೆ, ವಕೀಲರ ಸಂಘದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಶಾಲಾ ಶಿಕ್ಷಕರು ಮತ್ತು ಮಕ್ಕಳು ಪೊಲೀಸ್ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು.