*ಜ್ಞಾನವಿಕಾಸ ಕಾರ್ಯಕ್ರಮದಡಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮ
ಮಂಡ್ಯ: ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ ) ಭಾರತಿನಗರ ತಾಲೂಕು ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಬರುವಂತಹ
ಅಣ್ಣೂರು ವಲಯ ಮಡೇನಹಳ್ಳಿ ಕಾರ್ಯಕ್ಷೇತ್ರದಲ್ಲಿ ಮಹಿಳಾ ಜ್ಞಾನ ವಿಕಾಸ ಕೇಂದ್ರ ಹಾಗೂ ಸ್ಪಂದನ ಆಸ್ಪತ್ರೆಯ ಸಹಯೋಗದಲ್ಲಿ ಅರೋಗ್ಯ ತಪಾಸಣೆ ಶಿಬಿರ ವನ್ನು ಏರ್ಪಡಿಸಿದ್ದು, ಕಾರ್ಯಕ್ರಮವನ್ನು ಎಲ್ಲಾ ಗಣ್ಯರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಊರಿನ ಮುಖಂಡರಾದ ಸುರೇಶ್ ರವರು ಯೋಜನೆ ಯ ಬಗ್ಗೆ ತಿಳಿಸುತ್ತ, ಈ ಕಾರ್ಯಕ್ರಮ ಮಾಡಿದ್ದೂ ಉತ್ತಮ ವಾದ ಕೆಲಸ, ಧರ್ಮಸ್ಥಳ ಯೋಜನೆ ಒಳ್ಳೆಯ ಕೆಲಸಗಳನ್ನು, ಸೇವೆಯನ್ನು ಕೊಡುತ್ತಿದ್ದಾರೆ, ಇಂತಹ ಸೇವೆಯನ್ನು ಇನ್ನಷ್ಟು ಅಭಿವೃದ್ಧಿ ಗೊಳಿಸುವಲ್ಲಿ ನಾವೆಲ್ಲರೂ ಕೈ ಜೋಡಿಸಿ ಸಹಕಾರ ನೀಡಬೇಕು, ಯೋಜನೆ ಯಲ್ಲಿ ಇಂತಹ ಹಲವಾರು ಕಾರ್ಯಕ್ರಮ ಗಳು ಇದೆ, ಇದರ ಸದುಪಯೋಗ ಪಡೆದು ಮಹಿಳೆಯರು, ಮುಂದೆ ಬರಬೇಕು, ಎಂದು ತಿಳಿಸಿದರು.
ತಾಲೂಕು ಯೋಜನಾಧಿಕಾರಿ ಸುವರ್ಣ ಭಟ್ ಮಾತನಾಡಿ ಜ್ಞಾನ ವಿಕಾಸ ಕಾರ್ಯಕ್ರಮ ದಲ್ಲಿ ಮಹಿಳೆಯರು ಮುಖ್ಯ ವಾಹಿನಿಗೆ ಬರುವಲ್ಲಿ ಅನೇಕ ತರಬೇತಿ ಗಳನ್ನು ನೀಡುತ್ತಿದ್ದೂ, ಸಂಪನ್ಮೂಲ ವ್ಯಕ್ತಿ ಯವರಿಂದ ಮಾಹಿತಿ ನೀಡಿ, ಸದಸ್ಯರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತೀದ್ದೇವೆ, ವಾತ್ಸಲ್ಯವರದಿಮನೆ, ಮಾಶಾಸನ ವ್ಯವಸ್ಥೆ, ಸುಜ್ಞಾನ ನಿಧಿ, ಅರೋಗ್ಯ ವಿಮೆ, ಈಗೆ ಯೋಜನೆಯ ಕಾರ್ಯಕ್ರಮ ಗಳ ಬಗ್ಗೆ ತಿಳಿಸಿದರು, ಸಂಘದ ಬ್ಯಾಂಕ್ ವ್ಯವಹಾರ ಗಳ ಬಗ್ಗೆ ವಿವರಿಸಿದರು.
ಜನ ಜಾಗೃತಿ ವೇದಿಕೆ ಸದಸ್ಯರಾದ ರವಿಕುಮಾರ್ ಮಾತನಾಡಿ, ಯೋಜನೆ ಮಂಡ್ಯ ಜಿಲ್ಲೆ ಯಲ್ಲಿ ಹಲವಾರು ಉತ್ತಮ ಕೆಲಸ ವನ್ನು ಮಾಡುತ್ತಿದ್ದಾರೆ, ಆದರೆ ಕೆಲವೊಂದು ವಿಚಾರ ಗಳ ಬಗ್ಗೆ ಅಪಪ್ರಚಾರ ವಾಗುತ್ತಿದ್ದು ಕೇಳಿದ ವಿಷಯ ವನ್ನು ಬಿಟ್ಟು, ನಮಿಗೆ ಏನು ಗೊತ್ತಿದೆ, ನಮ್ಮ ಊರಿನ ದೇವಸ್ಥಾನ ಕ್ಕೆ ಕ್ಷೇತ್ರ ದಿಂದ ಅನುದಾನ ಸಿಕ್ಕಿದ್ದು, ಯೋಜನೆ ಯಿಂದ ಸಾಲ ಪಡೆದು ತುಂಬಾ ಸದಸ್ಯರು ಅಭಿವೃದ್ಧಿ ಹೊಂದಿದ್ದಾರೆ. ಇಷ್ಟನ್ನು ಮಾತ್ರ ನಾವು ನೋಡಿಕೊಂಡು ನಮಗೆ ಯೋಜನೆ ಏನು ಮಾಡಿದೆ, ಇಷ್ಟೆಲ್ಲ ಕಾರ್ಯಕ್ರಮ ಗಳನ್ನು ಯಾರೂ ಮಾಡಲು ಸಾಧ್ಯ ವಿಲ್ಲ, ಇಂತಹ ಯೋಜನೆ ನಮ್ಮ ಜಿಲ್ಲೆ ಯಲ್ಲಿ ಬೆಳೆಯಬೇಕು, ನಾವು ನಮ್ಮಿಂದ ಆದಷ್ಟು ಒಳ್ಳೇದು ಮಾಡಬೇಕು, ಆಗ ಮಾತ್ರ ಯಶಸ್ವಿ ಯಾಗಲು ಸಾಧ್ಯ, ಎಂದು ತಿಳಿಸಿದರು.
ನಂತರ ಮಾತನಾಡಿದ ಸ್ಪಂದನ ಆಸ್ಪತ್ರೆಯ ವೈದ್ಯರಾದ ಡಾ.ಭೂಮಿಕಾ ಮಾತನಾಡಿ ಆಸ್ಪತ್ರೆ ಯಲ್ಲಿ ನೀಡುವ ಸೌಲಭ್ಯ ಗಳ ತಿಳಿಸುತ್ತ, ಕ್ಯಾನ್ಸರ್ ಗೆ ಕಿಮೊತೆರಪಿ ವ್ಯವಸ್ಥೆ ಕೂಡ ಆಸ್ಪತ್ರೆ ಯಲ್ಲಿ ಲಭ್ಯ ವಿದೆ, ಹಾಗೆ ಯೋಜನೆ ಯಾ ವಿಮಾ ಸೌಲಭ್ಯ ಕ್ಕೆ ಸಂಬಂಧ ಪಟ್ಟ ಅರೋಗ್ಯ ರಕ್ಷಾ, ಸಂಪೂರ್ಣ ಸುರಕ್ಷಾ, ಸೌಲಭ್ಯ ದಲ್ಲಿ ಚಿಕಿತ್ಸೆ ವ್ಯವಸ್ಥೆ ಮಾಡಗುತಿದೆ. ಸದಸ್ಯರು ಯೋಜನೆ ಯ ವಿಮೆ ಮಾಡಿಸಿದ್ದಲ್ಲಿ ಆದರ ಸೌಲಭ್ಯ ವನ್ನು ಪಡೆದು ಕೊಳ್ಳುವಂತೆ ತಿಳಿಸಿದರು
ಈ ಆರೋಗ್ಯ ತಪಾಸಣೆ ಶಿಬಿರದಲ್ಲಿ ಹೃದಯಕ್ಕೆ ಸಂಬಂಧ ಪಟ್ಟಂತೆ ತಪಾಸಣೆ, ಬಿ ಪಿ, ಶುಗರ್ ಪರೀಕ್ಷೆ, ರಕ್ತ ಪರೀಕ್ಷೆ, ಇ. ಸಿ. ಜಿ ಯನ್ನು ಮಾಡಿಸಲಾಯಿತು.
ಈ ಆರೋಗ್ಯ ತಪಾಸಣೆ ಶಿಬಿರದಲ್ಲಿ 139 ಸದಸ್ಯರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಸುವರ್ಣ ಭಟ್, ವೈದ್ಯಾಧಿಕಾರಿ ಯವರಾದ ಡಾ. ಮನೋಜ್ , ಡಾ. ಭೂಮಿಕಾ , ಕೃಷಿ ಸಹಕಾರ ಸಂಘ ದ ನಿರ್ದೇಶಕರಾದ ವೆಂಕಟೇಶ್, ಶ್ರೀನಿವಾಸ್,ಸಿದ್ದರಾಮು , ಸ್ವಾಮಿ , ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಧರಣಿ , ರವಿಕುಮಾರ್ , ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಚಿತ್ರಾವತಿ, ಸೇವಾಪ್ರತಿನಿಧಿ ಉಮಾ ಹಾಗೂ ಊರಿನ ಮುಖಂಡರು, ಸದಸ್ಯರು ಭಾಗವಹಿಸಿದ್ದರು.
*ವರದಿ: ಸಾಯಿಕುಮಾರ್. ಎನ್. ಕೆ,*