” ಹೊಸಕೋಟೆ ತಾಲೂಕು ನೌಕರರ ಸಂಘದ ಅಧ್ಯಕ್ಷರಾಗಿ ಮುನಿಗಂಗಯ್ಯ ಅವಿರೋಧ ಆಯ್ಕೆ “
ತಾವರೆಕೆರೆ : ಹೊಸಕೋಟೆ ತಾಲ್ಲೂಕಿನ ನಂದಗುಡಿ ಹೋಬಳಿಯ ತಾವರೆಕೆರೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯದ ಮುನಿಗಂಗಯ್ಯ ರವರು ಹೊಸಕೋಟೆ ತಾಲೂಕು ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ತಾವರೆಕೆರೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸದಸ್ಯರಿಂದ ವಿಶೇಷ ಗೌರವ ಸೂಚಿಸಿದರು.
ನೂತನವಾಗಿ ಅಧ್ಯಕ್ಷರಾಗಿರುವ ಮುನಿಗಂಗಯ್ಯ ಮಾತನಾಡಿ ಹೊಸಕೋಟೆ ತಾಲೂಕಿನ 21 ಸರ್ಕಾರಿ ಇಲಾಖೆಗಳ 42 ಸದಸ್ಯರುಗಳ ಹಾಗೂ 10 ಜನ ನಾಮಿನಿ ಸದಸ್ಯರುಗಳ ಒಮ್ಮತದಿಂದ ತಾಲೂಕಿನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದೇನೆ ನಾನು ಮೊದಲು ಉಪಾಧ್ಯಕ್ಷನಾಗಿ ಕಾರ್ಯ ನಿರ್ವಹಿಸಿ ತದನಂತರ ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ ಡಾಕ್ಟರ್ ನಾರಾಯಣಸ್ವಾಮಿ ರವರು ತಾಲೂಕು ಕಾರ್ಯನಿರ್ವಹಣಾ ಅಧಿಕಾರಿಗಳಾಗಿ ಸೇವೆ ಸಲ್ಲಿಸಿ ಈಗ ನಿವೃತ್ತಿ ಹೊಂದಿದ್ದಾರೆ ನನ್ನ ಮೊದಲ ಕೃತಜ್ಞತೆ ಅವರಿಗೆ ಸಲ್ಲತಕ್ಕದ್ದು. ಹಾಗೂ ಎಲ್ಲಾ ನನ್ನ ಸರ್ಕಾರಿ ನೌಕರರ ಸಂಘದ ಮಿತ್ರರಿಗೆ ನನ್ನ ವೈಯಕ್ತಿಕವಾಗಿ ಧನ್ಯವಾದಗಳು ತಿಳಿಸುತ್ತೇನೆ. ಹಾಗೂ ನನ್ನ ಕಾರ್ಯ ವೈಖರಿ ನೋಡಿ ದೊರೆತ ಅಧಿಕಾರವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಕಾರ್ಯಗಳನ್ನು ಮಾಡಲು ಶ್ರಮಿಸುತ್ತೇನೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರಿಯಾಂಕ ರಮೇಶ್ ಮಾತನಾಡಿ ಗ್ರಾಮದ ಅಭಿವೃದ್ಧಿಗೆ ಪ್ರತಿಕ್ಷಣ ಶ್ರಮಿಸುತ್ತಿರುವ ಒಬ್ಬ ಉತ್ತಮ ಅಧಿಕಾರಿಯೆ ಎಂದರೆ ಅದು ನಮ್ಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯಾಗಿ ಮುನಿಗಂಗಯ್ಯ ರವರು ಅವರು ಪಂಚಾಯತಿಯ ಆಡಳಿತ ಅಧಿಕಾರ ವಹಿಸಿಕೊಂಡ ನಂತರ ಗ್ರಾಮದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳು ನಡೆದಿದ್ದು ಮುಂದೆ ನಡೆಯಲು ಸಹಕರಿಸುತ್ತಿದ್ದಾರೆ ಅವರಿಗೆ ದೊರೆತಿರುವ ತಾಲೂಕು ನೌಕರರ ಸಂಘದ ಅಧ್ಯಕ್ಷರ ಪದವಿ ನಮ್ಮೆಲ್ಲರಿಗೂ ಸಂತಸದ ವಿಷಯವಾಗಿದ್ದು ಅವರು ಇನ್ನೂ ಉತ್ತಮ ಕಾರ್ಯಗಳನ್ನು ಮಾಡಿ ಇನ್ನು ಉನ್ನತ ಶ್ರೇಣಿಗೆ ಹೋಗಲೆಂದು ಹರಿಸುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರಿಯಾಂಕ ರಮೇಶ್, ಉಪಾಧ್ಯಕ್ಷರಾದ ಅಶ್ವಿನಿ ದೇವರಾಜ್, ಮಾಜಿ ಅಧ್ಯಕ್ಷರಾದ ರವಿಕುಮಾರ್, ಪವಿತ್ರ ಮಂಜುನಾಥ್, ಮಾಜಿ ಉಪಾಧ್ಯಕ್ಷರಾದ ಸುಧಾಕರ್, ಬಸವ ಪ್ರಕಾಶ್, ನಿತಿನ್, ನಾಗೇಶ್, ಜಿಯಾವುಲ್ಲಾ , ಪಂಚಾಯತಿ ಸಿಬ್ಬಂದಿಯಾದ ರಾಜಣ್ಣ, ಮೀನಾಕ್ಷಿ, ಮಂಜುನಾಥ್, ಬಚ್ಚೇಗೌಡ ಹಾಗೂ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.