ಜನಸಂಖ್ಯೆಗೆ ಅನುಗುಣವಾಗಿ ಮಾದಿಗರಿಗೆ ಒಳಮೀಸಲಾತಿ ಜಾರಿಗೆ ತರಲೇಬೇಕು–ಶಂಕರಪ್ಪ

ದೇವನಹಳ್ಳಿ :- ಒಳಮೀಸಲಾತಿ ಜಾರಿ ನಿರ್ಲಕ್ಷಿಸಿದರೆ
ಮಾದಿಗರು ಬೀದಿಗೀಳಿದು ಪ್ರತಿಭಟನೆ ನಡೆಸಲಿ ದ್ದೇವೆಂದು ಕರ್ನಾಟಕ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾದ್ಯಕ್ಷ ಶಂಕ್ರಪ್ಪ ಅವರು
ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ದೇವನಹಳ್ಳಿ ತಾಲೂಕು ಚಪ್ಪರಕಲ್ಲು ಸರ್ಕಲ್ ನಿಂದ ಜಿಲ್ಲಾಡಳಿತ ಕಚೇರಿಯವರೆಗೂ ಕರ್ನಾಟಕ ರಾಜ್ಯ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಸದಾಶಿವ ಆಯೋಗ ಜಾರಿ ಸಂಬಂಧ ಅರೆ ಬೆತ್ತಲೆ ಮೆರವಣಿಗೆಯಲ್ಲಿ ಸಾಗುವ ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿ, ಸರ್ವೋಚ್ಚ ನ್ಯಾಯಾಲ ಯದ ಆದೇಶದಂತೆ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಲಾಗಿದೆ. ಆ.1 ರ ಇಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅರೆಬೆತ್ತಲೆ ಪ್ರತಿಭಟನೆ ನಡೆಸಲಾಗುತ್ತಿದೆ. ಒಳ ಮೀಸಲಾತಿ ಜಾರಿ ಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸುಪ್ರಿಂ ಕೋರ್ಟ್‌ ಆದೇಶ ನೀಡಿ ಇದೇ ಆಗಸ್ಟ್‌ಗೆ ಒಂದು ವರ್ಷ ಆಗುತ್ತಿದೆ. ಆದರೆ ಇದುವ ರೆಗೂ ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ  ಅರೆಬೆತ್ತಲೆ ಪ್ರತಿಭಟನೆ ಜನಾಂಗಕ್ಕೆ ಅನಿವಾರ್ಯ ವಾಗಿದೆ. ನಿವೃತ್ತ ನ್ಯಾಯಮೂರ್ತಿ ಸದಾಶಿವ ಆಯೋಗ ನಡೆಸಿದ್ದ ಸಮೀಕ್ಷೆಯಲ್ಲಿನ ಅಂಕಿ–ಅಂಶಗಳು ಸರಿ ಇಲ್ಲ ಎನ್ನುವ ಕಾರಣದಿಂದ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್‌ ಅವರ ನೇತೃತ್ವದಲ್ಲಿ ಮತ್ತೆ ಸಮೀಕ್ಷೆ ನಡೆಸಿದೆ. ಆದರೆ ಈ ಸಮೀಕ್ಷೆ ಮುಕ್ತಾಯ ವಾಗಿದ್ದರೂ ಇದುವರೆಗೂ ಸರ್ಕಾರ ಯಾವುದೇ ನಿರ್ಧಾರವನ್ನು ಪ್ರಕಟಿಸದೆ ಇರುವುದು ಖಂಡನೀಯ.
ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಹೊಸ ಕೋಟೆ ನೆಲಮಂಗಲ ದೊಡ್ಡಬಳ್ಳಾಪುರ ತಾಲೂಕು ಗಳಿಂದ ನಮ್ಮ ಜನಾಂಗದ ಪ್ರತಿಭಾವಂತ ಯುವಕ ರಿಂದ ಹಿಡಿದು ಪ್ರಗತಿಪರ ಸಂಘಟನೆಗಳು ನಮ್ಮ ಜೊತೆ ಕೈ ಜೋಡಿಸುವ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಈ ಮೂಲಕ ಎಚ್ಚರಿಕೆ ನೀಡುತಿದ್ದೇವೆ ಎಂದು ಕಿಡಿಕಾರಿದರು.

ಕರ್ನಾಟಕ ಮಾದಿಗ ಮೀಸಲಾತಿ ಹೋರಾಟದ ಪ್ರಚಾರ ಸಮಿತಿ ರಾಜ್ಯಾದ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಮಾತನಾಡಿ, ತಳ ಸಮುದಾಯಗಳ ಏಳಿಗೆಯನ್ನು ಸಹಿಸದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಏನನ್ನು ಕೂಡ ನಿರೀಕ್ಷಿಸಲಾಗದ ಭ್ರಷ್ಟ ಆಡಳಿತ ವ್ಯವಸ್ಥೆ ರಾಜ್ಯದ ಜನತೆಯನ್ನು ಕಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಚುನಾವಣಾ ಪ್ರಣಾಳಿಕೆ ಯಲ್ಲಿ ನ್ಯಾಯಮೂರ್ತಿ ಎಜೆ. ಸದಾಶಿವ ಆಯೋಗ ಜಾರಿ ಮಾಡಿಯೇ ತೀರುತ್ತೇವೆ ಎಂದು ಹೇಳಿ ಎರಡು ವರ್ಷ ಕಳೆದರೂ ವರದಿ ಜಾರಿ ಮಾಡಿ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ. ನೀತಿಗೆಟ್ಟ ಕಾಂಗ್ರೆಸ್ ಸರ್ಕಾರ ನ್ಯಾಯಮೂರ್ತಿ ನಾಗಮೋಹನ ದಾಸ್ ವರದಿಯನ್ನಾದರೂ  ಜಾರಿ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಅನಿರ್ದಿಷ್ಟ ಅವಧಿ ಮುಷ್ಕರವನ್ನು ಹಮ್ಮಿಕೊಳ್ಳುವ ಕಡಕ್ ಎಚ್ಚರಿಕೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯ ಹಿರಿಯ ಮುಖಂಡ ಹ್ಯಾಡಾಳ ದೇವರಾಜು, ಈರಪ್ಪ, ಜಾಂಭವ ಯುವ ಸೇನೆ ರಾಜ್ಯಾಧ್ಯಕ್ಷರು ರಮೇಶ್ ಚಕ್ರವರ್ತಿ, ಭರತ್,
ವೆಂಕಟಗಿರಿಕೋಟೆ ಮುನಿರಾಜು ಜನಾಂಗದ ಯುವ ಮುಖಂಡರಾದ ನರಸಿಂಹಮೂರ್ತಿ, ಬಿಜ್ಜವಾರ ಪ್ರಕಾಶ್, ಜಾಲಿಗೆ ವೆಂಕಟೇಶ್,  ಹೊಸಕೋಟೆ ನರಸಿಂಹಯ್ಯ, ಗಣೇಶ್, ನೆಲಮಂಗಲ ಪ್ರಕಾಶ್, ಅಂಜನಮೂರ್ತಿ, ಗಂಗಮ್ಮ, ದೊಡ್ಡಬಳ್ಳಾಪುರ ಟಿಡಿ. ಮುನಿಯಪ್ಪ, ಹನುಮಪ್ಪ, ಬಚ್ಚಹಳ್ಳಿ ನಾಗರಾಜ್, ತೊಬಗೆರೆ ಗಂಗರಾಜು ಸೇರಿದಂತೆ ನೂರಾರು ಮಾದಿಗ ಸಮುದಾಯದ ಮುಖಂಡರು ಹಾಗೂ ಕಾರ್ಯ ಕರ್ತರು ಹೋರಾಟದಲ್ಲಿ  ಪಾಲ್ಗೊಂಡಿದ್ದರು.
ಹಾಜರಿದ್ದರು.