*ಸುರಕ್ಷಾ. ಸಮೃಧ್ಧಿ ಫೌಂಡೇಷನ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ..*

ಚಾಮರಾಜನಗರ:ಸುರಕ್ಷಾ & ಸಮೃಧ್ಧಿ ಫೌಂಡೇಷನ್(ರಿ). ಗೂಳೀಪುರ ಚಾಮರಾಜನಗರ ಮತ್ತು ಹೆಲ್ಪ್ ಏಜ್ ಇಂಡಿಯಾ,ಚಾಮರಾಜನಗರ ವೈದ್ಯಕೀಯ ಆಸ್ಪತ್ರೆ , ಹಾಗೂ ಶ್ರದ್ದಾ ಐ ಕೇರ್ ಬೆಂಗಳೂರು ಸಹಯೋಗದೊಂದಿಗೆ ಅಮಚವಾಡಿ ಗ್ರಾಮದಲ್ಲಿ ದಿನಾಂಕ 30/07/2025ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ತೇಜಸ್ವಿನಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ವಹಿಸಿದ್ದರು. ಸುರಕ್ಷಾ & ಸಮೃಧ್ಧಿ ಫೌಂಡೇಶನ್ (ರಿ) ಅಧ್ಯಕ್ಷರಾದ ಶ್ರೀಮತಿ ಮಧುರವರು ದೀಪಾ ಬೆಳಗಿಸಿದರು.
ಮುಖ್ಯ ಅತಿಥಿಗಳಾಗಿ ವೀಣಾ ಪಿ ಡಿ ಓ ಅಮಚವಾಡಿ ಗ್ರಾಮ ಪಂಚಾಯಿತಿ. ಎಂ ಪ್ರಕಾಶ್ ಜಿಲ್ಲಾ ಸಂಚಾಲಕರು ಹೆಲ್ಪ್ ಏಜ್ ಇಂಡಿಯಾ, ಡಾ.ಅರ್ಪಿತಾ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳು ಭಾಗವಹಿಸಿದ್ದರು. ಈ ಶಿಬಿರದಲ್ಲಿ ಕಣ್ಣು, ಹೃದಯ, ಮೂಳೆ,ದಂತ,ರಕ್ತದೊತ್ತಡ, ಮಧುಮೇಹ , ಎಕ್ಸ್ ರೇ, ಕ್ಷಯರೋಗ, ಸಾಮಾನ್ಯ ಕಾಯಿಲೆ ತಪಾಸಣೆ ಮಾಡಿ ಸಲಹೆ ನೀಡುವುದರೊಂದಿಗೆ
ಉಚಿತವಾಗಿ ಔಷಧಿಯನ್ನು ವಿತರಿಸಲಾಯಿತು. ಈ ತಪಾಸಣಾ ಶಿಬಿರದಲ್ಲಿ 300ಕ್ಕೂ ಹೆಚ್ಚು ಜನರು ಸದುಪಯೋಗ ಪಡೆದುಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುರಕ್ಷಾ & ಸಮಧ್ಧಿ ಫೌಂಡೇಶಷನ್(ರಿ).ನಿರ್ದೇಶಕರಾದ ಅಬ್ದುಲ್ ಹಮೀದ್ ಜೋಕಟ್ಟೆ, ಜಿ. ಎಂ. ರಾಜು, ಜಿ. ಎಂ .ಶೃತಿ ಮೇಲ್ವಿಚಾರಕರು ಮತ್ತು ಸಿಬ್ಬಂದಿ ವರ್ಗದವರು ಹೆಲ್ಪ್ ಏಜ್ ಇಂಡಿಯಾದ ಆಡಳಿತ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.
ವರದಿ: ಆರ್ ಉಮೇಶ್ ಮಲಾರಪಾಳ್ಯ