ದಾಸೋಹ ನಡೆಸುವ ಮೂಲಕ 50ನೇ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಿಸಿದ ಕೆ. ಸಿ. ರುದ್ರೇಶ್

ದೊಡ್ಡಬಳ್ಳಾಪುರ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಹಾಗೂ ಕನ್ನಡ ಜಾಗೃತಿ ವೇದಿಕೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರದಾನ ಕಾರ್ಯದರ್ಶಿ ಕೆ. ಸಿ. ರುದ್ರೇಶ್ ರವರು ದರ್ಗಾ ಜೋಗಿಹಳ್ಳಿ ಅನ್ನ ದಾಸೋಹ ಸಮಿತಿಯಲ್ಲಿ ದಾಸೋಹವನ್ನು ನಡೆಸುವ ಮೂಲಕ ತಮ್ಮ ಐವತ್ತನೇ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿ ಕೊಂಡರು.

ದಾಸೋಹದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರುದ್ರೇಶ್ ಮಾತನಾಡಿ ದಾಸೋಹವೆಂಬುದು ದೇಶದಲ್ಲಿ ನಡೆದಾಡುವ ದೇವರೆಂದೆ ಪ್ರಸಿದ್ದರಾದ ಶಿವೈಕ್ಯ ಡಾ. ಶಿವಕುಮಾರ ಸ್ವಾಮಿಗಳ ಕಲ್ಪನೆ. ಅದನ್ನು ಚಾಚು ತಪ್ಪದೆ ತಮ್ಮ ಜೀವನ ಪರ್ಯಂತ ನಡೆಸಿ ಕೊಂಡು ಬಂದವರೂ ಕೂಡಾ. ಹಾಗಾಗಿ ಅವರ ಅನುಯಾಯಿಯಾಗಿ ಅವಕಾಶ ಸಿಕ್ಕಾಗ ದಾಸೋಹ ನಡೆಸುವ ತೀರ್ಮಾನ ಮಾಡಿದ್ದೇನೆ ಎಂದು ಹೇಳಿದರು.

ಐವತ್ತನೇ ವಸಂತಕ್ಕೆ ಕಾಲಿಟ್ಟ ರುದ್ರೇಶ್ ರವರನ್ನು ಶಾಸಕ ಧೀರಜ್ ಮುನಿರಾಜು, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಕನ್ನಡ ಜಾಗೃತಿ ವೇದಿಕೆ ಹಾಗೂ ಹಲವಾರು ಹಿತೈಷಿಗಳು, ಮಿತ್ರರು ಸನ್ಮಾನಿಸುವ ಮೂಲಕ ಅಭಿನಂದಿಸಿದ್ದಾರೆ.