ರೋಟರಿ ಕ್ಲಬ್ ಮತ್ತು ಕೃಷಿ ಪತ್ತಿನ ಸಹಕಾರ ಸಂಘ ವತಿಯಿಂದ. ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ
ಕೊರಟಗೆರೆ :-ಕೊರಟಗೆರೆ ತಾಲೂಕು ಸಿಎನ್ ದುರ್ಗಾ ಹೋಬಳಿಯ ಜಟ್ಟಿ ಅಗ್ರಹಾರದಲ್ಲಿ ಆಯೋಜಿಸಲಾಗಿದ್ದ ರೋಟರಿ ಕ್ಲಬ್ ಕೊರಟಗೆರೆ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ.ನಿ. ಜಟ್ಟಿ ಅಗ್ರಹಾರ.
ಆಕಾಶ್ ಕಣ್ಣಿನ ಆಸ್ಪತ್ರೆ ಮಧುಗಿರಿ. ಹಾಗೂ ಧಾನ್ ಫೌಂಡೇಶನ್ ತುಮಕೂರು. ಮತ್ತು ಸಪ್ತಗಿರಿ ಆಸ್ಪತ್ರೆ ಬೆಂಗಳೂರು, ಇವರ ಸಂಯುಕ್ತಶ್ರಯದಲ್ಲಿ ಇಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಬಹಳ ಯಶಸ್ವಿಯಾಗಿ ನಡೆಯಿತು..
ರೋಟರಿ ಕ್ಲಬ್ ಕೊರಟಗೆರೆ ಅಧ್ಯಕ್ಷರಾದ ಮಂಜುನಾಥ್ ಎ ಜಿ ಮಾತನಾಡಿ ಆಕಾಶ ಕಣ್ಣಿನ ಆಸ್ಪತ್ರೆ ಮತ್ತು ದಾನ್ ಫೌಂಡೇಶನ್ ಹಾಗೂ ಸಪ್ತಗಿರಿ ಆಸ್ಪತ್ರೆ ಎಲ್ಲರು ಸೇರಿ ಹೆಲ್ತ್ ಕ್ಯಾಂಪ್ ಮಾಡೋಣ ಎಂದು ಕೇಳಿದಾಗ ನಾವುಗಳು ಬಹಳ ಸಂತೋಷದಿಂದ ಮಾಡಿ ನಿಮಗೆ ಏನು ಸಹಕಾರ ಬೇಕು ಅದನ್ನು ನಾವುಗಳು ಮುಂದೆ ನಿಂತು ಸಹಕರಿಸುತ್ತೇವೆ ಎಂದು ಭರವಸೆ ಕೊಟ್ಟೆವು.
ಈ ಯುಗದಲ್ಲಿ ಮನುಷ್ಯನಿಗೆ ಕಂಡುಬರುವ ಕಾಯಿಲೆ ಎಂದರೆ ಅದು ಹೃದಯ ಸಂಬಂಧಿತ ಕಾಯಿಲೆ ಮತ್ತು ವಯಸ್ಸಾದವರಿಗೆ ಮಂಡಿ ನೋವು, ದೃಷ್ಟಿ ದೋಷ ವಯೋ ಸಹಜ ಕಾಯಿಲೆ ಸಂಬಂಧಿಸಿದ ಸಮಸ್ಯೆ ಕಾಡುತ್ತದೆ ಆದ ಕಾರಣ ನಾವುಗಳು ಕೃಷಿ ಪತ್ತಿನ ಸಹಕಾರ ಸಂಘ ಜೊತೆಗೂಡಿ ಸರ್ಕಾರಿ ಹಿರಿಯ ಮಾಧ್ಯಮಿಕ ಹಾಗೂ ಪ್ರೌಢಶಾಲೆ ಜಟ್ಟಿ ಅಗ್ರಹಾರ ಶಾಲೆಯ ಮುಖ್ಯೋಪಾಧ್ಯಾಯರದ ನಾಗರತ್ನಮ್ಮ ರವರನ್ನ ಕೇಳಿದಾಗ ಅವರು ಸಹ ನನ್ನಿಂದ ಏನು ಸಹಕಾರ ಬೇಕು ಅದನ್ನು ನಾನು ನೆರವೇರಿಸಿ ಕೊಡುತ್ತೇನೆ ಎಂದು ಭರವಸೆ ಕೊಟ್ಟರು.
ಈ ಒಂದು ಭಾಗದಲ್ಲಿ ಜನರಿಗೆ ಅನುಕೂಲವಾಗಲೆಂದು ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಈ ಒಂದು ದಿನ ಸರಿಸುಮಾರು 250 ಸದಸ್ಯರಿಗೆ BP ತಪಾಸಣೆ ಮಾಡಿ ಅದರಲ್ಲಿ 50 ಜನಕ್ಕೆ ಎಕೋ ಮತ್ತು 50 ಜನಕ್ಕೆ ಇಸಿಜಿ ಹಾಗೂ 51 ಜನಕ್ಕೆ ಕಣ್ಣಿನ ತಪಾಸಣೆ ಮಾಡಿದರು ಇದರಲ್ಲಿ 18 ಜನರನ್ನ ಕಣ್ಣಿನ ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದಾರೆ.
ಮುಂದಿನ ದಿನಗಳಲ್ಲಿ ಕೋಳಾಲ ಮತ್ತು ಮಾವತ್ತೂರು ಗ್ರಾಮಗಳಲ್ಲಿ ಒಂದು ಕ್ಯಾಂಪನ್ನು ಅಲ್ಲಿನ ಜನರಿಗೆ ಉಚಿತವಾಗಿ ನೀಡಬೇಕೆಂದು ರೂಪಿಸಿಕೊಂಡಿದ್ದೇವೆ.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕೊರಟಗೆರೆ
ಅಧ್ಯಕ್ಷರಾದ ಮಂಜುನಾಥ್ ಎಜಿ. ಕಾರ್ಯದರ್ಶಿಯಾದ ನರಸಿಂಹಮೂರ್ತಿ ವಿಕೆ. ನಿರ್ದೇಶಕರುಗಳಾದ ಲಕ್ಷ್ಮಮ್ಮ ರೂಪಾವತಿ, ಲಕ್ಷ್ಮೀ ಬಿ ಎನ್, ಹೊನ್ನೆಶ್, ಆದಿತ್ಯ, ಹಾಗೂ
ವಿ ಎಸ್ ಎಸ್ ಎನ್ ಗಂಗಾದೇವಿ ಆರ್, ಸಿದ್ದಗಂಗಯ್ಯ, ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದರು.
ವರದಿ : ಭರತ್ ಕೆ