ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಗ್ರಾಹಕರ ಸಂಕಷ್ಟದ ಬಗ್ಗೆ ಶಾಸಕರಿಗೆ ಮನವಿ
ದೊಡ್ಡಬಳ್ಳಾಪುರ: ವಿದ್ಯುತ್ ಗ್ರಾಹಕರಿಗೆ OC & CC ವಿಚಾರವಾಗಿ ಸಂಕಷ್ಟದ ಪರಿಸ್ಥಿತಿ ತಂದಿರುವ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಅಧ್ಯಕ್ಷರು.ಪದಾಧಿಕಾರಿಗಳು ಶಾಸಕರ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಗ್ರಾಹಕರುಗಳಿಗೆ ವಿದ್ಯುತ್ ಸಂಪರ್ಕಕ್ಕೆ ಪೆಡಂಭೂತವಾಗಿ ಕಾಡುತ್ತಿರುವಂತಹ *OC & CC* ಯಾ ವಿಷಯವಾಗಿ ಹಲವಾರು ಭಾರಿ ಮುಖ್ಯಮಂತ್ರಿ ಗಳು,, ಉಪಮುಖ್ಯಮಂತ್ರಿಗಳು ಇಂಧನ ಸಚಿವರಿಗೆ ನಮ್ಮ ಕೇಂದ್ರ ಸಮಿತಿ ನಿರಂತರವಾಗಿ ಅಹವಾಲನ್ನು ನೀಡುತ್ತಿದ್ದು ಯಾವುದೇ ಪ್ರಯೋಜನ ಕಾಣುತ್ತಿಲ್ಲ.ಆದ್ದರಿಂದ ಇದರ ಮುಂದುವರೆದ ಭಾಗವಾಗಿ ಮುಂದೆ ಇದರ ವಿಚಾರವಾಗಿ ಸ್ಥಳೀಯ ಮಟ್ಟದ ಶಾಸಕರಿಗೆ ಮನವಿ ಪತ್ರವನ್ನು ಸಲ್ಲಿಸುವ ಮೂಲಕ ಮುಂದೆ ನಡೆಯಲಿರುವ ಅಧಿವೇಶನದಲ್ಲಿ ಇದರ ವಿರುದ್ಧವಾಗಿ ವಿಧಾನಸಭಾ ಅಧಿವೇಶನದಲ್ಲಿ ಧ್ವನಿ ಎತ್ತಲು ಅವರಿಗೆ ಅಹವಾಲು ಸಲ್ಲಿಸಲು ಇಂದು ದೊಡ್ಡಬಳ್ಳಾಪುರ ತಾಲೂಕು ಸಮಿತಿಯ ಪದಾಧಿಕಾರಿಗಳ ನಿಯೋಗ ಶಾಸಕರಾದ ದೀರಜ್ ಮುನಿರಾಜುರವರ ಗೃಹ ಕಚೇರಿಗೆ ಭೇಟಿ ಕೊಟ್ಟು ಮನವಿ ಪತ್ರವನ್ನು ಸಲ್ಲಿಸಲಾಯಿತು.
ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ ಇದರ ವಿಚಾರವಾಗಿ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದು ಇದರ ವಿರುದ್ಧವಾಗಿ ಅಧಿವೇಶನದಲ್ಲಿ ಮಾತನಾಡುತ್ತೇನೆ ಎಂದು ತಿಳಿಸಿದರು. ಈ ಸಮಯದಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘ ದೊಡ್ಡಬಳ್ಳಾಪುರ ತಾಲೂಕು ಸಮಿತಿ ಅಧ್ಯಕ್ಷರು ಆನಂದ ಟಿ.ಕೆ ರವರು. ಕಾರ್ಯದರ್ಶಿಗಳಾದ ಮಂಜುನಾಥ್. ಎ ಹಾಗೂ ಜಂಟಿ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ. ವಿ. ಉಪಾಧ್ಯಕ್ಷರಾದ ಕೆಂಪಣ್ಣ. ದೀಪಕ್.ಎಸ್. ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಕಾರ್ಯದರ್ಶಿ ಉಮೇಶ್. ಸದಸ್ಯರಾದ ಹೇಮಂತ್ ಕುಮಾರ್. ಮುರುಳಿ. ಎಲ್ಲಾ ಸದಸ್ಯರು ಹಾಜರಿದ್ದರು .