ಮಲೆಪುರದಲ್ಲಿ ಅವೈಜ್ಞಾನಿಕ ಜೆಜೆ ಎಂ ಕಳಪೆ ಕಾಮಗಾರಿ ವಿರುದ್ದ ಬಿಎಸ್ ಪಿ ಅಧ್ಯಕ್ಷ ರಾಮಾಂಜಿನಪ್ಪ ಕಿಡಿ
ದೇವನಹಳ್ಳಿ :- ಸರ್ಕಾರಿ ಕಚೇರಿಗಳಲ್ಲಿ ಕೆಲ ಭ್ರಷ್ಟಾಧಿಕಾರಿಗಳು ಕಳಪೆ ಕಾಮಗಾರಿಗಳ ಮೂಲಕ ಸರ್ಕಾರದ ಹಣವನ್ನು ಲೂಟಿ ಮಾಡುವ ಯತ್ನಕ್ಕೆ ಕೖ ಹಾಕಿದ್ದು, ಕಳೆದ ಒಂದು ವರ್ಷಗಳಿಂದ ಮಲೆಪುರ ಗ್ರಾಮದಲ್ಲಿ ಜೆಜೆ ಎಂ ಕಳಪೆ ಕಾಮಗಾರಿಯಿಂದ ಗುಣಮಟ್ಟದ ರಸ್ತೆಗಳು ಸಂಪೂರ್ಣ ಗುಂಡಿಗಳಿಂದ ಕೂಡಿದೆ ಎಂದು ಬಹು ಜನ ಸಮಾಜ ಪಾರ್ಟಿ . ದೇವನಹಳ್ಳಿ ತಾಲೂಕು ಅಧ್ಯಕ್ಷ ರಾಮಾಂಜನಪ್ಪ ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ನಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮಲ್ಲಿಪುರ ಗ್ರಾಮದಲ್ಲಿ ಸುಮಾರು ಹೆಚ್ಚು ಗ್ರಾಮಸ್ಥರು ವಾಸವಿದ್ದು ಇಲ್ಲಿನ ಕಾಂಕ್ರೀಟ್ ರಸ್ತೆ ಕಾಮಗಾರಿ ಮಾಡಲು ಅನೇಕ ಜನಪ್ರತಿನಿಧಿಗಳು ಮನೆ ಬಾಗಿಲಿಗೆ ಅಲೆದಾಡಿ ಅನುದಾನ ತರುವ ಮೂಲಕ ಗುಣಮಟ್ಟದ ಕಾಮಗಾರಿಯನ್ನು ಜೆಜೆ ಎಂ ನ ಕಾಮಗಾರಿಯ ನೆಪದಲ್ಲಿಮನೆಗೊಂದು ಕೊಳಾಯಿ ಎಂಬ ಅವಜ್ಞಾನಿಕ ಕಾಮಗಾರಿಗಳಿಂದ ಕಾಂಕ್ರೀಟ್ ರಸ್ತೆ ಗುಂಡಿಗಳಾಗಿ ಗ್ರಾಮ ನೈರ್ಮಲ್ಯ ಮತ್ತು ಕುಡಿಯುವ ನೀರು ಇಲಾಖೆಯ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕಳೆದ ಆರು ತಿಂಗಳಿಂದ ಸರಿಪಡಿಸುವಂತೆ ಮೌಖಿಕವಾಗಿ ತಿಳಿಸಿದರು ಎಚ್ಚೆತ್ತುಕೊಳ್ಳದ ಗಟ್ಟಿ ಚರ್ಮದ ಭ್ರಷ್ಟಾಧಿಕಾರಿಗಳು ಇಲ್ಲಿಯವರೆಗೆ ಸರಿಪಡಿಸುವಲ್ಲಿ ವಿಫಲರಾಗಿದ್ದಾರೆ ಮಲೆಪುರ ಗ್ರಾಮಸ್ಥರು ಪ್ರಗತಿಪರಿ ಸಂಘಟನೆಗಳು ಇಂದು ಕಚೇರಿಗೆ ಭೇಟಿ ನೀಡಿ ಮತ್ತೊಮ್ಮೆ ಲಿಖಿತ ರೂಪದಲ್ಲಿ ಮನವಿ ಪತ್ರ ನೀಡಿದ್ದೇವೆ, ಗ್ರಾಮಕ್ಕೆ ಭೇಟಿ ನೀಡಿ ತುತ್ತಾಗಿ ಗುಂಡಿಗಳು ಬಿದ್ದಿರುವ ರಸ್ತೆಗಳನ್ನು ಸರಿಪಡಿಸಬೇಕು ನಿರ್ಲಕ್ಷ ತೋರಿದರೆ ಗ್ರಾಮಸ್ಥರೆಲ್ಲರೂ ತಮ್ಮ ಕಚೇರಿ ಬಳಿ ಜಮಾಹಿಸಿ ಅನಿರ್ದಿಷ್ಟವದಿ ಧರಣಿ ನಡೆಸುವ ಎಚ್ಚರಿಕೆ ನೀಡಿದರು.