1.           ನಗರಸಭಾ ಸದಸ್ಯ ಭಾಸ್ಕರ್ ನಿಧನ

ದೊಡ್ಡಬಳ್ಳಾಪುರ:ನಗರದ ಹೇಮಾವತಿ ಪೇಟೆ ವಾರ್ಡಿನ ನಗರಸಭಾ ಸದಸ್ಯರಾದ ಭಾಸ್ಕರ್ ರವರು ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ. ದಿಡೀರ್ ತೀವ್ರ ಅನಾರೋಗ್ಯಕ್ಕೆಈಡಾದ ಕಾರಣ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಭಾಸ್ಕರ್ ರವರು ಚಿಕಿತ್ಸೆ ಪಲಕಾರಿಯಾಗದೆ ಸೋಮವಾರ ಬೆಳಗಿನ ಜಾವಾ ನಿಧನ ರಾಗಿದ್ದಾರೆ. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.
ಸೋಮವಾರ ಮದ್ಯಾನ್ಹ ನಗರದ ಹೊರವಲಯದ ಮುಕ್ತಿದಾಮದಲ್ಲಿ ಭಾಸ್ಕರ್ ರವರ ಅಂತ್ಯಕ್ರಿಯೆ ನಡೆಯಿತು. ಮೃತ ಭಾಸ್ಕರ್ ಒಂದು ಬಾರಿ ಉಪ ಚುನಾವಣೆ ಸೇರಿದಂತೆ ಎರಡು ಬಾರಿ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಹಾಗೂ ಕರ್ನಾಟಕ ಛಾಯಾಗ್ರಾಹಕ ಸಂಘದ ನಿರ್ದೇಶಕರಾಗಿ, ದೊಡ್ಡಬಳ್ಳಾಪುರ ಫೋಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಮೃತ ಭಾಸ್ಕರ್ ಅಗಲಿಕೆಗೆ ಶಾಸಕ ಧೀರಜ್ ಮುನಿರಾಜು, ನಗರಸಭಾ ಸದಸ್ಯರು, ದೊಡ್ಡಬಳ್ಳಾಪುರ ಫೋಟೋ ವಿಡಿಯೋ ಛಾಯಾಗ್ರಾಹಕರ ಸಂಘ, ತೆಲುಗು ದೇವಾಂಗ ಸಂಘ ಸೇರಿದಂತೆ ಹಲವಾರು ಮುಖಂಡರು ಸಂತಾಪ ಸೂಚಿಸಿದ್ದಾರೆ.