ಶ್ರೀ ಸುವರ್ಣಮುಖಿ ಲಕ್ಷ್ಮೀನರಸಿಂಹ ಕ್ಷೇತ್ರದಲ್ಲಿ ಕಡೆ ಶ್ರಾವಣ ಶನಿವಾರ ಅಮಾವಾಸ್ಯೆಯ ವಿಶೇಷತೆ

ಕೊರಟಗೆರೆ : ತಾಲೂಕು ಕಸಬಾ ಹೋಬಳಿ ನೆಲೆಸಿರುವ ಸುವರ್ಣಮುಖಿ ಲಕ್ಷ್ಮೀನರಸಿಂಹ ಶ್ರೀ ಕ್ಷೇತ್ರವು ಇದಾಗಿದ್ದು.ಶ್ರೀ ಕ್ಷೇತ್ರ ಗೊರವನಹಳ್ಳಿಯಿಂದ 10 ಕಿಲೋ ಮೀಟರ್ ಶ್ರೀ ಕ್ಷೇತ್ರ ಸುಪ್ರಸಿದ್ಧ ದೇವರಾಯನ ದುರ್ಗ
ಕೇವಲ 25km ದೂರವಿರುತ್ತದೆ.

ಪೂಜಾ ಪ್ರಯುಕ್ತ ಹೂವಿನ ಅಲಂಕಾರ ದಿಂದ ಸುಂದರವಾಗಿ ದೇವಾಲಯವು ಕಂಗೊಳಿಸುತ್ತಿತ್ತು ದೇವಾಲಯಕ್ಕೆ ಸಂಬಂಧಿಸಿದ ಕಲ್ಯಾಣ ಮಂಟಪದಲ್ಲಿ ನರಸಿಂಹ ಸ್ವಾಮಿಯ ಕಲ್ಯಾಣೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತ್ತು.ಬಂದ ಸಹಸ್ತ್ರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣಾ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತ್ತು.

ನರಸಿಂಹಸ್ವಾಮಿಯು ಲಕ್ಷ್ಮಿಯೊಂದಿಗೆ ಹೂವಿನ ಅಲಂಕಾರದಿಂದ ಸುಂದರವಾಗಿ ಬಲು ಆಕರ್ಷಣೆಯಿಂದ ಭಕ್ತಾದಿಗಳಿಗೆ ತನ್ನ ದರ್ಶನವನ್ನು ನೀಡಿದರು.

ಮಂಡಳಿಯ ಮುಖ್ಯಸ್ಥರು ಹಾಗೂ ಪುಸ್ತಕ ರಚನೆಕಾರರು ಆದಂತಹ ಸೂರ್ಯ ಪ್ರಕಾಶ್ ರಾವ್ ಮಾತನಾಡಿ ದೇವಸ್ಥಾನದ ಬಗ್ಗೆ ಪ್ರತಿಯೊಂದು ವಿವರಿಸಿದರು ದೇವಾಲಯದ ಪರವಾಗಿ ಸ್ವಾಮಿಯ ಕಥೆಯನ್ನು ವಿಭಿನ್ನವಾಗಿ ರಚಿಸಿರುವ ನಾಲ್ಕು ಪುಸ್ತಕಗಳನ್ನು ಮಂಡಲಿಯವರು ಈಗಾಗಲೇ ಬಿಡುಗಡೆ ಮಾಡಿದ್ದಾರೆ ಪುಸ್ತಕಗಳನ್ನು ರಚಿಸಿರುವವರು ಸೂರ್ಯಪ್ರಕಾಶ್ ರಾವ್

ಕೊರಟಗೆರೆ ರಾಜ್ಯದಲ್ಲಿಯೇ ಪುಣ್ಯಕ್ಷೇತ್ರಗಳಲ್ಲಿ ಒಂದಾದ. ತಾಲ್ಲೂಕಿನ ಶ್ರೀ ಲಕ್ಷ್ಮಿ ನರಸಿಂಹ ದೇವಾಲಯದಲ್ಲಿ. ಹಬ್ಬದ ಹಿನ್ನೆಲೆಯಲ್ಲಿ. ದೇವಿಗೆ ವಿಶೇಷ ಹೂವಿನ ಅಲಂಕಾರ. ದೀಪಲಂಕಾರಗಳೊಂದಿಗೆ. ವಿಶೇಷ ಪೂಜೆ ಬೆಳಗಿನ ಜಾವದಿಂದಲೇ ನಡೆಯಿತು. ಬಂದ ಭಕ್ತರಿಗೆಲ್ಲ ವಿಶೇಷವಾದ ದಾಸೋಹ ವ್ಯವಸ್ಥೆ ಇತ್ತು.

ನಿತ್ಯವೂ ನೂರಾರು ಭಕ್ತರು ಇಲ್ಲಿ ಬಂದು ತಾಯಿಯ ದರ್ಶನ ಪಡೆಯುತ್ತಾರೆ. ಜಿಲ್ಲೆಯ ಇತರೆ ಕ್ಷೇತ್ರಗಳಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆದರೆ, ಇಲ್ಲಿ ನಿತ್ಯ ಜನಜಾತ್ರೆ. ಸರತಿಯ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುವ ಭಕ್ತಕೋಟಿ ಧನ್ಯತಾಭಾವದೊಂದಿಗೆ ದೇಗುಲದಿಂದ ಹೊರಬರುತ್ತಾರೆ.. ಎಂದು ಹೇಳಿದರು.

ಪಂಚಾಮೃತ ಅಭಿಷೇಕ.ವಿಶೇಷ ಪೂಜೆ. ಹೂವಿನ ಅಲಂಕಾರ. ದೇವಾಲಯಕ್ಕೆ ವಿದ್ಯುತ್ ದೀಪ ಅಲಂಕಾರ ಏರ್ಪಡಿಸಿಲಾಗಿತ್ತು. ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅರಿಶಿಣ ಕುಂಕುಮ. ಹಸಿರು ಬಣ್ಣದ ಬಳೆಗಳನ್ನು ಭಕ್ತಾದಿಗಳಿಗೆ ವಿತರಿಸಲಾಗಿತ್ತು. ಕ್ಷೇತ್ರಕ್ಕೆ ಬಂದ ಎಲ್ಲಾ ಭಕ್ತಾದಿಗಳಿಗೆ. ಬೆಳಗ್ಗೆಯಿಂದ ಸಂಜೆವರೆಗೂ ವಿಶೇಷವಾಗಿ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತು.ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ರಾಜ್ಯದ ಮೂಲೆ ಮೂಲೆಯಿಂದ ಬಂದು ದೇವಿಯ ದರ್ಶನ ಕೃಪೆಗೆ ಪಾತ್ರರಾದರು.

ವರದಿ– ಭರತ್ ಕೆ