ಕಲ್ಪತರು ನಾಡು ತಿಪಟೂರಿನಲ್ಲಿ ಗಣನಾಯಕನನ್ನ ಅದ್ದೂರಿಯಾಗಿ ಸ್ವಾಗತಿಸಿದ ಜನತೆ

ತಿಪಟೂರು.: ನಗರದ ಕೊಡಿ ಸರ್ಕಲ್ ನಿಂದ ದೊಡ್ಡಪೇಟೆ ರಸ್ತೆ ಮಾರ್ಗವಾಗಿ ಗಣಪತಿ ಪೆಂಡಲ್ನವರಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಸಿದರು.

ಗಣನಾಯಕನನ್ನು ಸ್ವಾಗತಿಸಿದ ಜನತೆ ಗಣಪತಿ ಬಪ್ಪಾ ಮೊರಾರ‍ಯ, ಮಂಗಲಮೂರ್ತಿಗೆ ಜಯವಾಗಲಿ ಎಂದು ಘೋಷಣೆಗಳನ್ನು ಕೂಗಿದರು. ವಾದ್ಯಗಳ ಅಬ್ಬರದ ಮಧ್ಯೆ ಯುವ ಸಮುದಾಯ ಸಂಭ್ರಮದಿಂದ ಗಣಪನ ಮೆರವಣಿಗೆ ನಡೆಸಿದರು. ಇನ್ನು ಕೆಲ ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕೊನೆಗೆ
ವಿಜ್ಞ ವಿನಾಯಕನ ಮೂರ್ತಿಯನ್ನು ಗಣಪತಿ ಪೆಂಡಲ್ ನಲ್ಲಿ ಪ್ರತಿಷ್ಠಾಪಿಸಲಾಯಿತು

ಇನ್ನು ಬೆಳ್ಳಂಬೆಳಗ್ಗೆ ಕುಟುಂಬ ಸಮೇತರಾಗಿ ಬಂದ ಸಾರ್ವಜನಿಕರು ಯುವ ಸಮುದಾಯ ಗಣೇಶ ಮೂರ್ತಿಗಳನ್ನು ಪೂಜಿಸಿ ಮನೆಗೆ ಕರೆದ್ಯೊಯಿದರು.
ವರದಿ:ಮಂಜು ಗುರುಗದಹಳ್ಳಿ