ಶ್ರೀರಾಂಪುರ ವಿಶ್ವ ಹಿಂದು ಪರಿಷದ್ – ಬಜರಂಗದಳ |4ನೇ ವರ್ಷದ ಹಿಂದೂ ಮಹಾಗಣಪತಿ ಅದ್ದೂರಿ ಮಹೋತ್ಸವ.

ಹೊಸದುರ್ಗ: ನಾಲ್ಕನೇ ವರ್ಷದ ಹಿಂದೂ ಮಹಾಗಣಪತಿ ಗಣೇಶೋತ್ಸವ ಆ.26 ರಿಂದ 30 ರವರಿಗೆ ಶ್ರೀರಾಂಪುರದ ಶ್ರೀ ಸದ್ಗುರು ಪುರಪ್ಪ ಸ್ವಾಮಿ ದೇವಸ್ಥಾನದ ಮುಂಭಾಗ ವಿಜೃಂಭಣೆಯಿಂದ ಆಚರಿಸಲು ಸಕಲ ರೀತಿ ತಯಾರಿ ನಡೆಯುತ್ತಿದೆ. ದಿನಾಂಕ 26.8.2025ನೇ ಮಂಗಳವಾರ ದಂದು ನಮ್ಮ ಹಿಂದೂ ಧರ್ಮದ ಪ್ರಕಾರ ಕೋಟಿ ಕೋಟಿ ದೇವತೆ ರೂಪವಾಗಿರುವ ಗೋವುಗಳನ್ನು ಶ್ರೀ ಸದ್ಗುರು ಸ್ವಾಮಿ ಆವರಣಕ್ಕೆ ಕರೆತಂದು ಗೋ ಪೂಜಾ ಉತ್ಸವ ನೆರವೇರಿಸಲಾಯಿತು. ನಂತರ ಭಾರತಾಂಬೆಯ ಹಾಗೂ ಶ್ರೀ ಆಂಜನೇಯ ಸ್ವಾಮಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಅದ್ದೂರಿ ಹಿಂದೂ ಮಹಾಗಣಪತಿ ಮಹೋತ್ಸವಕ್ಕೆ ಶ್ರೀರಾಂಪುರದ ವಿಶ್ವ ಹಿಂದೂ ಪರಿಷದ್-ಬಜರಂಗದಳದ ಕಾರ್ಯಕರ್ತರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು. 27.08.2025ನೇ ಬುಧವಾರದಂದು ಬೆಳಗ್ಗೆ 11:30 ಕ್ಕೆ ಶುಭ ಅಭಿಜಿತ್ ಲಗ್ನದಲ್ಲಿ ಶ್ರೀ ಇಂದು ಮಹಾಗಣಪತಿ ಅವರ ಪ್ರತಿಷ್ಠಾಪನೆ ಮಾಡಲಿದ್ದು ಸ್ವಾಮಿಗೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಶ್ರೀ ಹಿಂದೂ ಮಹಾಗಣಪತಿ ಕಾರ್ಯಕರ್ತರಿಂದ ನೆರವೇರಲಿದ್ದು. ದಿನಾಂಕ 28.08.2025ನೇ ಗುರುವಾರ ಮಧ್ಯಾಹ್ನ 2 ಗಂಟೆಗೆ ನವ ದೇವಾನುದೇವತೆಗಳು ಆರಾಧನೆ ನಡೆಯಲಿದ್ದು. ಗ್ರಾಮ ದೇವತೆ ಶ್ರೀ ಕೊಲ್ಲಾಪುರದಮ್ಮ ದೇವಿ, ಶ್ರೀ ಕೋಟೆ ಆಂಜನೇಯ ಸ್ವಾಮಿ, ಶ್ರೀ ಸದ್ಗುರು ಪರಪ್ಪ ಸ್ವಾಮಿ, ಶ್ರೀ ಕೆಂಪ ರಾಜೇಶ್ವರಿ ದೇವಿ, (ಹೆಗ್ಗೆರೆ) ಶ್ರೀ ಕರಿಯಮ್ಮ ದೇವಿ ,(ಎಸ್ ನೇರಲಕೆರೆ) ಶ್ರೀ ದುರ್ಗಮ್ಮ ದೇವಿ, ಶ್ರೀ ಕಾವಲುಭೂತೇಶ್ವರ ಸ್ವಾಮಿ, ಆಗಮಿಸಿ ಒಂದೇ ವೇದಿಕೆಯಲ್ಲಿ ಕೂಡು ಭೇಟಿ ನೀಡಿ. ಬೆಳಗ್ಗೆ 10 ಗಂಟೆಗೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ಸಂಜೆ 4:30ಕ್ಕೆ ಮಹಾಗಣಪತಿ ಹೋಮ ಹಾಗೂ ಪೂಜಾ ಕಾರ್ಯ ಮತ್ತು ಪ್ರಸಾದ ವಿತರಣೆ ಹಮ್ಮಿಕೊಂಡಿದ್ದು ಸಂಜೆ 7:00ಗೆ ಸಹಸ್ರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಿದ್ದು. ಸಿಂಗಾಪುರದ ಶ್ರೀ ಮಾರುತಿ ಮಹಿಳಾ ಸಾಂಸ್ಕೃತಿಕ ಸಂಘ ವತಿಯಿಂದ ದಿನಾಂಕ 29.08.2025ನೇ ಶುಕ್ರವಾರ ಸಂಜೆ 7 ಗಂಟೆಗೆ ಭಜನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು. ದಿನಾಂಕ 30 /08/2025ನೇ ಶನಿವಾರ ಶ್ರೀರಾಂಪುರ ಗ್ರಾಮದ ರಾಜಭೀದಿಗಳಲ್ಲಿ ಬಾಣಬಿರುಸು ಸಿಡಿ ಮದ್ದು ಹಾಗೂ ವಿವಿಧ ಕಲಾತಂಡಗಳೊಂದಿಗೆ ಅನೇಕ ವಾದ್ಯಗಳ ಜೊತೆಗೆ ವಿವಿಧ ಮಠಾಧೀಶರು ಹಾಗೂ ರಾಜಕೀಯ ಅನೇಕ ಗಣ್ಯರು ಬಂಧುಗಳು ಆಗಮಿಸಿ. ಬೃಹತ್ ಶೋಭಯಾತ್ರೆ ಭಾಗವಹಿಸಲಿದ್ದು. ಪೊಲೀಸ್ ಇಲಾಖೆಯ ಸಮ್ಮುಖದಲ್ಲಿ ಗಣೇಶ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ನಡೆಯಲಿದ್ದು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು. ಕಾರ್ಯಕರ್ತರಾದ N. R. ಜಗದೀಶ್ ರಾಮಯ್ಯ ಹಾಗೂ ಶ್ರೀರಾಂಪುರ ವಿಶ್ವ ಹಿಂದೂ ಪರಿಷದ್ ಬಜರಂಗದಳದ ಗಣೇಶೋತ್ಸವದ ಸಮಿತಿಯ ಎಲ್ಲಾ ಕಾರ್ಯಕರ್ತರು ಮನವಿ ಮಾಡಿದ್ದಾರೆ.
ವರದಿ: ಮಂಜುನಾಥ್ ಡಿ ಶ್ರೀರಾಂಪುರ