--ಜಾಹೀರಾತು--

ರಂಗಪ್ಪ ವೃತ್ತದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಹುಂಡಿ ಹಣ ದೋಚಿದ ಕಳ್ಳರು

On: November 28, 2025 5:57 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ರಂಗಪ್ಪ ವೃತ್ತದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಹುಂಡಿ ಹಣ ದೋಚಿದ ಕಳ್ಳರು

ದೊಡ್ಡಬಳ್ಳಾಪುರ:ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಬುದುವಾರ ನಡು ರಾತ್ರಿ ಹುಂಡಿ ಒಡೆದು ಕಳ್ಳರು ಹಣ ದೋಚಿರುವ ಘಟನೆ ನಡೆದಿದೆ.
ನಗರದ ರಂಗಪ್ಪ ವೃತ್ತದ ಬಳಿ ಇರುವ ಶಿರಡಿ ಸಾಯಿಬಾಬಾ ಮಂದಿರದ ಬಾಗಿಲಿಗೆ ಅಳವಡಿಸಲಾಗಿದ್ದ ಬೀಗವನ್ನು ಮುರಿದು ಮಂದಿರದ ಒಳ ನುಗ್ಗಿದ ಕಳ್ಳರು ಕಬ್ಬಿಣದ ದೊಡ್ಡ ಹುಂಡಿಯನ್ನು ಗಡಾರೆ ಯಿಂದ ಮುರಿಯಲು ಯತ್ನಿಸಿದ್ದಾರೆ. ಅದು ವಿಪಲವಾದಾಗ ಬಳಿಯಲ್ಲೇ ಇದ್ದ ಇನ್ನೊಂದು ಹುಂಡಿಯನ್ನು ಒಡೆದು ಅಂದಾಜು ಐವತ್ತು ಸಾವಿರಕ್ಕೂ ಹೆಚ್ಚಿನ ಭಕ್ತರ ಕಾಣಿಕೆ ಹಣ ಹಾಗೂ ಹರಕೆ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.

ಮಂದಿರದಲ್ಲಿ ಸಿ. ಸಿ. ಟಿವಿ ಕ್ಯಾಮರಾ ಅಳವಡಿಸಲಾಗಿದ್ದು ಅದರ ಮಾನಿಟರ್ ಗಳನ್ನು ಸಹ ಕಳ್ಳರು ಕದ್ದೋಯ್ದಿದ್ದಾರೆ. ಈ ಕುರಿತು ದೂರು ದಾಖಲಿಸಿಕೊಂಡ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನ ದಳದವರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇತ್ತೀಚೆಗೆ ಇದೆ ಭಾಗದ ಹಲವು ದೇವಾಲಯಗಳಲ್ಲಿ ಕಳ್ಳತನ ನಿದರ್ಶನ ಗಳು ಕಣ್ಮುಂದಿವೆ. ದೇವಾಲಯಗಳ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಇಲಾಖೆ ಗಸ್ತು ಸಂಖ್ಯೆಯನ್ನು ಹೆಚ್ಚಿಸಿ ಕಳ್ಳತನ ಪ್ರಕರಣಗಳನ್ನು ತಹಬಂದಿಗೆ ತರಬೇಕೆಂದು ಭಕ್ತರು ಅಗ್ರಹಿಸಿದ್ದಾರೆ.