ನಮ್ಮ ರಾಷ್ಟ್ರಗೀತೆಯನ್ನು ಸಾಮೂಹಿಕವಾಗಿ ಹಾಡಬೇಕು ಹೊರತು ಮೊಬೈಲ್ ಮತ್ತು ಡಿಜೆಗಳಿಂದ ಅಲ್ಲ: ಕಾನೂನು ಸಲಹೆಗಾರ ವಕೀಲ ನಯಾಜ್ ಪಾಷಾ.
ಕೃಷ್ಣರಾಜಪೇಟೆ:ಪಿ.ಡಿ.ಎನ್.ಎ. ಬ್ರಷ್ಟಾಚಾರ ನಿಗ್ರಹದಳ ಸಂಸ್ಥೆ ಕೃಷ್ಣರಾಜಪೇಟೆ ತಾಲೂಕು ಘಟಕದ ವತಿಯಿಂದ ರಾಷ್ಟ್ರಗೀತೆಯ ಘನತೆಯನ್ನು ಕಾಪಾಡುವ ರಾಷ್ಟ್ರವ್ಯಾಪಿ ಅಭಿನಯಾನ ಅಡಿಯಲ್ಲಿ ತಾಲೂಕಿನ ಗ್ರೇಡ್ 2 ತಹಸೀಲ್ದಾರ್ ಬಿ.ಆರ್. ಲೋಕೇಶ್ ರವರಿಗೆ ಮನವಿ ಸಲ್ಲಿಸಲಾಯಿತು,_
_ನಂತರ ಮಾತನಾಡಿದ ಕಾನೂನು ಸಲಹೆಗಾರ ವಕೀಲ ನಯಾಜ್ ಪಾಷಾ ರವರು ಅತ್ಯಂತ ನಾಗರಿಕರಲ್ಲಿ ವಿಶೇಷವಾಗಿ ಯುವ ಪೀಳಿಗೆಯಲ್ಲಿ ನಮ್ಮ ರಾಷ್ಟ್ರಗೀತೆ ಜನ ಗಣ ಮನದ ಗೌರವ ಮತ್ತು ಅರಿವನ್ನ ಪುನರ್ ಸ್ಥಾಪಿಸುವುದು ಮತ್ತು ಇತ್ತೀಚಿನ ದಿನಗಳಲ್ಲಿ ರಾಷ್ಟ್ರಗೀತೆಯನ್ನು ಜನರು ಸ್ವಂತ ಹಾಡುವ ಬದಲು mp3. ಡಿಜೆ ವ್ಯವಸ್ಥೆಗಳು ಮತ್ತು ಬ್ಲೂಟೂತ್. ಸ್ಪೀಕರ್ ಮೂಲಕ ನುಡಿಸುವುದು ಸಾಮಾನ್ಯ ಅಭ್ಯಾಸ ಮಾಡಿಕೊಂಡಿದ್ದರೆ, ದುಃಖಕರವೆಂದರೆ 20% ಗಿಂತ ಹೆಚ್ಚು ಭಾರತೀಯರು ವಿಶೇಷವಾಗಿ ಯುವಕರು ಪೂರ್ಣ ರಾಷ್ಟ್ರಗೀತೆಯನ್ನು ಸರಿಯಾಗಿ ಹಾಡಲು ಸಾಧ್ಯವಾಗುತ್ತಿಲ್ಲ, ಈ ಪ್ರವೃತ್ತಿ ಮುಂದುವರೆದರೆ ಭವಿಷ್ಯದ ಪೀಳಿಗೆಗಳು ನಮ್ಮ ರಾಷ್ಟ್ರಗೀತೆಯ ನಿಜವಾದ ಸಾರವನ್ನು ಮರೆತುಬಿಡುವ ಆಗಿದೆ, ನಮ್ಮ ರಾಷ್ಟ್ರಗೀತೆ ಕೇವಲ ಹಾಡಲ್ಲ, ನಮ್ಮ ಏಕತೆ ತ್ಯಾಗ ಮತ್ತು ಬಲಿದಾನ ರಾಷ್ಟ್ರೀಯ ಹೆಮ್ಮೆಯ ಧ್ವನಿಯಾಗಿದೆ ಆದ್ದರಿಂದ ಧ್ವನಿವರ್ಧಕಗಳಲ್ಲಿ ಕೇಳುವುದನ್ನ ನಿಲ್ಲಿಸಬೇಕು ಮತ್ತು ಗೌರವ ಮತ್ತು ಭಾವನೆಯೊಂದಿಗೆ ಒಟ್ಟಿಗೆ ಹಾಡಬೇಕು ಮತ್ತು ರಾಷ್ಟ್ರೀಯ ಹಬ್ಬಗಳು, ಸರ್ಕಾರಿ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಸಭೆಗಳಲ್ಲಿ ಡಿಜೆ, ಮೊಬೈಲ್, ಬ್ಲೂಟೂತ್, ಸ್ಪೀಕರ್ ಇನ್ನಿತರ ಧ್ವನಿವರ್ಧಕಗಳ ಮೂಲಕ ರಾಷ್ಟ್ರಗೀತೆಯನ್ನು ನುಡಿಸುವುದನ್ನು ನಿಷೇಧಿಸಬೇಕು, ನಾಗರಿಕರು ಮತ್ತು ವಿದ್ಯಾರ್ಥಿಗಳು ಪ್ರತಿಯೊಂದು ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆಯನ್ನು ಸಾಮೂಹಿಕವಾಗಿ ಹಾಕಬೇಕು ಎಂದು ಮನವಿ ಮಾಡಿದರು,_
_ಮನವಿ ಸ್ವೀಕರಿಸಿ ಮಾತನಾಡಿದ ತಾಲೂಕು ಗ್ರೇಡ್ 2 ತಹಸೀಲ್ದಾರ್ ಬಿ.ಆರ್. ಲೋಕೇಶ್ ರವರು ನಮ್ಮ ತಾಲೂಕು ಕಛೇರಿಗೆ ಯಾವುದೇ ಕಾರ್ಯಕ್ರಮದ ಅನುಮತಿ ಪಡೆಯಲು ಬಂದಾಗ ಇನ್ನು ಮುಂದೆ ರಾಷ್ಟ್ರಗೀತೆಯನ್ನು ಮೊಬೈಲ್ ಮತ್ತು ಡಿಜೆ ಸ್ಪೀಕರ್ ಧ್ವನಿವರ್ಧಕಗಳಲ್ಲಿ ಹಾಕುವುದನ್ನು ನಿಲ್ಲಿಸಬೇಕು ಹಾಗೆ ರಾಷ್ಟ್ರಗೀತೆಯನ್ನು ಸಾಮೂಹಿಕವಾಗಿ ಹಾಡಬೇಕು ಎಂದು ಕಟ್ಟುನಿಟ್ಟಾಗಿ ಮಾರ್ಗ ಸೂಚಿಯನ್ನು ನೀಡುತ್ತೇವೆ ಎಂದು ತಿಳಿಸಿದರು,_
_ಇದೇ ಸಂದರ್ಭದಲ್ಲಿ ಕಾನೂನು ಸಲಹೆಗಾರ ವಕೀಲ ನಯಾಜ್ ಪಾಷಾ, ಮಂಡ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಬೇಗ್, ಮಂಡ್ಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಮುತಲಿಪ್, ಕಾರ್ಯಾಧ್ಯಕ್ಷ ಅತಿಕ್, ಅಜಮ್ ಸೇರಿದಂತೆ ಇನ್ನು ಅನೇಕ ಪದಾಧಿಕಾರಿಗಳು ಇದ್ದರು,_
*_ವರದಿ: ಸಾಯಿಕುಮಾರ್. ಎನ್. ಕೆ._*





