--ಜಾಹೀರಾತು--

ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ

On: December 3, 2025 4:41 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ

ಕೊಳ್ಳೇಗಾಲ:ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಂತೂರು ಗ್ರಾ.ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಸಮುದಾಯ ಭವನಗಳ ಉದ್ಘಾಟನೆ ಹಾಗೂ ಕಾಮಗಾರಿ ಭೂಮಿ ಪೂಜೆ ಕಾಮಗಾರಿಗಳಿಗೆ ಬುಧವಾರ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಚಾಲನೆ ನೀಡಿದರು.

ಕೊಳ್ಳೇಗಾಲ ತಾಲ್ಲೂಕಿನ ಮಲ್ಲಹಳ್ಳಿಮಾಳ ಗ್ರಾಮದಲ್ಲಿ ನಿರ್ಮಾಣವಾಗಿರುವ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ನೂತನ ಕಟ್ಟಡ ಉದ್ಘಾಟನೆ ಹಾಗೂ ಕುಂತೂರು ಮೋಳೆ ಗ್ರಾಮದಲ್ಲಿ ನಿರ್ಮಾಣವಾಗಿರುವ ಭಗೀರಥ ಉಪ್ಪಾರ ಸಮುದಾಯ ಭವನ ನೂತನ ಕಟ್ಟಡ ಉದ್ಘಾಟನೆ ಹಾಗೂ ಕುಂತೂರು ಗ್ರಾಮದಲ್ಲಿ 10 ಲಕ್ಷ ವೆಚ್ಚದಲ್ಲಿ ಡಾ. ಬಿ ಆರ್. ಅಂಬೇಡ್ಕರ್ ಭವನದ ಮುಂದುವರೆದ ಕಾಮಗಾರಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು

ಭವನಗಳ ಉದ್ಘಾಟನೆ ಹಾಗೂ ಕಾಮಗಾರಿ ಗುದ್ದಲಿ ಪೂಜೆಯನ್ನು ನೆರವೇರಿಸಿ ಶಾಸಕ ಎ. ಆರ್. ಕೃಷ್ಣಮೂರ್ತಿಯವರು ಮಾತನಾಡಿ ಕ್ಷೇತ್ರದ ಜನತೆಯ ಆಶೀರ್ವಾದದಿಂದ ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ಸರ್ಕಾರದಿಂದ ಮೊದಲ ಬಾರಿಗೆ 25 ಕೋಟಿ ಅನುದಾನವನ್ನು ಕೊಟ್ಟಿದ್ದರು ಅದರಲ್ಲಿ ಕ್ಷೇತ್ರದ ಎಲ್ಲಾ ಸಮುದಾಯದ ಎಲ್ಲಾ ವರ್ಗದ ಸಮುದಾಯಗಳ ಅಪೂರ್ಣ ಹಂತದಲ್ಲಿದ್ದ ಸಮುದಾಯ ಭವನಗಳ ಮುಂದುವರಿದ ಕಾಮಗಾರಿಗೆ ಅನುದಾನವನ್ನು ಕೊಡಲಾಗಿತ್ತು ಅಂಬೇಡ್ಕರ್ ಭವನ, ಬಸವ ಭವನ, ಭಗೀರಥ ಭವನ, ವಾಲ್ಮೀಕಿ ಭವನ, ಕನಕ ಭವನ, ಸಾಧಿ ಮಹಲ್, ಕ್ರಿಶ್ಚಿಯನ್ ಸಮುದಾಯದ ಭವನ, ಮಡಿವಾಳ ಭವನ ಈಗೆ ಎಲ್ಲಾ ವರ್ಗದ ಭವನಗಳ ಮುಂದುವರಿದ ಕಾಮಗಾರಿಗಳಿಗೆ 20 ಲಕ್ಷ 30 ಲಕ್ಷ 50 ಲಕ್ಷ, ಒಂದು ಕೋಟಿ ವರೆಗೂ ಅನುದಾನವನ್ನು ಕೊಡಲಾಗಿದೆ, ಕ್ಷೇತ್ರದಲ್ಲಿ ಎಲ್ಲಾ ಸಮುದಾಯದ ಜನರು ನನಗೆ ಮತ ನೋಡಿ ನನ್ನ ಗೆಲುವಿಗೆ ಸಹಕರಿಸಿದ್ದಾರೆ ಆದ್ದರಿಂದ ಎಲ್ಲಾ ಸಮುದಾಯದ ಎಲ್ಲಾ ವರ್ಗದವರಿಗೂ ಸಾಮಾಜಿಕ ಸಮಾನತೆಯನ್ನು ಕೊಡಬೇಕು ಎಂಬ ಉದ್ದೇಶದಿಂದ ಎಲ್ಲ ಸಮುದಾಯಗಳ ಭವನ ನಿರ್ಮಾಣಕ್ಕೆ ಅನುದಾನವನ್ನು ಕೊಡಲಾಗಿದೆ ಮತ್ತೆ ಇವಾಗ 50 ಕೋಟಿ ಅನುದಾನವನ್ನು ಕೊಟ್ಟು ಸರ್ಕಾರ ರಸ್ತೆ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಆದೇಶವನ್ನು ನೀಡಲಾಗಿತ್ತು ಆದ್ದರಿಂದ ಲೋಕೋಪಯೋಗಿ ಇಲಾಖೆ ಕೆ. ಆರ್. ಐ. ಡಿ. ಎಲ್., ಜಿಲ್ಲಾ ಪಂಚಾಯತ್ ಇಲಾಖೆಗಳಿಗೆ ಸಂಬಂಧ ಪಟ್ಟ ರಸ್ತೆಗಳು ಕ್ಷೇತ್ರದಲ್ಲಿ ಎಲ್ಲಾ ಗ್ರಾಮಗಳ ಎಲ್ಲ ಸಮುದಾಯದ ಬೀದಿ ಗಳಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ನೀಡಿ ಭೂಮಿ ಪೂಜೆಯನ್ನು ನೆರವೇರಿಸಲಾಗಿದೆ,
ಹಾಗೂ ಮುಡಿಗುಂಡ ಸೇತುವೆ ಹಳೆಯ ಸೇತುವೆ ಆಗಿದ್ದು ಪಕ್ಕದಲ್ಲಿ ಮತ್ತೊಂದು ಸೇತುವೆ ನಿರ್ಮಾಣ ಮಾಡಲು 15 ಕೋಟಿ ಅನುಮೋದನೆ ದೊರೆತಿದೆ ಹಾಗೂ ಕೊಳ್ಳೇಗಾಲದಲ್ಲಿ 250 ಹಾಸಿಗೆಯ ಆಸ್ಪತ್ರೆ ನಿರ್ಮಾಣ ಮಾಡಲು ಮುಡಿಗುಂಡ ರೇಷ್ಮೆ ಇಲಾಖೆ ಜಾಗದಲ್ಲಿ ಸ್ಥಳ ನಿಗದಿ ಮಾಡಲಾಗಿದ್ದು ಸದ್ಯದಲ್ಲಿಯೇ ರಾಜ್ಯದ ಮುಖ್ಯಮಂತ್ರಿಗಳಿಂದ
ಕೊಳ್ಳೇಗಾಲದ ಅಂಬೇಡ್ಕರ್ ಸಮುದಾಯ ಭವನ ಉದ್ಘಾಟನೆ ಹಾಗೂ ಆಸ್ಪತ್ರೆ ನಿರ್ಮಾಣ ಮತ್ತು ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಲಾಗುವುದು, ಎಂದರು

ಈ ಸಂಧರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರು ಚಂದ್ರು, ತಾಲ್ಲೂಕು ಅಧ್ಯಕ್ಷರು ರಾಜೇಂದ್ರ, ಯಳಂದೂರು ತಾಲ್ಲೂಕು ಅಧ್ಯಕ್ಷರು ಪ್ರಭುಪ್ರಸಾದ್, ಉಪ್ಪಾರ ನಿಗಮ ಮಾಜಿ ರಾಜ್ಯಾಧ್ಯಕ್ಷ ಶಿವಕುಮಾರ್, ಕುಂತೂರು ಗ್ರಾ.ಪಂ ಅಧ್ಯಕ್ಷರು ಗಂಗಮ್ಮಣಿ, ಉಪಾಧ್ಯಕ್ಷರು ನಾಗರತ್ನಮ್ಮ, ಉಪ್ಪಾರ ಸಂಘದ ಅಧ್ಯಕ್ಷರು ರಮೇಶ್, ತಾ.ಪಂ ಮಾಜಿ ಉಪಾಧ್ಯಕ್ಷರು ಮಲ್ಲಣ್ಣ, ಮುಖಂಡರು ತೋಟೇಶ್, ಚೇತನ್ ದೊರೆ, ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ನಿರ್ಮಿತಿ ಕೇಂದ್ರ ಉಪಯೋಜನಾ ವ್ಯವಸ್ಥಾಪಕರು ಪ್ರತಾಪ್, ಗುತ್ತಿಗೆದಾರ ರಾಚಯ್ಯ ಹಾಗೂ ಇತರರು ಇದ್ದರು.