ಯಲಿಯೂರು ಡೇರಿಗೆ ನೂತನ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷೆ ಲಕ್ಷ್ಮಮ್ಮ ಅವಿರೋಧ ಆಯ್ಕೆ
ದೇವನಹಳ್ಳಿ :- ಯಲಿಯೂರು ಹಾಲು ಉತ್ಪಾದಕರು ಉತ್ತಮ ರೀತಿಯಲ್ಲಿ ಆದಾಯಗಳಿಸಲು ಗುಣ ಮಟ್ಟದಹಾಲನ್ನು ಸರಬರಾಜು ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯವೆಂದು ಸೂಸೖಟಿ ಅಧ್ಯಕ್ಷ ಜಿಕೆ. ಮುತ್ತಪ್ಪ ಸಲಹೆ ನೀಡಿದರು.
ದೇವನಹಳ್ಳಿ ತಾಲೂಕಿನ ಯಲಿಯೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾ ವಣೆಯಲ್ಲಿ ವಿರೋಧವಾಗಿ ಆಯ್ಕೆಯಾದವರಿಗೆ ಅಭಿನಂದಿಸಿದ ಮಾತನಾಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಪವಿತ್ರ ಸೋಮ ಶೇಖರ್ ಮಾತನಾಡಿ ಹಸುಗಳಿಂದ ಹಾಲು ಕರೆಯಲು ಸ್ವಚ್ಛ ಮತ್ತು ಆರೋಗ್ಯಕರ ಪ್ರದೇಶ ಅತ್ಯವಶ್ಯಕ ಹಾಲು ಉತ್ಪಾದ ನೆಗೆ ಹೆಸರುವಾಸಿ ಪಡೆದ ಕೀರ್ತಿ ಮರಳಿ ಮುನ್ನಡೆಗೆ ಬರಲು ಶ್ರಮವಹಿಸಬೇಕೆಂದರು.
ಈ ಸಂದರ್ಭದಲ್ಲಿ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಹನುಮಪ್ಪ, ತಾಲೂಕು. ಸೂಸೃಟಿ ಮಾಜಿ ಸದಸ್ಯ ನಾರಾಯಣಸ್ವಾಮಿ, ಹಾಲಿ ನಿರ್ದೇಶಕ ಚಂದ್ರಶೇಖರ್, ಯಲಿಯೂರು ಗ್ರಾಮ ಪಂಚಾಯಿತಿ ಸದಸ್ಯರಾದ ಪವಿತ್ರ ಸೋಮಶೇಖರ್, ರೂಪಚಿಕ್ಕಣ್ಣ, ನೇತ್ರಾವತಿ ಮಂಜು ನಾಥ್, ಯಲಿಯೂರು ಡೇರಿ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷೆ ಲಕ್ಷ್ಮಮ್ಮ ನಿರ್ದೇಶಕ ಆನಂದ್ ಗೌಡ, ಮುನಿರಾಜು, ಮಾಜಿ ಅಧ್ಯಕ್ಷರಾದ ರಘುವೀರ್, ಮುನಿರಾಜು, ನಾರಾಯಣಸ್ವಾಮಿ, ಸೂಸೖಟಿ ಅಧ್ಯಕ್ಷ ಮುತ್ತಪ್ಪ, ನಿರ್ದೆಶಕರಾದ ತಿಮ್ಮ ರಾಯಪ್ಪ, ಪ್ರಭಾಕರ್, ಆಂಜಿನಪ್ಪ, ಶ್ರೀನಿವಾಸ್ ಗೌಡ, ಗ್ರಾಮದ ಮುಖಂಡ ಸಂತೋಷ್, ಭರತ್, ಮುನಿಕೃಷ್ಣ, ಪ್ರಭಾಕರ್, ಹನುಮೇಗೌಡ, ಹರೀಶ್ ಹಾಜರಿದ್ದರು.





