ಘಾಟಿ ದೇವಾಲಯಕ್ಕೆ ವಾಸ್ತುಶಿಲ್ಪಿ ಬೇಟಿ

ದೊಡ್ಡಬಳ್ಳಾಪುರ: ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯಕ್ಕೆ ಸರ್ಕಾರದ ಲೋಕೋಪಯೋಗಿ ಇಲಾಖೆಯ ಮುಖ್ಯ ವಾಸ್ತು ಶಿಲ್ಪಿಗಳಾದ ಶ್ರೀಮತಿ ರಾಜೇಶ್ವರಿ ರವರು ಭೇಟಿ ನೀಡಿ, ದೇವಾಲಯಕ್ಕೆ ಭೇಟಿ ನೀಡುವ ಭಕ್ತಾಧಿಗಳ ಅನುಕೂಲಕ್ಕಾಗಿ ಕೈಗೊಳ್ಳಬೇಕಾದ ಕಾಮಗಾರಿಗಳಾದ ಸುಸಜ್ಜಿತ ದಾಸೋಹ ಭವನ ನಿರ್ಮಾಣ ಕಾಮಗಾರಿ, ಕ್ಯೂ ಕಾಂಪ್ಲೆಕ್ಸ್, ಆಡಳಿತ ಕಛೇರಿ ಹಾಗೂ ಕೈಗೊಳ್ಳಬಹುದಾದ ಇನ್ನಿತರೇ ಕಾಮಗಾರಿಗಳ ಬಗ್ಗೆ ಚರ್ಚಿಸಿದರು. ಈ ಸಮಯದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಶ್ರೀ ಪಿ.ದಿನೇಶ್, ಉಪಕಾರ್ಯದರ್ಶಿ ಶ್ರೀ ನಾರಾಯಣಸ್ವಾಮಿ, ಪ್ರಧಾನ ಅರ್ಚಕರಾದ ಶ್ರೀನಿಧಿ, ನಾಮ ನಿರ್ದೇಶಿತ ಸದಸ್ಯರಾದ ಶ್ರೀ ರಂಗಪ್ಪ, ಶ್ರೀ ರವಿ, ಶ್ರೀ ಲಕ್ಷ್ಮಾ ನಾಯ್ಕ, ಶ್ರೀ ಮಹೇಶ್ , ಶ್ರೀಮತಿ ಹೇಮಲತಾ ರಮೇಶ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆಯ ಸಿಬ್ಬಂದಿ ವರ್ಗ ಹಾಗು ದೇವಾಲಯದ ಸಿಬ್ಬಂದಿಗಳು ಹಾಜರಿದ್ದರು.