ವಸತಿ ಶಾಲೆಯ ಮಕ್ಕಳಲ್ಲಿ ಓದಿನ ಜೊತೆ ಏಕಾಗ್ರತೆ, ಶ್ರದ್ದಾ ಭಕ್ತಿ ಯನ್ನು ಹೇಳಿಕೊಡುತ್ತಿರುವುದು ಶ್ಲಾಘನೀಯ–ಗೌರವ್
ಕೃಷ್ಣರಾಜಪೇಟೆ:ವಸತಿ ಶಾಲೆಯ ಮಕ್ಕಳಲ್ಲಿ ಶ್ರದ್ಧೆ, ಏಕಾಗ್ರತೆ, ಭಕ್ತಿಯನ್ನು ತಮ್ಮ ಓದಿನ ಜೊತೆಯಲ್ಲಿ ಹೇಳಿಕೊಡುತ್ತಿರುವುದು ತುಂಬಾ ಶ್ಲಾಘನೀಯವಾದುದು ವಿದ್ಯಾರ್ಥಿಗಳು ಸರ್ಕಾರ ಹಾಗೂ ಸಮಾಜ ಸೇವಾ ಸಂಸ್ಥೆಗಳಿAದ ದೊರಕುವ ಸೌಲಭ್ಯಗಳನ್ನು ಬಳಸಿಕೊಂಡು ದೇಶದ ಸತ್ಪಜ್ರೆಗಳಾಗಿ ರೂಪುಗೊಳ್ಳಬೇಕೆಂದು ಮಂಡ್ಯದ ಶ್ರೀ ಸತ್ಯ ಸಾಯಿ ಶಾರದ ಅನಿಕೇತನಮ್ ಸಂಸ್ಥೆಯ ಅಧ್ಯಕ್ಷರಾದ ಗೌರವ್ ಕರೆ ನೀಡಿದರು. ತಾಲ್ಲೂಕಿನ ಮಾಗೋನಹಳ್ಳಿ ಶ್ರೀ ಮರಡಿಲಿಂಗೇಶ್ವರ ದೇವಸ್ಥಾನ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಂಡ್ಯದ ಶ್ರೀ ಸತ್ಯ ಸಾಯಿ ಶಾರದ ಅನಿಕೇತನಮ್ ಸಂಸ್ಥೆಯವರು ಹಮ್ಮಿಕೊಂಡಿದ್ದ 15 ದಿನಗಳ ಕಾಲ ಉಚಿತ ಕಂಪ್ಯೂಟರ್ ತರಬೇತಿ ಶಿಬಿರದ ಸಮಾರೋಪ ಹಾಗೂ ವಸತಿ ಶಾಲೆಯ 2025-26 ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಶಾಲಾ ಸಂಸತ್ ಹಾಗೂ ವಿವಿಧ ಸಮಿತಿಗಳ ಚಾಲನೆಗಾಗಿ ಆಯೋಜಿಸಲಾಗಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಲ್ಲಿ ಆರೋಗ್ಯ, ಓದು, ಆಹಾರ ಪದ್ದತಿಯನ್ನು ಚೆನ್ನಾಗಿ ಇಟ್ಟುಕೊಂಡರೆ ಆರೋಗ್ಯಕರವಾಗಿ ಕಲಿಯಬಹುದು. ಇದಕ್ಕೆ ಪೂರಕವಾಗಿ ನಮ್ಮ ಸಂಸ್ಥೆಯ ಸ್ವಾಮೀಜಿಯವರು ದೇಶದಾಧ್ಯಂತಹ ಸೇವೆ ನೀಡುತ್ತಿದ್ದಾರೆ. ಜಿಲ್ಲೆಯ ವಿವಿಧ ವಸತಿ ಶಾಲೆಗಳಿಗೆ ಉಚಿತ ಕಂಪ್ಯೂಟರ್ ತರಬೇತಿಯನ್ನು ನೀಡಲಾಗುತ್ತಿದೆ. ಇಂದಿನ ದಿನಮಾನದಲ್ಲಿ ಕಂಪ್ಯೂಟರ್ ಶಿಕ್ಷಣ ಮುಖ್ಯವಾಗಿದೆ. ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬಂತೆ ಗುರುಗಳ ಅನುಗ್ರಹ ವಿದ್ದರೆ ಮಕ್ಕಳು ಉತ್ತಮವಾಗಿ ಕಲಿಯುತ್ತಾರೆ. ಮಕ್ಕಳಿಗೆ ಉತ್ತಮ ರೀತಿಯಲ್ಲಿ ಶಿಕ್ಷಣ ನೀಡಿದರೆ ದೇಶದ ಉತ್ತಮ ಪ್ರಜೆಗಳಾಗಿ ಬೆಳೆಯುತ್ತಾರೆ. ಶ್ರೀ ಸತ್ಯ ಸಾಯಿ ಸಂಸ್ಥೆಯು ಸದಾ ವಸತಿ ಶಾಲೆಯ ಸಂಪರ್ಕದಲ್ಲಿ ಇರುತ್ತದೆ ಎಂದು ಗೌರವ್ ತಿಳಿಸಿದರು._
_ಮಕ್ಕಳಿಗೆ ಉತ್ತಮ ರೀತಿಯಲ್ಲಿ ಕಂಪ್ಯೂಟರ್ ಬೋಧನೆ ಮಾಡಿರುವ ಶಿಕ್ಷಕ ಓಂಕಾರ್ ರವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು._
_ಶಾಲಾ ಸಂಸತ್ ಚುನಾವಣೆಯಲ್ಲಿ ಆಯ್ಕೆಗೊಂಡ ಮಂತ್ರಿ ಮಂಡಲದ ಸಚಿವರುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು._
_ವಸತಿ ಶಾಲೆಯ ಪ್ರಾಂಶುಪಾಲ ಮಲ್ಲಿಕಾರ್ಜುನಸ್ವಾಮಿ.ಎಲ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
_ಶ್ರೀ ಸತ್ಯ ಸಾಯಿ ಶಾರದ ಅನಿಕೇತನಮ್ ಸಂಸ್ಥೆಯ ಉಪ ಪ್ರಧಾನಪಾಲಕರಾದ ಕಾರ್ತಿಕ್, ಗಿರಿಧರ್, ಶ್ರೀ ಸತ್ಯ ಸಾಯಿ ಶಾರದ ಶಾಲೆಯ ಪ್ರಾಂಶುಪಾಲ ಚೇತನ್, ಸಂಸ್ಥೆಯ ಕಂಪ್ಯೂಟರ್ ಶಿಕ್ಷಕರಾದ ಓಂಕಾರ್, ಮಧು, ನಿಲಯಪಾಲಕ ಧನಂಜಯಕುಮಾರ್.ಸಿ.ಕೆ, ಹಿರಿಯ ಶಿಕ್ಷಕರಾದ ಹೆಚ್.ಮಹೇಶ್, ಎಂ.ಎಸ್.ಸುನೀಲ್ಕುಮಾರ್, ಸಾಂಸ್ಕೃತಿಕ ಸಮಿತಿ ಮುಖ್ಯಸ್ಥ ಟಿ.ವೈ.ಅನಂತನರಸಿಂಹ. ದೈಹಿಕ ಶಿಕ್ಷಣ ಶಿಕ್ಷಕ ಹೆಚ್.ಪಿ.ನವೀನ್ ಕುಮಾರ್, ಶಿಕ್ಷಕಿ ತೇಜಶ್ವಿನಿ, ಪ್ರಥಮ ದರ್ಜೆ ಸಹಾಯಕಿ ಟಿ.ಎನ್.ಅರ್ಚನ ಸೇರಿದಂತೆ ಬೋಧಕ ಹಾಗೂ ಬೋಧಕೇತರ ನೌಕರರು ಭಾಗವಹಿಸಿದ್ದರು.
ವರದಿ: ಸಾಯಿಕುಮಾರ್. ಎನ್. ಕೆ