ಮಂಗಲ ಹೊಸೂರು ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಮನವಿ
ಚಾಮರಾಜನಗರ: ತಾಲೂಕಿನ ಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಂಗಲ ಹೊಸೂರು ಗ್ರಾಮಕ್ಕೆ ಸೇರಿರುವ ಗಾನಕಟ್ಟೆ ಕೆರೆಯಲ್ಲಿ ಸುಮಾರು ವರ್ಷಗಳಿಂದ ಮುಳ್ಳು ಗಿಡಗಂಟಿಗಳು ಬೆಳೆದು ಪೊದೆಯಂತಾಗಿದ್ದು, ಸದರಿ ಪೊದೆಗಳಲ್ಲಿ ಕಾಡು ಪ್ರಾಣಿಗಳು, ವಿಷಪೂರಿತ ಹಾವು ಚೇಳುಗಳು ವಾಸಿಸುವ ತಾಣವಾಗಿದೆ. ಸದರಿ ಕೆರೆಯು ತಿರುಗಾಡುವ ಮುಖ್ಯ ರಸ್ತೆಯ ಪಕ್ಕದಲ್ಲಿದ್ದು, ತಿರುವಿನಲ್ಲಿ ಅಪಘಾತ ಸಂಭವಿಸುವ ಸಾಧ್ಯತೆಗಳಿದ್ದು, ಅಲ್ಲದೆ ಕೆರೆಯಿಂದ ಹಾವು ಚೇಳುಗಳು ಹೊರಗೆ ಬರುತ್ತಿದ್ದು, ತಿರುಗಾಡುವ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಆದ್ದರಿಂದ ದಯಮಾಡಿ ತಾವುಗಳು ಅತಿ ಶೀಘ್ರದಲ್ಲಿ ಸದರಿ ಗಾನಕಟ್ಟೆ ಕೆರೆಯಲ್ಲಿ ಬೆಳೆದಿರುವ ಮುಳ್ಳು ಗಿಡಗಂಟಿಗಳನ್ನು ತೆರವು ಮಾಡಿಸಿಕೊಡಬೇಕು. ಮಂಗಲ ಹೊಸೂರು ಗ್ರಾಮದ ಎಲ್ಲಾ ಬೀದಿಗಳಲ್ಲಿ ಮರ್ಕ್ಯೂರಿ ಲೈಟ್ ಗಳನ್ನು ಅಳವಡಿಸಬೇಕೆಂದು ಈ ಬಗ್ಗೆ ಮಂಗಲ ಗ್ರಾಮ ಪಂಚಾಯಿತಿ ಪಿಡಿಒ ಅವರಿಗೆ ಅರ್ಜಿ ಸಲ್ಲಿಸಲಾಗಿರುತ್ತದೆ. ಅವರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ಈ ಬಗ್ಗೆ ವಿಚಾರಿಸಿದಾಗ ಮುಂದಿನ ವರ್ಷ ಮಾಡಿಸುವುದಾಗಿ ಉಡಾಫೆ ಉತ್ತರ ಹೇಳುತ್ತಾರೆ. ಅಲ್ಲದೆ ಬೇಜವಾಬ್ದಾರಿತನದಿಂದ ವರ್ತಿಸುತ್ತಾರೆ. ಆದುದರಿಂದ ಗೌರಿ ಗಣೇಶ ಹಬ್ಬದ ಪ್ರಯುಕ್ತ ಹಬ್ಬ ಜರುಗಲಿದ್ದು ,ಅತಿ ಜರೂರಾಗಿ ಮೇಲಿನ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟ ಗ್ರಾಮ ಪಂಚಾಯತಿ ಪಿಡಿಒ ಅವರಿಗೆ ನಿರ್ದೇಶನ ನೀಡಿ ಮಂಗಲ ಹೊಸೂರು ಗ್ರಾಮಕ್ಕೆ ಅನುಕೂಲ ಮಾಡಿಕೊಡಬೇಕೆಂದು ಡಾ.ಎಸ್ ಪಿ ಬಾಲಸುಬ್ರಮಣ್ಯಂ ಗಾನ ಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ಅಧ್ಯಕ್ಷ ಎಚ್.ಎಂ. ಶಿವಣ್ಣ ಮಂಗಲ ಹೊಸೂರು ಅವರು
ಚಾಮರಾಜನಗರ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ವರದಿ: ಆರ್ ಉಮೇಶ್ ಮಲಾರಪಾಳ್ಯ