ಮತಾಂತರ ಆರೋಪ?: ಶ್ರೀರಾಂಪುರ ಬಜರಂಗದಳದ ಕಾರ್ಯಕರ್ತರು ದಾಳಿ
ಹೊಸದುರ್ಗ:ಹೊಸದುರ್ಗ ತಾಲ್ಲೂಕಿನ ಹಾಗೂ ಶ್ರೀ ಗವಿರಂಗನಾಥ ಸ್ವಾಮಿ ದೇವಸ್ಥಾನದ ಹಾದು ಹೋಗಿರುವ ರಸ್ತೆಯ ಮತ್ತು ಚಿಕ್ಕನಾಯಕನಹಳ್ಳಿ ಗಡಿ ಭಾಗದ, ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಒಳಪಡುವ ಹನುಮಂತಪುರ ಗ್ರಾಮದಲ್ಲಿ ಬಲವಂತದ ಮತಾಂತರ ಆರೋಪ ಕಂಡು ಬಂದಿದ್ದು. ಸ್ಥಳೀಯರಿಂದ ಮಾಹಿತಿ ತಿಳಿದ ಬಜರಂಗದ ಕಾರ್ಯಕರ್ತರು ಕೂಡಲೇ ಆ ಗ್ರಾಮಕ್ಕೆ ದೌಡಾಯಿಸಿ. ಅಮಾಯಕ ಹಿಂದುಗಳನ್ನು ಬಡತನ, ಆರೋಗ್ಯದ ನೆಪದಲ್ಲಿಹಾಗೂ ಹಣದ ಆಸೆ ಆಮಿಷ ಒಡ್ಡುವ ಮೂಲಕ ಮತಾಂತರ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ಮಂಜುನಾಥ ಎಂಬ ವ್ಯಕ್ತಿಯನ್ನು ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಬಜರಂಗದಳದ ಕಾರ್ಯಕರ್ತರು ಹಾಗೂ ಗ್ರಾಮದ ಸ್ಥಳೀಯರು, ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಲವಂತದ ಮತಾಂತರ ಸಲ್ಲದು ಎಂದು ಕಾನೂನಿನಲ್ಲಿ ನಿಯಮವಿದ್ದರೂ,ಸಹ ಜನರ ಆರ್ಥಿಕ ಪರಿಸ್ಥಿತಿಯನ್ನು ಮುಂದಿಟ್ಟುಕೊಂಡು ಅಲ್ಲಿನ ಜನಗಳಿಗೆ ಆಮಿಷ ಮಾಡಿ ಮತಾಂತರ ಮಾಡಲು ಹನುಮಂತಪುರ ಗ್ರಾಮಕ್ಕೆ ಮಂಜುನಾಥ ಎಂಬ ವ್ಯಕ್ತಿ ಬಂದಿದ್ದು, ಅಲ್ಲಿನ ಜನರಿಗೆ ಬಲವಂತವಾಗಿ ಆಮಿಷವೊಡ್ಡಿ ಅವರನ್ನು ಇನ್ನೊಂದು ಧರ್ಮಕ್ಕೆ ಮತಾಂತರವಾಗಲು ಪ್ರೇರೇಪಿಸುತಿದ್ದಂತ ಸಮಯದಲ್ಲಿ, ಸುದ್ದಿ ತಿಳಿದು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಧಾವಿಸಿದ ಶ್ರೀರಾಂಪುರ ಬಜರಂಗದಳ ಕಾರ್ಯಕರ್ತರು ಮಂಜುನಾಥ ಎಂಬ ವ್ಯಕ್ತಿಗೆ ಭಜರಂಗದಳದ ಕಾರ್ಯಕರ್ತರು ತಕ್ಕ ಪಾಠ ಕಲಿಸಿದ್ದಾರೆ.
ಅದರೊಂದಿಗೆ, ಆ ಗ್ರಾಮದಲ್ಲೇ ಬಜರಂಗದಳ ಘಟಕವನ್ನು ಸ್ಥಾಪಿಸಿ, ಮುಂದಿನ ದಿನಗಳಲ್ಲಿ ಮತಾಂತರ ನಡೆಯದಂತೆ ಹಿಂದೂ ಯುವಕರ ಪಡೆಯನ್ನು ರಚಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಶ್ರೀರಾಂಪುರ ಬಜರಂಗದಳದ ಕಾರ್ಯಕರ್ತರಾದ ಜಗದೀಶ್ ರಾಮಯ್ಯ ಮಾತನಾಡಿ“ಧರ್ಮಕ್ಕೆ ತೊಂದರೆ ಎಂಬ ಸುದ್ದಿ ಬಂದರೆ ಸಾಕು, ಜಾಗ ಯಾವುದು ಎನ್ನುವುದು ಮುಖ್ಯವಲ್ಲ, ಧರ್ಮ ರಕ್ಷಣೆ ಮುಖ್ಯ!” ಎಂಬ ನಿಲುವಿನಲ್ಲಿ, ಬಲವಂತ ಮತಾಂತರ ಮಾಡುತ್ತಿರುವ ಸುದ್ದಿ ತಿಳಿದು, ಹನುಮಂತಪುರ ಗ್ರಾಮಕ್ಕೆ ಹೋಗಿ ಬಲವಂತದ ಮತಾಂತರಕ್ಕೆ ಪ್ರೇರೇಪಿಸುತ್ತಿದ್ದ ವ್ಯಕ್ತಿಯನ್ನು ತಡೆದು, ಕಾನೂನು ಬದ್ದವಾಗಿ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದೇವೆ.ಹಾಗೂ ಮಂಜುನಾಥ್ ಎಂಬ ವ್ಯಕ್ತಿಯಿಂದ ಇನ್ನು ಮುಂದೆ ಯಾವುದೇ ತರಹ ಹಿಂದೂ ಧರ್ಮದವರನ್ನು ಮತಾಂತರ ಮಾಡುವುದಿಲ್ಲ ಎಂದು ಬಜರಂಗದ ಕಾರ್ಯಕರ್ತರು ಮುಚ್ಚಳಿಕೆ ಬರೆಸಿಕೊಂಡುದ್ದೇವೆ ಎಂಬ ಮಾಹಿತಿ ಲಭ್ಯವಾಗಿದೆ, ಮಂಜುನಾಥ್, ಗಿರೀಶ್, ಯತೀಶ್, ದರ್ಶನ್, ಸೋಮೇನಹಳ್ಳಿ ಶಶಿಧರ್ ಹಾಗೂ ಬಜರಂಗದಳದ ಅನೇಕ ಕಾರ್ಯಕರ್ತರು ಸ್ಥಳೀಯರು ಇತರರು ಇದ್ದರು.
ವರದಿ:ಮಂಜುನಾಥ್ ಡಿ, ಶ್ರೀರಾಂಪುರ