ಶ್ರೀ ಕ್ಷೇತ್ರ ಗೊರವನಹಳ್ಳಿ ದೇವಸ್ಥಾನಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಭೇಟಿ

ಕೊರಟಗೆರೆ: ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಹಾಗೂ ನೂರು ವರ್ಷಗಳ ಇತಿಹಾಸ ಇರುವ ಶ್ರೀ ಕ್ಷೇತ್ರ ಗೊರವನಳ್ಳಿ ಮಹಾಲಕ್ಷ್ಮಿ ದೇವಸ್ಥಾನಕ್ಕೆ. ಕೇಂದ್ರ ಜಲ ಶಕ್ತಿ ಹಾಗೂ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣನವರು ಹಲವಾರು ಜಿಲ್ಲೆಯ ಬಿಜೆಪಿ ಹಾಗೂ ಜಾತ್ಯತೀತ ಜನತಾದಳದ ಮುಖಂಡರುಗಳ ಜೊತೆ ದೇವಿಯ ದರ್ಶನ ಪಡೆದರು.

ಕೇಂದ್ರ ಸಚಿವ ವಿ. ಸೋಮಣ್ಣ ಮಾತನಾಡಿ: ಗುರುಪೂರ್ಣಿಮೆ ದಿನದಂದು ರಾಜ್ಯದಲ್ಲಿ ಹಲವಾರು ಕಾರ್ಯಕ್ರಮಗಳು ಇದ್ದ ಕಾರಣ ನಾನು ಈ ಕಾರ್ಯಕ್ರಮಕ್ಕೆ ಸ್ವಲ್ಪ ತಡವಾಗಿ ಬಂದಿದ್ದೇನೆ. ಆದರೂ ಸಹ ಗುರುಪೂರ್ಣಿಮೆ ದಿನದಂದು ಹಲವಾರು ಮಠಾಧೀಶರು ಮತ್ತು ಧರ್ಮದರ್ಶಿಗಳು ಅವರ ಎಲ್ಲಾ ವಿಶೇಷ ಕಾರ್ಯ ಕರ್ಮಗಳನ್ನು ಬಿಟ್ಟು. ವಿಶೇಷವಾಗಿ ಶ್ರೀ ಕ್ಷೇತ್ರ ಗೊರವನಹಳ್ಳಿಗೆ ಬಂದು ನೂತನ ದೇವಸ್ಥಾನದ ವಿನ್ಯಾಸ. ದಾಸೋಹ ಮಂದಿರ. ನವಿಕೃತ ಕಲ್ಯಾಣ ಮಂಟಪ. ದಾಸೋಹ ಮಂದಿರ ಉದ್ಘಾಟನೆ ಮಾಡಿದ್ದಾರೆ. ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು ಎಂದು ಹೇಳುತ್ತಾ. ತುಮಕೂರು ಜಿಲ್ಲೆ ಹಾಗೂ ರಾಜ್ಯದಲ್ಲಿ ಉತ್ತಮವಾದ ಹೆಸರು ಪಡೆದಿರುವ ಸಿದ್ದಗಂಗಾ ಮಠದ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಹಸಿದ ವಿದ್ಯಾರ್ಥಿಗಳಿಗೆ ಹಾಗೂ ಕ್ಷೇತ್ರಕ್ಕೆ ಬರುವ ಜನರಿಗೆ ಅನ್ನ ದಾಸೋಹ ಮಾಡಿಕೊಂಡು ಬರುತ್ತಿದ್ದು ಅದರಂತೆ ಶ್ರೀ ಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ದಿನನಿತ್ಯ ಸಾವಿರಾರು ಜನರು ದಾಸೋಹಕ್ಕೆ ಬಂದು ಪ್ರಸಾದವನ್ನು ಮಾಡುತ್ತಿದ್ದಾರೆ ಇದರ ನೇತೃತ್ವ ವಹಿಸಿರುವ ಶ್ರೀ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರಿಗೆ ಕೃತಜ್ಞತೆಗಳು ಹಾಗೂ ರಾಜ್ಯದ ಹಲವಾರು ದೇವಾಲಯಗಳು ಪ್ರಖ್ಯಾತಿ ಪಡೆದಿದ್ದಿರುವ ಆ ಸಾಲಿಗೆ ಶ್ರೀ ಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನವು ಕೂಡ ಮುಂದಿನ ದಿನಗಳಲ್ಲಿ ಸೇರ್ಪಡೆಯಾಗುವುದು ಯಾವುದೇ ಅನುಮಾನವಿಲ್ಲ. ಈ ದೇವಿಯು ಈ ಭಾಗದ ಜನರಿಗೆ ಮುತ್ತು ರೈತರಿಗೆ ಮಳೆ ಮತ್ತು ಬೆಳೆ ಉತ್ತಮವಾಗಿ ನೀಡಲಿ. ಎಂದು ಸಂದರ್ಭದಲ್ಲಿ ಕೇಳಿಕೊಳ್ಳುತ್ತೇನೆ ಎಂದರು.

ಈ ಸಂದರ್ಭದಲ್ಲಿ ತುಮಲ್ ನಿರ್ದೇಶಕ ವಿ. ಸಿದ್ದಗಂಗಯ್ಯ. ಮುಖಂಡರಾದ ದರ್ಶನ್. ಮಾವತೂರು ಮಂಜು. ಸುಂಕದಹಳ್ಳಿ ಕುಮಾರ್. ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಬಿ.ಜಿ. ವಾಸುದೇವ್. ವಿಶೇಷ ಕರ್ತವ್ಯ ಅಧಿಕಾರಿ ಕೇಶವಮೂರ್ತಿ. ಕಾರ್ಯನಿರ್ವಣಾಧಿಕಾರಿ ಜೆ. ಸಿ. ಲಕ್ಷ್ಮಯ್ಯ. ಕಾರ್ಯದರ್ಶಿ ಮುರಳಿಕೃಷ್ಣ. ಜಗದೀಶ್. ಮಂಜುನಾಥ್. ಶ್ರೀಪ್ರಸಾದ್. ನಟರಾಜ್. ಲಕ್ಷ್ಮಿ ಕಾಂತ್. ರವಿ ರಾಜೇ ಅರಸ್. ಚಿಕ್ಕನರಸಯ್ಯ. ನಟರಾಜು. ಬಾಲಕೃಷ್ಣ. ಓಂಕಾರೇಶ್. ನಾಗರಾಜ್. ಹಲವಾರು ಮುಖಂಡರು ಹಾಗೂ ಭಕ್ತಾದಿಗಳು ಹಾಜರಿದ್ದರು.

ವರದಿ– ಭರತ್ ಕೆ