ಮಹಿಳೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ ಆರೋಪಿಗಳು ಪೊಲೀಸರ ಬಲೆಗೆ :ಅಳಿಯನಿಂದಲೇ ಅತ್ತೆಯ ಕೊಲೆ

ಕೊರಟಗೆರೆ : ತಾಲೂಕಿನ 19 ಸ್ಥಳಗಳಲ್ಲಿ ದೇಹದ ಅಂಗಾಂಗಗಳನ್ನು ಕತ್ತರಿಸಿದ ಪ್ರಕರಣ ತುಮಕೂರು ತಾಲೂಕಿನ ಬೆಳ್ಳಾವಿಯ ನಿವಾಸಿ ಲಕ್ಷ್ಮಿದೇವಮ್ಮ ಎಂಬಾಕೆ ಮಗಳನ್ನು ಅನೈತಿಕ ಸಂಬಂಧಕ್ಕೆ ಒತ್ತಾಯ ಮಾಡುತ್ತಿದ್ದ ಕಾರಣ ಇದರಿಂದ ಬೇಸತ್ತ ಅಳಿಯ ಡಾಕ್ಟರ್ ರಾಮಚಂದ್ರಯ್ಯ ಹತ್ಯಗೆ ಸಂಚು ರೂಪಿಸಿದರು ಎಂದು ಹೇಳಲಾಗುತ್ತದೆ.

ಆಗಸ್ಟ್ 3ರಂದು ಲಕ್ಷ್ಮೀದೇವಮ್ಮ ಮಗಳನ್ನು ನೋಡಿ ಬರಲು ಮನೆಯಿಂದ ಹೋಗಿದ್ದರು. ಆಗಸ್ಟ್ 7 ರಂದು ತಾಲೂಕಿನ ಹೋಳವನಹಳ್ಳಿ ಹೋಬಳಿಯ ಚಿಂಪುಗಾನಹಳ್ಳಿ ಕೋಳಾಲ ಹೋಬಳಿಯ ಮಧ್ಯೆ ವೆಂಕಟಾಪುರ ಹಾಗೂ ಚಂದ್ರಯಾನದುರ್ಗ ಹೋಬಳಿಯ ವ್ಯಾಪ್ತಿಯ ಬೆಂಡೋಣೆ ಗ್ರಾಮದ ಬಳಿ ದೇಹದ ಅಂಗಗಳು ಪತ್ತೆಯಾಗಿದವು ನಂತರ ಸಿದ್ದರಬೆಟ್ಟ ಸಮೀಪ ಕೊಳೆತ ಸ್ಥಿತಿಯಲ್ಲಿ ತಲೆ ಹಾಗೂ ಉಡುಪು ಸಿಕ್ಕಿತ್ತು.

ಕುಟುಂಬಸ್ಥರಿಂದ ಗುರುತುಗಳನ್ನು ಪತ್ತೆಹಚ್ಚಲು ಕೈ ಮತ್ತು ಮುಖದ ಗುರುತುಗಳು ಮತ್ತು ಉಡುಪುಗಳ ಆಧಾರದ ಮೇಲೆ ಕೊಲೆಯಾಗಿರುವುದು ಲಕ್ಷ್ಮಿದೇವಮ್ಮ ಎಂದು ದೃಢ ಪಟ್ಟಿತ್ತು.

ಫಾರ್ಮ್ ಹೌಸ್ ನಲ್ಲಿ ಕೊಲೆ : ಕೋಳಾಲ ಹೋಬಳಿಯ ಫಾರ್ಮ್ ಹೌಸ್ ನಲ್ಲಿ ಲಕ್ಷ್ಮೀದೇವಮ್ಮ ಕೊಲೆಯಾಗಿರುವುದು ಪತ್ತೆಯಾಗದಿರಲಿ ಎಂದು ತಾಲೂಕಿನ 19 ಕಡೆಯಲ್ಲಿ ದೇಹದ ಅಂಗಗಳನ್ನು ರಸ್ತೆಯ ಪಕ್ಕಕ್ಕೆ ಎಸೆದು ನಂತರ ರಾಮಚಂದ್ರಪ್ಪ ಧರ್ಮಸ್ಥಳಕ್ಕೆ ಪ್ರವಾಸ ಹೋಗಿದ್ರು. ಇದು ಅನುಮಾನಕ್ಕೆ ಕಾರಣವಾಯಿತು ಆರೋಪಿಗಳನ್ನು ಧರ್ಮಸ್ಥಳದಲ್ಲಿ ವಶಕ್ಕೆ ಪಡೆಯಲಾಗಿದೆ.

‘ ಸ್ಪೆಷಲ್ ಬಾಕ್ಸ್ ‘

ಆರೋಪಿಗಳ ವಿವರ : 1) ಡಾಕ್ಟರ್ ರಾಮಚಂದ್ರಯ್ಯ ಎಸ್ 47 ವರ್ಷ ಕುವೆಂಪು ನಗರ ತುಮಕೂರ್ ಟೌನ್ 2 ) ಸತೀಶ್ 38 ವರ್ಷ ಕಲ್ಲಹಳ್ಳಿ ಊರ್ಡಿಗೆರೆ ಹೋಬಳಿ, ತುಮಕೂರು ಜಿಲ್ಲೆ
3 ) ಕಿರಣ್ ಕೆ ಎಸ್ 32 ಲ್ಲಹಳ್ಳಿ ಊರ್ಡಿಗೆರೆ ಹೋಬಳಿ, ತುಮಕೂರು ಜಿಲ್ಲೆ ಎಂದು ತಿಳಿದು ಬಂದಿದೆ.

ಪ್ರಕರಣದ ಆರೋಪಿಗಳ ಪತ್ತೆಗಾಗಿ ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ ವಿ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಸಿ ಗೋಪಾಲ್ ಮತ್ತು ಪುರುಷೋತ್ತಮ್ ಎಂಎಲ್ ರವರ ನೇತೃತ್ವದಲ್ಲಿ ಮಂಜುನಾಥ್ ಡಿಎಸ್ಪಿ ಮಧುಗಿರಿ ಡಿಕೆ ಶೇಖರ್ ಡಿ ಎಸ್ ಪಿ ಶಿರಾಜ್ಚಂದ್ರಶೇಖರ್ ಕೆ ಆರ್ ಡಿ ಎಸ್ ಪಿ ತುಮಕೂರ್ ರವರ ಮಾರ್ಗ ಸೂಚನೆ ಮೇರೆಗೆ ಅನಿಲ್ ಆರ್ ಪಿ ಪಿ ಐ ಕೊರಟಗೆರೆ ಸುರೇಶ್ ಪಿ ಐ ಪಾವಗಡ ಕಾಂತ ರೆಡ್ಡಿ ಪಿ ಐ ಬಡವನಹಳ್ಳಿ ಹನುಮಂತರಾಯಪ್ಪ ಸಿಪಿಐ ಮಧುಗಿರಿ ಅವಿನಾಶ್ ಟಿ ಐ ತುಮಕೂರು ನಗರ ಠಾಣೆ ರವರುಗಳನ್ನು ಒಳಗೊಂಡ ವಿಶೇಷ ಪತ್ತೆ ತಂಡಗಳನ್ನು ರಚಿಸಿದ್ದು ಸದರಿ ತಂಡವು ಈ ಕೆಳಕಂಡ ಆರೋಪಿಗಳನ್ನು ಪತ್ತೆ ಮಾಡಿರುತ್ತಾರೆ.

ವರದಿ : ಭರತ್ ಕೆ