ಲಕ್ಕಸಂದ್ರದ ರಾಯರ 354ನೇ ಆರಾಧನ ಮಹೋತ್ಸವ
ದೊಡ್ಡಬಳ್ಳಾಪುರ:ತಾಲೂಕಿನ,ತೂಬಗೆರೆ ಹೋಬಳಿಯ ,ಲಕ್ಕಸಂದ್ರಲ್ಲಿ ಶ್ರೀ ಶ್ರೀ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವವು 2025ರ ಆಗಸ್ಟ್ 11 ರಂದು (ಸೋಮವಾರ) ಭಕ್ತಿ ಭಾವಪೂರ್ಣವಾಗಿ ನೆರವೇರಿತು.
ಶ್ರೀ ಗುರು ರಾಘವೇಂದ್ರ ಸ್ವಾಮಿ ದೇವಸ್ಥಾನ, ಲಕ್ಕಸಂದ್ರ ದಲ್ಲಿ ನಡೆದ ಈ ಪವಿತ್ರ ಆರಾಧನೆಗೆ ಅನೇಕ ಭಕ್ತಾದಿಗಳು ಆಗಮಿಸಿದರು. ದಿನಪೂರ್ತಿ ನಡೆದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತರು ಭಕ್ತಿ ಪೂರ್ಣವಾಗಿ ಪಾಲ್ಗೊಂಡರು.
ಆರಾಧನಾ ಪ್ರಯುಕ್ತ ಬೆಳಿಗ್ಗೆ 7:00 ರಿಂದ 8:30 ರವರೆಗೆ ಗಣಹೋಮ, ಪಂಚಾಮೃತ ಅಭಿಷೇಕ, ಗೋ ಪೂಜೆ, ಹೋಮ, ದೀಪಾರಾಧನೆ, ನವಗ್ರಹ ಪೂಜೆ, ಚಕ್ರನ ಹೋಮ, ಮೋಕ್ಷಾಹುತಿ ಮತ್ತು ರಥ ಸಂಚಲನ ಜರುಗಿತು.
ಬೆಳಿಗ್ಗೆ 9:00 ರಿಂದ 11:30 ರವರೆಗೆ: ಕೃತಜ್ಞ ವಿದ್ಯಾ ಮೂರ್ತಿಗಳ ಅಧಿಷ್ಠಾನ ದೇವತೆಗಳ ಪೂಜಾ ಕಾರ್ಯಕ್ರಮ, ಶ್ರೀ ರಾಘವೇಂದ್ರ ಸ್ವಾಮಿಗಳ ಬ್ರಹ್ಮರಥೋತ್ಸವ, ನಿತ್ಯಾನ್ನ ಅಭಿಷೇಕ, ಪಂಚಾಮೃತ ಅಭಿಷೇಕ, ಗುರುಸ್ಮಾರಕ ಪಾರಾಯಣ ಹಾಗೂ ಅಲಂಕಾರ.
ಬೆಳಿಗ್ಗೆ 11:45 ರಿಂದ ಮಧ್ಯಾಹ್ನ 1:00 ರವರೆಗೆ: ಶ್ರೀ ಸೀತಾರಾಮ ಲಕ್ಷ್ಮಣ ಹನುಮಾನ್ ಸಮೇತ ಶ್ರೀ ಪ್ರಹ್ಲಾದ ರಾಯರ ಮಹಾ ರಥೋತ್ಸವ.
ಮಧ್ಯಾಹ್ನ 1:00 ಗಂಟೆಗೆ: ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಪಂಕ್ತಿಪ್ರಸಾದ ಹಾಗೂ ಅನ್ನದಾನ ಸೇವೆಯೊಂದಿಗೆ ಮಹಾಮಂಗಳಾರತಿ ನೆರವೇರಿತು.
ದೇವಾಲಯದಲ್ಲಿ ವಿವಿದ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೆಡೆದವು
ಬೆಳಿಗ್ಗೆ 10:00 ರಿಂದ 12:00 ರವರೆಗೆ: ಶ್ರೀ ಆಕಾಶ್ ದೀಕ್ಷಿತ್, ಮೈಸೂರ ಮತ್ತು ಸಂಗಡಿಗರಿಂದ ಗದು ನಮನ ದಾಸವಾಣಿ ಕಾರ್ಯಕ್ರಮ ಜರುಗಿತು.
ಗುರುಗಳ ಆರಾಧನಾ ಮಹೋತ್ಸವದಲ್ಲಿ ಎಲ್ಲಾ ಭಕ್ತಾದಿಗಳು ಪಾಲ್ಗೊಂಡು ತಮ್ಮ ತಮ್ಮ ಮನ-ಮನ-ಧನ ಸೇವೆಯನ್ನು ಸಲ್ಲಿಸಿ ಮಹಾ ಪ್ರಸಾದವನ್ನು ಸ್ವೀಕರಿಸಿದರು.
ದೂರದ ಊರುಗಳಿಂದ ಬಂದ ಭಕ್ತರು ಶ್ರದ್ದಾ ಭಕ್ತಿಯಿಂದ ಶ್ರೀ ಹನುಮಾಯುಗದ ಕೃಪೆಗೆ ಪಾತ್ರರಾದಂತೆ ಭಕ್ತರು ಪ್ರಾರ್ಥಿಸಿದರು.